ಕನ್ನಡಪ್ರಭ ವಾರ್ತೆ ಬೆಂಗಳೂರು
ಶುಕ್ರವಾರ ನಗರದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಮಾರು 35,000 ಕನ್ನಡ ಶಿಲಾಶಾಸನಗಳು, ಪ್ರಾಚೀನ ಹಸ್ತಪ್ರತಿಗಳು ಮತ್ತು ತಾಳೆಗರಿಗಳ ಡಿಜಿಟಲೀಕರಣಗೊಳಿಸಬೇಕು. ಪ್ರತಿಯೊಬ್ಬರು ತಮ್ಮ ಮನೆ ಮತ್ತು ಕಚೇರಿಗಳಲ್ಲಿ ಪ್ರತಿದಿನ ಒಂದು ಕನ್ನಡ ಪದ, ಗಾದೆ ಅಥವಾ ನುಡಿಗಟ್ಟನ್ನು ಇತರರಿಗೆ ಪರಿಚಯಿಸಬೇಕು. ಕನ್ನಡ ಪುಸ್ತಕಗಳನ್ನು ಓದುವ ಜೊತೆಗೆ ಅವುಗಳನ್ನು ಇತರರು ಕೂಡ ಓದುವಂತೆ ಪ್ರೇರೇಪಿಸಬೇಕು ಎಂದರು.
ಇಂದಿನ ಪೀಳಿಗೆಯಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಿದೆ. ಮನೆಯೊಳಗೆ ಕನ್ನಡವೇ ಪ್ರಧಾನ ಭಾಷೆಯಾಗಬೇಕು. ಪಾಲಕರು ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡುವ ಮೂಲಕ ಭಾಷೆಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಅವರು ಸಲಹೆ ನೀಡಿದರು.ಎಫ್‌ಕೆಸಿಸಿಐ ಅಧ್ಯಕ್ಷ ಟಿ. ಸಾಯಿರಾಂ ಪ್ರಸಾದ್ ಮಾತನಾಡಿ, ನಾವು ಕೇವಲ ವ್ಯಾಪಾರ, ವಾಣಿಜ್ಯ ವಿಚಾರಕ್ಕೆ ಮಾತ್ರ ಸೀಮಿತವಲ್ಲ. ಕರ್ನಾಟಕದ ನಾಡು-ನುಡಿ, ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಪರವಾಗಿಯೂ ನಿಂತಿರುತ್ತೇವೆ ಎಂದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ. ಸಿ.ಎ. ಕಿಶೋರ್, ಕೆ. ಧನಪಾಲ್, ಪರಮೇಶ್ವರ ಕೆ, ಡಾ. ಪಿಚ್ಚಳ್ಳಿ ಶ್ರೀನಿವಾಸ, ಕುಮಾರಿ ಯಶಸ್ವಿನಿ ಎಸ್, ಯೋಗಿ ಮಹೇಶ್ ಜಿ, ಪಂಡಿತ್ ವಿಶ್ವನಾಥ್ ನಾಕೋಡ, ಡಾ. ವೇಣುಗೋಪಾಲ್ ಕೆ.ಆರ್, ವೇಣುಗೋಪಾಲ ಜಯಚಂದ್ರ ಮತ್ತು ಸುರೇಶ್ ಮೂನ ಅವರಿಗೆ ಎಫ್‌ಕೆಸಿಸಿಐ ಕನ್ನಡ ನಾಡು ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.