ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯಕ್ಕೆ ಆದ್ಯತೆ: ಕಂದಕೂರ

KannadaprabhaNewsNetwork |  
Published : Jun 21, 2025, 12:49 AM IST
ಗುರುಮಠಕಲ್‌ ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 2024-25ನೇ ಸಾಲಿನ ಲೆಕ್ಕ ಶಿರ್ಷಿಕ ಅಪೆಂಡಿಕ್ಸ್ ಇ ಅನುದಾನದ ಅಡಿಯಲ್ಲಿ, ಗುರುಮಠಕಲ್ ಮತಕ್ಷೇತ್ರದ ಮುಧೋಳ, ಯಲಗೇರಾ (ಎಸ್.ಎಚ್-10) ರಿಂದ ಆಂಧ್ರ ಗಡಿ (ಎಸ್.ಎಚ್-127) ಕಿ.ಮೀ. 59 ರಿಂದ 64ರ ವರೆಗೆ ರಸ್ತೆ ನಿರ್ಮಾಣ ಅಂದಾಜು ಮೊತ್ತ 4 ಕೋಟಿ ರು.ಗಳ ಕಾಮಗಾರಿಯ ಅಡಿಗಲ್ಲು ಕಾರ್ಯಕ್ರಮವನ್ನು ಶಾಸಕ ಶರಣಗೌಡ ಕಂದಕೂರ ನೆರವೇರಿಸಿದರು. | Kannada Prabha

ಸಾರಾಂಶ

Priority given to infrastructure in rural areas: Kandakura

-ಮಾಧ್ವಾರ; ರಸ್ತೆ ಕಾಮಗಾರಿಗೆ ಅಡಿಗಲ್ಲು | ಜನರ ಸಮಸ್ಯೆಗೆ ಶಾಸಕರಿಂದ ಪರಿಹಾರ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನ ಬಿಟ್ಟರೆ, ಬೇರಾವ ಅನುದಾನವೂ ನಮಗಿಲ್ಲ. ಸರ್ಕಾರ ಅನುದಾನ ನೀಡಿದಂತೆ ಗ್ರಾಮೀಣ ಪ್ರದೇಶಕ್ಕೆ ಮೂಲಭೂತ ಸೌಕರ್ಯ ಕಲ್ಪಸಲು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ಗುರುಮಠಕಲ್‌ ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 2024-25ನೇ ಸಾಲಿನ ಲೆಕ್ಕ ಶಿರ್ಷಿಕ ಅಪೆಂಡಿಕ್ಸ್ ಇ ಅನುದಾನದ ಅಡಿಯಲ್ಲಿ, ಗುರುಮಠಕಲ್ ಮತಕ್ಷೇತ್ರದ ಮುಧೋಳ, ಯಲಗೇರಾ (ಎಸ್.ಎಚ್-10) ರಿಂದ ಆಂಧ್ರ ಗಡಿ (ಎಸ್.ಎಚ್-127) ಕಿ.ಮೀ. 59 ರಿಂದ 64ರ ವರೆಗೆ ರಸ್ತೆ ನಿರ್ಮಾಣ ಅಂದಾಜು ಮೊತ್ತ 4 ಕೋಟಿ ರು.ಗಳ ಕಾಮಗಾರಿಯ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಕ್ಷೇತ್ರದ ನಗರ, ಗ್ರಾಮೀಣ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಈಗ ಕರಿಬೆಟ್ಟ-ನಸಲವಾಯಿ ರಸ್ತೆಗೆ 38 ಕೋಟಿ ನೀಡಲಾಗಿದೆ. ಜನರ ಬೇಡಿಕೆಯಂತೆ ಒಂದೇ ರಸ್ತೆಗೆ 7 ವರ್ಷದಲ್ಲಿ 50 ಕೋಟಿ ಖರ್ಚು ಮಾಡಲಾಗಿದೆ ಎಂದರು.

ಮುಖ್ಯಮಂತ್ರಿ ಕಾರ್ಯಕ್ರಮಕ್ಕೂ ಮುನ್ನ ನೀರಿನ ಸಮಗ್ರ ಸಮಸ್ಯೆಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆಯಾಗಿದೆ. 2 ವರ್ಷದಲ್ಲಿ ರಸ್ತೆ ಮೂಲ ಸೌಕರ್ಯ ಆಗಿದೆ. ಇನ್ನು ಗ್ರಾಮೀಣ ಪ್ರದೇಶದ ರಸ್ತೆ, ಕುಡಿವ ನೀರಿನ ವ್ಯವಸ್ಥೆ ಅನುದಾನ ಬಳಕೆ ಮಾಡಲಾಗುತ್ತದೆ ಎಂದರು. ಎಲ್ಲ ಅಧಿಕಾರಿಗಳು ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ, ಹೀಗೆ ಸಹಕಾರ ನೀಡಲು ಮನವಿ ಮಾಡಿದರು. ಮಾಧ್ವಾರ ಹೋಬಳಿ ಕೇಂದ್ರ ಮಾಡಬೇಕು ಎನ್ನುವ ಬೇಡಿಕೆ ಇದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು. ಜನರ ಬೇಡಿಕೆ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕರು ಭರವಸೆ ನೀಡಿದರು.

ಪರಿಹಾರ: ವೇದಿಕೆ ಕಾರ್ಯಕ್ರಮದ ಬಳಿಕ ಶಾಸಕ ಕಂದಕೂರ ಅವರು ಗ್ರಾಮೀಣ ಭಾಗದ ಜನರ ಸಮಸ್ಯೆ ಆಲಿಸಿದರು. ಸ್ಥಳದಲ್ಲಿಯೇ ಇದ್ದ ತಾಪಂ. ಅಧಿಕಾರಿ, ಜೆಸ್ಕಾಂ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಪಿಡಬ್ಲ್ಯೂಡಿ ಎಇಇ ಪರಶುರಾಮ ಮುಷ್ಟೂಕರ್, ತಾಪಂ ಇಒ ಅಮರೇಶ ಪಾಟೀಲ, ಅಮರನಾಥರಡ್ಡಿ ವಂಕಸಂಬ್ರ, ಬನ್ನಪ್ಪಗೌಡ ವಂಕಸಂಬ್ರ, ಶಂಕ್ರಪ್ಪ ಕಾಳಗಿ, ಶರಣಗೌಡ, ಸಾಯಪ್ಪ, ಗೋಪಾಲ, ಶಿವರಾಜ, ಜಾನಪ್ಪ, ಶಂಕರರಡ್ಡಿ ಯಲಸತ್ತಿ, ವೀರೇಂದ್ರರಡ್ಡಿ ಯಲಸ್ತಿ, ರಾಘವೇಂದ್ರ ರಡ್ಡಿ ವಡವಟ್, ಆನಂದ ವಡವಟ್, ಗುರುನಾಥರಡ್ಡಿ, ಮಲ್ಲಿಕಾರ್ಜುನ ಅರುಣಿ, ನರಸಪ್ಪ ಕವಡೆ, ಪರ್ವತರಡ್ಡಿ ಕಾಳಬೆಳಗುಂದಿ, ರಾಘವೇಂದ್ರ ಜೈಗ್ರಾಮ, ಭೀಮರಾಯ ಗುಂಡ್ಲಗುಂಟಾ ಇದ್ದರು.

-

20ವೈಡಿಆರ್‌8 : ಗುರುಮಠಕಲ್‌ ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 2024-25ನೇ ಸಾಲಿನ ಲೆಕ್ಕ ಶಿರ್ಷಿಕ ಅಪೆಂಡಿಕ್ಸ್ ಇ ಅನುದಾನದ ಅಡಿಯಲ್ಲಿ, ಗುರುಮಠಕಲ್ ಮತಕ್ಷೇತ್ರದ ಮುಧೋಳ, ಯಲಗೇರಾ (ಎಸ್.ಎಚ್-10) ರಿಂದ ಆಂಧ್ರ ಗಡಿ (ಎಸ್.ಎಚ್-127) ಕಿ.ಮೀ. 59 ರಿಂದ 64ರ ವರೆಗೆ ರಸ್ತೆ ನಿರ್ಮಾಣ ಅಂದಾಜು ಮೊತ್ತ 4 ಕೋಟಿ ಕಾಮಗಾರಿಯ ಅಡಿಗಲ್ಲು ಕಾರ್ಯಕ್ರಮವನ್ನು ಶಾಸಕ ಶರಣಗೌಡ ಕಂದಕೂರ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ