ಮೂಲಸೌಕರ್ಯ, ಕುಡಿಯುವ ನೀರು ಪೂರೈಕೆಗೆ ಆದ್ಯತೆ

KannadaprabhaNewsNetwork |  
Published : Mar 29, 2026, 02:00 AM IST
ಫೋಟೋ ೨೮ಕೆಆರ್‌ಟಿ-೧:೧ಎ- ಕಾರಟಗಿಯ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಮಂಜುನಾಥ ಮೇಗೂರು ಶುಕ್ರವಾರ ಪುರಸಭೆಯ ೨೦೨೬-೨೭ ಸಾಲಿನ ಬಜೆಟ್ ಮಂಡನೆ ಮಾಡಿದರು. | Kannada Prabha

ಸಾರಾಂಶ

೨೦೨೫-೨೬ ಪ್ರಸಕ್ತ ವರ್ಷ ಪುರಸಭೆ ಆಸ್ತಿಗಳಿಂದ ೧೯೯.೮೭ಲಕ್ಷ ಆದಾಯ ನೀರಿಕ್ಷಿಸಿದ್ದು, ೨೦೨೫ರ ಅಂತ್ಯಕ್ಕೆ ₹೧೦೬.೦೫ ತೆರಿಗೆ ವಸೂಲಿ ಮಾಡಲಾಗಿದೆ

ಕಾರಟಗಿ: ಮೂಲ ಸೌಲಭ್ಯಗಳಿಗೆ ಪ್ರಥಮ ಆದ್ಯತೆ ನೀಡುವ ಜತೆಗೆ ಪಟ್ಟಣದ ಸೌಂದರೀಕರಣಕ್ಕೆ ಒತ್ತು ನೀಡಿ,ಆಸ್ತಿ ತೆರಿಗೆ ಸೇರಿದಂತೆ ಇನ್ನಿತರ ತೆರಿಗೆ ವಸೂಲಿ ಮೂಲಕ ಆದಾಯ ನಿರೀಕ್ಷೆಯಲ್ಲಿ ೨೦೨೬೨೭ರ ಸಾಲಿನ ಆಯವ್ಯಯದಲ್ಲಿ ಒಟ್ಟು ₹೧೩,೦೮ ಲಕ್ಷ ಉಳಿತಾಯ ಬಜೆಟ್‌ ಪುರಸಭೆ ಮಂಡಿಸಿದೆ.

ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ೨೦೨೬-೨೭ನೇ ಸಾಲಿನ ೧೦ನೇ ಬಜೆಟ್‌ನ್ನು ಮಂಡಿಸಿದ್ದು, ವಿವಿಧ ಮೂಲಗಳಿಂದ ಒಟ್ಟು ₹೨೧,೫೧ ಆದಾಯ ನಿರೀಕ್ಷಿಸಿ, ₹೨೧,೩೮ ಲಕ್ಷ ನಿರೀಕ್ಷಿತ ವೆಚ್ಚ ಮಾಡಿ ಒಟ್ಟು ₹೧೩.೦೮ ಲಕ್ಷ ಉಳಿತಾಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

೨೦೨೫-೨೬ ಪ್ರಸಕ್ತ ವರ್ಷ ಪುರಸಭೆ ಆಸ್ತಿಗಳಿಂದ ೧೯೯.೮೭ಲಕ್ಷ ಆದಾಯ ನೀರಿಕ್ಷಿಸಿದ್ದು, ೨೦೨೫ರ ಅಂತ್ಯಕ್ಕೆ ₹೧೦೬.೦೫ ತೆರಿಗೆ ವಸೂಲಿ ಮಾಡಲಾಗಿದೆ. ೨೦೨೬-೨೭ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹೧೮೫.೧೦ ಲಕ್ಷ ಆಸ್ತಿ ತೆರಿಗೆ ಆದಾಯ ವಸೂಲಿ ನೀರಿಕ್ಷಿಸಲಾಗಿದೆ. ಪುರಸಭೆ ವ್ಯಾಪ್ತಿಯ ೧೨ ಮಳಿಗೆಗಳಿದ್ದು, ಅವುಗಳಿಂದ ೨೦೨೫-೨೬ಕ್ಕೆ ₹೨೫ ಲಕ್ಷ ನಿರೀಕ್ಷಿಸಿದ್ದು, ಡಿಸೆಂಬರ್ ೨೦೨೫ ಅಂತ್ಯಕ್ಕೆ ₹೧.೮೩ ಲಕ್ಷ ವಸೂಲಾಗಿದೆ. ೨೦೨೬-೨೭ ನೇ ಸಾಲಿನಲ್ಲಿ ಬಾಡಿಗೆ ಹಿಂದಿನ ಸಾಲುಗಳ ಬಾಕಿಯೊಂದಿಗೆ ಖಾಲಿ ಇರುವ ಮಳಿಗೆ ಮುಂಬರುವ ವರ್ಷದಲ್ಲಿ ಲೀಲಾವು ಮಾಡುವುದಾಗಿ ಪರಿಗಣಿಸಿ ಒಟ್ಟು ₹೨.೨೮ ಲಕ್ಷ ಬಾಡಿಗೆ ಆದಾಯ ಅಂದಾಜಿಸಲಾಗಿದೆ ಎಂದರು.

ಪುರಸಭೆಯ ಎಸ್.ಎಫ್.ಸಿ.ಮುಕ್ತನಿಧಿ, ಎಸ್.ಎಫ್.ಸಿ.ಕುಡಿವ ನೀರಿನ ಅನುದಾನ, ೧೬ನೇ ಹಣಕಾಸು ಆಯೋಗದ ಅನುದಾನ ಹಾಗೂ ಇತರೆ ಅನುದಾನಗಳಡಿ ಸುಮಾರು ₹೬೩೬ಲಕ್ಷ ಅನುದಾನವನ್ನು ನೀರಿಕ್ಷಿಸಲಾಗಿದೆ. ಬೀದಿ ದೀಪಗಳ ಅಳವಡಿಕೆಗಾಗಿ ₹೨೦೦ ಲಕ್ಷ ಹಣ ನಿಗಡಿಪಡಿಸಲಾಗಿದೆ. ರಸ್ತೆಗಳು, ಕಲ್ಲುಹಾಸುಗಳು ಪಾದಚಾರಿ ರಸ್ತೆಗಳು ಮತ್ತು ರಸ್ತೆ ಪಕ್ಕದ ಚರಂಡಿ ನಿರ್ಮಾಣ ಹಾಗೂ ೨೦೨೬-೨೭ ನೇ ಸಾಲಿನ ೧೬ನೇ ಹಣಕಾಸು ಅನುದಾನದಿಂದ ₹೧೦೧ಲಕ್ಷ ಹಣ ನಿಗದಿಪಡಿಸಲಾಗಿದೆ.

ನೀರು ಸರಬರಾಜು ವ್ಯವಸ್ಥೆ ಉದ್ದೇಶಕ್ಕಾಗಿ ಕೊಳವೆ ಬಾವಿ ಕೊರೆಸಲು, ಪೈಪ್‌ಲೈನ್ ಸಂಪರ್ಕ ವ್ಯವಸ್ಥೆ, ಪಂಪ್ ಮೋಟಾರ್ ಅಳವಡಿಕೆಗೆ ₹೬೫ ಲಕ್ಷ ಹಣ ನಿಗದಿಪಡಿಸಿದ್ದು ಪಟ್ಟಣದ ಉದ್ಯಾನವನ ಅಭಿವೃದ್ಧಿಗಾಗಿ ₹೧೫ಲಕ್ಷ ಹಣ ನಿಗದಿಪಡಿಸಲಾಗಿದೆ. ೨೦೨೫-೨೬ ನೇ ಸಾಲಿನಲ್ಲಿ ಉದ್ದಿಮೆ ಪರವಾನಗಿಯಿಂದ ಡಿಸೆಂಬರ್ ಅಂತ್ಯಕ್ಕೆ ₹೭.೪೭ಲಕ್ಷ ಆದಾಯ ಸ್ವೀಕರಿಸಿದ್ದು ೨೦೨೬-೨೭ ನೇ ಸಾಲಿಗೆ ₹೯.೦೦ ಲಕ್ಷ ಆದಾಯ ನೀರಿಕ್ಷಿಸಲಾಗಿದೆ ಎಂದು ಅಧ್ಯಕ್ಷ ಮಂಜುನಾಥ ವಿವರಿಸಿದರು.

ಈ ವೇಳೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ್,ಉಪಾಧ್ಯಕ್ಷೆ ಸುಜಾತಾ ಭಜಂತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡಬಸವ ಬೂದಿ, ಮಾಜಿ ಅಧ್ಯಕ್ಷೆ ರೇಖಾ ಆನೆಹೊಸುರ, ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಫಾಯಿ ಕರ್ಮಚಾರಿಗಳ ಸೇವೆ ಅತ್ಯಮೂಲ್ಯ: ಜಿಲ್ಲಾಧಿಕಾರಿ ಸಿ ಎನ್. ಶ್ರೀಧರ್‌
ಹೆಣ್ಣಿನ ಸಾಮರ್ಥ್ಯ ಅಡುಗೆ ಮನೆಯಿಂದ ಆಕಾಶದಗಲಕ್ಕೆ-ಡಾ. ದಾನಮ್ಮನವರ