ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ಸಿಗಲಿ: ರಿಯಾಜ್‌ ಅಹ್ಮದ ರೋಣ

KannadaprabhaNewsNetwork |  
Published : May 11, 2026, 02:30 AM IST
ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಇಂದು ಆಧುನಿಕ ಶಿಕ್ಷಣ ಮೌಲ್ಯಗಳಿಂದ ದೂರವಾಗುತ್ತಿರುವುದು ವಿಷಾದಕರ. ಆದ್ದರಿಂದ ಪ್ರಸ್ತುತ ಶಿಕ್ಷಣ ಸಂಸ್ಥೆಗಳು ಮೌಲ್ಯಯುತ ಶಿಕ್ಷಣ ನೀಡಬೇಕು.

ನರಗುಂದ: ಶಿಕ್ಷಣವೇ ಎಲ್ಲದಕ್ಕೂ ಭದ್ರ ಬುನಾದಿ. ಅದರ ಮೂಲಕ ಎಲ್ಲವನ್ನು ಸಾಧಿಸಲು ಸಾಧ್ಯ. ಮೌಲ್ಯಯುತ ಶಿಕ್ಷಣ ಅಗತ್ಯವಿದೆ. ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ರಾಜ್ಯ ಇಸ್ಲಾಮಿಕ್ ಸೊಸೈಟಿ ಕಾರ್ಯದರ್ಶಿ ರಿಯಾಜ್‌ ಅಹ್ಮದ ರೋಣ ತಿಳಿಸಿದರು.

ಭಾನುವಾರ ಪಟ್ಟಣದ ಕಾರ್ಮಿಕ ಭವನದಲ್ಲಿ ಮಿಸಬಾ ಪಬ್ಲಿಕ್ ಶಾಲೆ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಹುಬ್ಬಳ್ಳಿಯ ಸನಾ ಎಜುಕೇಶನ್ ಸಂಸ್ಥೆ ಹಾಗೂ ಮಿಸಬಾ ಪಬ್ಲಿಕ್ ಶಾಲೆ ವಿಲೀನ ಸಮಾರಂಭದಲ್ಲಿ ಮಾತನಾಡಿದರು.

ಇಂದು ಆಧುನಿಕ ಶಿಕ್ಷಣ ಮೌಲ್ಯಗಳಿಂದ ದೂರವಾಗುತ್ತಿರುವುದು ವಿಷಾದಕರ. ಆದ್ದರಿಂದ ಪ್ರಸ್ತುತ ಶಿಕ್ಷಣ ಸಂಸ್ಥೆಗಳು ಮೌಲ್ಯಯುತ ಶಿಕ್ಷಣ ನೀಡಲು ಮಿಸಬಾ, ಸನಾ ಸಂಸ್ಥೆ ಒಂದಾಗಿ ಹೊಸ ವಿದ್ಯಾಕ್ರಾಂತಿಗೆ ಮುಂದಾಗಿವೆ. ಅವುಗಳ ಮೂಲಕ ಗುಣಾತ್ಮಕ ಶಿಕ್ಷಣ ಪಡೆದು ಧನಾತ್ಮಕ ಚಿಂತನೆ ನಡೆಸಬೇಕು. ಶಿಕ್ಷಣ ಪಡೆದು ಸಮಾಜದ ಒಳಿತಿಗೆ ನಿರಂತರ ಕೊಡುಗೆ ನೀಡಬೇಕೆಂದರು.ಹುಬ್ಬಳ್ಳಿ ಸನಾ ಎಜುಕೇಶನ್ ಟ್ರಸ್ಟಿ ಅಶ್ರಫ್ ಅಲಿ ಬಸೀರ್ ಆಹ್ಮದ ಮಾತನಾಡಿ, ಸನಾ ಶಿಕ್ಷಣ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಮೂಡಿಸಿದೆ. ಹೊಸ ಹೊಸ ಉದ್ಯೋಗ ನೀಡುವ ತರಬೇತಿ ಶಿಕ್ಷಣ ನೀಡುವ ಕೇಂದ್ರ ಆರಂಭಿಸಿವೆ. ಅದರ ಮೂಲಕ ಹೊಸ ಕ್ರಾಂತಿಗೆ ನಾಂದಿ ಹಾಡಿದೆ ಎಂದರು. ಟ್ರಸ್ಟಿ ಅಬ್ದುಲ್ ರೆಹಮಾನ್ ಮುಲ್ಲಾ ಮಾತನಾಡಿ, ಮದರಸಾ ಮೂಲಕ ಶಿಕ್ಷಣ ನೀಡುತ್ತಿರುವ ಮಿಸಬಾ ಪಬ್ಲಿಕ್ ಶಾಲೆ ಪಟ್ಟಣದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೊಸತನ ಮೂಡಿಸಿದೆ. ಈಗ ಸನಾ ಜತೆ ಸೇರಿ ಮತ್ತಷ್ಟು ಉತ್ತಮ ಕಾರ್ಯ ಮಾಡಲಿದೆ ಎಂದರು.

ನಿವೃತ್ತ ಉಪನ್ಯಾಸಕ ಎಂ.ಎಸ್. ಯಾವಗಲ್ ಮಾತನಾಡಿದರು. ಅತಿಥಿಗಳಾಗಿ ಹುಬ್ಬಳ್ಳಿಯ ರಿಯಾಝುಲ್ಲಾ ಉಲೂಮ ಅಲಜೀದ್ ಅರೇಬಿಕ್ ಕಾಲೇಜಿನ ಚೇರಮನ್ ಮೌಲಾನಾ ಅಹ್ಮದ್ ಸಿರಾಜ ಉಮ್ರಿ ಖುಸ್ಮಿ, ಸನಾ ಎಜುಕೇಶನ್ ಗ್ರುಪ್ ಚೇರ್ಮನ್ ಎಂ.ಎಚ್. ಮಳಗಿ, ಮಾಜಿ ಪುರಸಭೆ ಅಧ್ಯಕ್ಷ ಸಿಕಂದರ್ ಪಠಾಣ, ಡಾ. ಎಫ್.ಕೆ. ಸವದತ್ತಿ, ಮೋಹನ ಮಂಗನಹಳ್ಳಿ, ಡಾ. ಅಮೀನ್ ಹೂಯಿಲಗೋಳ, ಹಸನ್ ನವದಿ, ಮೆಹಬೂಬ ಅಲಿ ಅದ್ಲಿ, ಎ.ಎಂ. ಕಡಕೋಳ, ಮಿಸಬಾ ಚೇರಮನ್ ಎಚ್.ಎಂ. ಪಾಣಿಗಟ್ಟಿ, ಕಾರ್ಯದರ್ಶಿ ಐ.ಎ. ಚೌದ್ರಿ, ಖಜಾಂಚಿ ಡಿ.ಎಂ. ನಾಯ್ಕರ್, ನಿರ್ದೇಶಕರಾದ ಎಸ್.ಎಂ. ಬಿಜಲಿಖಾನ್, ಯರಗಟ್ಟಿ ಹಾಗೂ ಸನಾ ಎಜುಕೇಷನ್ ಗ್ರುಪ್‌ನ ಸದಸ್ಯರು, ಮಿಸಬಾ ಎಜುಕೇಶನ್ ಟ್ರಸ್ಟ್‌ನ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಮಿಕರ ಕಲ್ಯಾಣಕ್ಕೆ ಕಾರ್ಮಿಕ ಸ್ನೇಹಿ ಯೋಜನೆಗಳು ಅಗತ್ಯ: ಸತೀಶ್
ಸಮಾಜವನ್ನು ಸನ್ಮಾರ್ಗದೆಡೆಗೆ ಸಾಗಿಸಿದ ಮಲ್ಲಮ್ಮ