ಗ್ರಾಮೀಣ, ಪಟ್ಟಣ ಪ್ರದೇಶಗಳಿಗೆ ಸಾರಿಗೆ ಬಸ್ ಸಂಚಾರಕ್ಕೆ ಅನುಕೂಲ
ಜಿಲ್ಲೆಯಲ್ಲೇ ಒಂದು ದೊಡ್ಡ ಕಂದಾಯ ಉಪವಿಭಾಗವಾಗಿರುವ ಅವಿಭಜಿತ ತರೀಕೆರೆ ವ್ಯಾಪಾರ ವಹಿವಾಟು, ಜನ, ವಾಹನ ಸಂಚಾರ, ಸರಕು ಸಾಗಾಣಿಕೆ ಇತ್ಯಾದಿ ಸೇರಿದಂತೆ ಪ್ರಮುಖ ಪ್ರವಾಸಿ ತಾಣವೂ ಆಗಿರುವ ತಾಲೂಕಿನಲ್ಲಿ ಮೂಲಭೂತ ಅವಶ್ಯಕತೆಗಳು ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದ್ದರೂ ಅಗತ್ಯವಿರುವ ಬಸ್ ಸಂಚಾರ ವ್ಯವಸ್ಥೆ ಮಾತ್ರ ಸುಸೂತ್ರವಾಗಿಲ್ಲ. ಈ ನಿಟ್ಟಿನಲ್ಲಿ ತರೀಕೆರೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಡಿಪೋ ಸ್ಥಾಪಿಸುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ ಎಂಬುದು ಜನರ ಆಶಯವಾಗಿದೆ.
ರಾಷ್ಚ್ರೀಯ ಹೆದ್ದಾರಿ 206ರಲ್ಲಿರುವ ತರೀಕೆರೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ಧಾಣವನ್ನು ಮೇಲ್ದರ್ಜೆಗೇರಿಸುವ ಯೋಜನೆ ಸಿದ್ಧವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇದಕ್ಕೆ ಪೂರಕವಾಗಿ ಇಲ್ಲಿ ಕೆ.ಎಸ್.ಆರ್.ಟಿ.ಸಿ.ಡಿಪೋ ಸ್ಥಾಪನೆ ಮಾಡಿ ತಾಲೂಕು ಕೇಂದ್ರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಂಚರಿಸಲು ಹೆಚ್ಚಿನ ಎಕ್ಸ್ ಪ್ರೆಸ್ ಹಾಗೂ ಲೋಕಲ್ ಬಸ್ಸುಗಳ ಸೌಲಭ್ಯ ಪ್ರಯಾಣಿಕರಿಗೆ ಕಲ್ಪಿಸುವುದು ಉಪಯುಕ್ತ ಎಂಬುದನ್ನು ಅಲ್ಲಗಳೆಯುವಂತಿಲ್ಲ.ತರೀಕೆರೆ ತಾಲೂಕಿನಲ್ಲಿ ಕೆ.ಎಸ್.ಆರ್.ಟಿ.ಸಿ.ಡಿಪೋ ಸ್ಥಾಪಿಸಲು ಶಾಸಕ ಶ್ರೀನಿವಾಸ್ ಅವರು ಜಾಗ ಮಂಜೂರು ಮಾಡಿಸಿ ರುವುದು ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಮೇಲ್ದರ್ಜೆ ಮತ್ತು ಡಿಪೋ ಸ್ಥಾಪಿಸುವ ಕಾರ್ಯಕ್ಕೆ ಭರವಸೆ ಮೂಡಿಸಿದೆ. ಈ ಕಾರ್ಯ ನೆರವೇರಲು ಸಾರ್ವಜನಿಕರ ಆದ್ಯತೆ, ಆಶಯದೊಂದಿಗೆ ಸರ್ಕಾರದ ಇಚ್ಚಾಶಕ್ತಿಯೂ ಮುಖ್ಯ. ಆಗ ಮಾತ್ರ ತರೀಕೆರೆಯಂತಹ ತಾಲೂಕು ಅಭಿವೃದ್ಧಿ ದೃಷ್ಟಿಯಿಂದಲೂ ಗುರುತಿಸಿಕೊಳ್ಳಲು ಸಾಧ್ಯ.
ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸಂಪರ್ಕ: ಶಾಸಕ ಜಿ.ಎಚ್.ಶ್ರೀನಿವಾಸ್
ತರೀಕೆರೆ ತಾಲೂಕಿನಲ್ಲಿ ಕೆ.ಎಸ್.ಆರ್.ಟಿ.ಸಿ.ಡಿಪೋ ಸ್ಥಾಪಿಸಲು ನಾನು ಈ ಹಿಂದೆ ಶಾಸಕನಾಗಿದ್ದಾಗ ಸಮೀಪದ ಹೊಸೂರು ಬಳಿ 4 ಎಕರೆ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಿಸಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪಟ್ಟಣದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ಮೇಲ್ದರ್ಜೇಗೇರಿಸುವ ಜೊತೆಗೆ ಡಿಪೋ ಸ್ಥಾಪಿಸಿ ತರೀಕೆರೆ ವಿಧಾನ ಸಭಾ ಕ್ಷೇತ್ರದ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸಂಪರ್ಕ ಹೆಚ್ಚಿಸುವುದಾಗಿ ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.---- ಕೋಟ್--
ತರೀಕೆರೆ ವಿಧಾನಸಭಾ ಕ್ಷೇತ್ರ ಅನೇಕ ಪ್ರವಾಸಿ ತಾಣ, ಪ್ರಮುಖ ವಿದ್ಯಾ ಕೇಂದ್ರ, ಧಾರ್ಮಿಕ ಕ್ಷೇತ್ರ ಹಾಗೂ ಬೃಹತ್ ಕೃಷಿ ಉತ್ಪನ್ನ ಮಾರುಕಟ್ಟೆ-ಉಪ ಮಾರುಕಟ್ಟೆಗಳನ್ನು ಹೊಂದಿದೆ. ಈ ಎಲ್ಲ ಪ್ರದೇಶಗಳಿಗೆ ಹೆಚ್ಚಿನ ಸಾರಿಗೆ ಸಂಪರ್ಕ ಅತ್ಯಗತ್ಯ ವಾಗಿದೆ. ಆದುದರಿಂದ ಕೆ.ಎಸ್.ಆರ್.ಟಿ.ಸಿ.ಡಿಪೋ ಸ್ಥಾಪಿಸಿ ಲೋಕಸ್ ಬಸ್ಸು, ಎಕ್ಸ್.ಪ್ರೆಸ್. ಬಸ್ಸುಗಳ ವ್ಯವಸ್ಥೆ ಮಾಡಿದರೆ ತರೀಕೆರೆ ಮತ್ತು ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ತರೀಕೆರೆ ಅಭಿವೃದ್ಧಿಗು ಕಾರಣವಾಗಲಿದೆ.- ಟಿ.ಆರ್.ಶ್ರೀಧರ್, ಮಾಜಿ ನಿರ್ದೇಶಕ, ತರೀಕೆರೆ ಕೃ.ಉ.ಮಾ.ಸಮಿತಿ 28ಕೆಟಿಆರ್.ಕೆ.1ಃ)
ತರೀಕೆರೆ ಸಮೀಪದ ಹೊಸೂರು ಗ್ಲಾಮದ ಬಳಿ ಕೆ.ಎಸ್.ಆರ್.ಟಿ.ಸಿ. ನಿಗಮ ಸ್ಥಳ28ಕಟಿಆರ್.ಕೆ.2ಃ ಶಾಸಕ ಜಿ.ಎಚ್.ಶ್ರೀನಿವಾಸ್28ಕೆಟಿಆರ್.ಕೆ.3ಃ ಟಿ.ಆರ್.ಶ್ರೀಧರ್ ಕೃ.ಉ.ಮಾ.ಸಮಿತಿ ಮಾಜಿ ನಿರ್ದೇಶಕ ತರೀಕೆರೆ