-ಸುರಪುರ: ಮುಸ್ಲಿಂ ಶಾದಿಮಹಲ್ ನೂತನ ಕಟ್ಟಡ ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ ಸುರಪುರ
ಮತಕ್ಷೇತ್ರ ವ್ಯಾಪ್ತಿಯ ಸರ್ವ ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಜಾತ್ಯತೀತವಾಗಿ ಸಮಾನ ಮನೋಭಾವದಿಂದ ಆಡಳಿತ ನಡೆಸಲಾಗುತ್ತಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.ನಗರದ ತರಕಾರಿ ಮಾರುಕಟ್ಟೆಯ ಹತ್ತಿರ ನಿರ್ಮಾಣಗೊಂಡ ಮಟನ್ ಮಾರುಕಟ್ಟೆಯ ನೂತನ ಕಟ್ಟಡ ಮತ್ತು ಖುರೇಷಿ ಮೊಹಲ್ಲಾದಲ್ಲಿ ನಡೆದ ಮುಸ್ಲಿಂ ಶಾದಿ ಮಹಲ್ ನೂತನ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಭಾರತದ ಸಂವಿಧಾನದಡಿಯಲ್ಲಿ ಎಲ್ಲರೂ ಸಮಾನರು. ಯಾವುದೇ ಕಾರಣಕ್ಕೂ ಎಲ್ಲದಕ್ಕೂ ಜಾತಿ ಮಾನದಂಡವಾಗಬಾರದು. ನಮ್ಮ ಕುಟುಂಬ ಎಲ್ಲ ಜಾತಿವರ್ಗದವರನ್ನು ಸಮಾನವಾಗಿ ಕಂಡಿದೆ. ನಮ್ಮ ತಂದೆ ರಾಜಾ ವೆಂಕಟಪ್ಪ ನಾಯಕರಂತೆ ಸಮಾನತೆಯ ತತ್ವವನ್ನು ಅಳವಡಿಸಿಕೊಂಡಿದ್ದೇನೆ. ನಿಮ್ಮೊಂದಿಗೆ ನಾವಿದ್ದೇವೆ ಎಂದರು.ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ, ರಾಜಾ ವಾಸುದೇವ ನಾಯಕ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠ್ಠಲ ಯಾದವ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಅಬ್ದುಲ್ ಗಫಾರಿ ನಗನೂರಿ, ನಿಂಗರಾಜ ಬಾಚಿಮಟ್ಟಿ, ಶಕೀಲ ಅಹ್ಮದ್, ಸುರೇಶ ತಂಬಾಕಿ, ನಗರಸಭೆ ಸದಸ್ಯರಾದ ಜುಮ್ಮಣ್ಣ ಕೆಂಗೂರಿ, ನಾಸಿರ್ ಕುಂಡಾಲ್, ಕಮ್ರುದ್ದೀನ್ ನಾರಾಯಣಪೇಟ, ಅಹಮದ್ ಶರೀಫ್, ಸುವರ್ಣ ಎಲಿಗಾರ, ಲಕ್ಷ್ಮಿ ಬಿಲ್ಲವ ಸೇರಿದಂತೆ ಇತರರಿದ್ದರು.
-------ಫೋಟೊ: ಸುರಪುರ ನಗರದ ತರಕಾರಿ ಮಾರುಕಟ್ಟೆಯ ಹತ್ತಿರ ನಿರ್ಮಾಣಗೊಂಡ ಮಟನ್ ಮಾರುಕಟ್ಟೆಯ ನೂತನ ಕಟ್ಟಡ ಮತ್ತು ಖುರೇಷಿ ಮೊಹಲ್ಲಾದಲ್ಲಿ ನಡೆದ ಮುಸ್ಲಿಂ ಶಾದಿ ಮಹಲ್ ನೂತನ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿ ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿದರು.4ವೈಡಿಆರ್8