ವರದಕ್ಷಿಣೆ ಕಿರುಕುಳದಿಂದ ಸಾವು ಪ್ರಕರಣ, ಆರೋಪಿಗೆ ಜೀವಾವಧಿ ಶಿಕ್ಷೆ

KannadaprabhaNewsNetwork |  
Published : Jun 21, 2025, 12:49 AM IST

ಸಾರಾಂಶ

ಮಗಳು ನೇಣು ಹಾಕಿಕೊಂಡಿರುವ ವಿಷಯವನ್ನು ತಿಳಿದು ನಾನು ಹೋಗಿ ನೋಡಿದಾಗ ತಮ್ಮ ಮಗಳ ಮೇಲೆ ಹಲ್ಲೆ ಮಾಡಿ ಅವಳನ್ನು ಸಾಯಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು.

ಕನ್ನಡಪ್ರಭ ವಾರ್ತೆ ಕನಕಪುರ

ಕೊಲೆ ಆರೋಪದಡಿ ಬಂಧಿತನಾಗಿದ್ದ ವ್ಯಕ್ತಿಗೆ ಆರೋಪಿಗೆ ಕನಕಪುರದ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯವು ಎಸ್.ಸಿ ನಂ 5018/2021 ರಲ್ಲಿ ಪ್ರಕರಣವನ್ನು ವಿಚಾರಣೆ ಮಾಡಿ ಸದರಿ ಆರೋಪಿಯ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಅನಿಲ್ ಕುಮಾರ್ ಎಂಬಾತನಿಗೆ ಜೀವಾವಾಧಿ ಶಿಕ್ಷೆ ಹಾಗೂ 35,000 ರು. ದಂಡ ವಿಧಿಸಿ ತೀರ್ಪುನ್ನು ನೀಡಿದೆ.

ಪ್ರಕರಣದ ಹಿನ್ನೆಲೆ:

ತಮ್ಮ ಮಗಳಾದ ಅಶ್ವಿನಿಯನ್ನು ಪ್ರೀತಿಸಿ ಮದುವೆಯಾಗಿದ್ದ ಮರಳವಾಡಿ ಗ್ರಾಮದ ಅಯ್ಯಪ್ಪನ ಮಗ ಅನಿಲ್ ಕುಮಾರ್ ಎಂಬಾತ ತಮ್ಮ ಮಗಳ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿ ಯುವತಿಯ ತಂದೆ ದೂರು ನೀಡಿದ್ದರು. ಪ್ರೀತಿಸಿ ಮದುವೆಯಾಗಿದ್ದ ತಮ್ಮ ಮಗಳಿಗೆ ವರದಕ್ಷಿಣೆ ತರುವಂತೆ ಹಿಂಸೆ ನೀಡುತ್ತಿದ್ದನು ಎಂದು ದೂರಿನಲ್ಲಿ ಹೇಳಿದ್ದರು.

ದಿ. 14.05.2020 ರಂದು ರಾತ್ರಿ ತಮ್ಮ ಮಗಳು ನೇಣು ಹಾಕಿಕೊಂಡಿರುವ ವಿಷಯವನ್ನು ತಿಳಿದು ನಾನು ಹೋಗಿ ನೋಡಿದಾಗ ತಮ್ಮ ಮಗಳ ಮೇಲೆ ಹಲ್ಲೆ ಮಾಡಿ ಅವಳನ್ನು ಸಾಯಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು.

ದೂರಿನ ಆಧಾರದ ಮೇರೆಗೆ 15.05.2020 ರಂದು ಹಾರೋಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಮೊ.ಸಂ 163/ 2020 ಕಲಂ: 498(A), 304(ಬಿ), 34 ಐಪಿಸಿ ಹಾಗೂ 3 & 4 ಡಿ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಕೊಂಡು ಆರೋಪಿಯನ್ನುವಶಕ್ಕೆ ಪಡೆದು ಸಾಕ್ಷಾಧಾರ ಗಳನ್ನು ಸಂಗ್ರಹ ಮಾಡಿ ತನಿಖೆ ಪೂರ್ಣಗೊಳಿಸಿದ ನಂತರ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಸರ್ಕಾರಿ ವಕೀಲರಾದ ಎಂ. ರೂಪಲಕ್ಷ್ಮಿ ಸದರಿ ಪ್ರಕರಣದಲ್ಲಿ ವಾದಮಂಡಿಸಿದ್ದರು, ರಾಮನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಹಾರೋಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯಲ್ಲಿ ನಿಗಾವಹಿಸಿ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣದಲ್ಲಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆ ಕೆ ಪಿ ಸುದ್ದಿ 03:

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ