)
ಕನ್ನಡಪ್ರಭವಾರ್ತೆ ಬೆಂಗಳೂರು
ಆರೋಪಿಗಳಾದ ಶ್ರೀಕಾಂತ್ ಹಾಗೂ ಪರಪ್ಪನ ಅಗ್ರಹಾರ ಜೈಲಿನ ಮಾಜಿ ಡಿಐಜಿ ಸೋಮಶೇಖರ್, ಕೈದಿ ಶಂಕರ್ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡು ಸುಪ್ರೀಂಕೋರ್ಟ್‌ನ ಆದೇಶ ನಕಲು ಮಾಡಿ ಕೈದಿ ಎ.ಶಂಕರ್‌ನನ್ನು ಜೈಲಿನಿಂದ ಬಿಡುಗಡೆ ಮಾಡಿಸಿರುವುದು ತನಿಖೆಯಿಂದ ಬಯಲಾಗಿದೆ.
ಅಷ್ಟೇ ಅಲ್ಲದೇ ತನಿಖೆ ವೇಳೆ ಶಂಕರ್ ಪತ್ನಿಗೆ ಡಿಐಜಿ ಸೋಮಶೇಖರ್ ವಿಡಿಯೋ ಕರೆ ಮಾಡಿರುವುದು ಪತ್ತೆಯಾಗಿದ್ದು, ವಿಡಿಯೋ ಕಾಲ್‌ನಲ್ಲಿ ಆಕೆಗೆ ವಿವಸ್ತ್ರವಾಗುವಂತೆ ಹೇಳಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ಸೋಮಶೇಖರ್ ಅವರ ಮೊಬೈಲ್ ಅನ್ನು ವಶಕ್ಕೆ ಪಡೆದು ಎಫ್ಎಸ್ಎಲ್‌ಗೆ ಕಳುಹಿಸಿದ್ದಾರೆ. ಸೋಮಶೇಖರ್ ಅವರ ಮೇಲೆ ಕೈದಿಗಳನ್ನು ನೋಡಲು ಬರುತ್ತಿದ್ದ ಮಹಿಳೆಯರ ಸಂಪರ್ಕ ಸಾಧಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪಗಳು ಕೇಳಿ ಬಂದಿವೆ. ಪತ್ನಿಗೆ ಕೈದಿ ಕೈಕೊಟ್ಟಿದ್ದರಿಂದ ಪ್ರಕರಣ ಬಹಿರಂಗ!:ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಕೈದಿ ಶಂಕರ್ ಬಿಡುಗಡೆಯಾದ ಪ್ರಕರಣದ ತನಿಖೆ ವೇಳೆ ಹಲವು ಸ್ಫೋಟಕ ವಿಚಾರಗಳು ಬಯಲಾಗಿವೆ. ಬಿಡುಗಡೆಯ ನಂತರ ಪತ್ನಿಗೆ ಕೈದಿ ಶಂಕರ್ ಕೈಕೊಟ್ಟಿದ್ದರಿಂದ ಈ ಪ್ರಕರಣ ಬಹಿರಂಗವಾಗಿದೆ ಎನ್ನಲಾಗಿದೆ. ಜೈಲಿನಿಂದ ಬಿಡುಗಡೆಯಾದ ತನ್ನ ಪತಿ ಮತ್ತೊಂದು ಮದುವೆಯಾಗಿದ್ದಕ್ಕೆ ಕೆರಳಿದ ಪತ್ನಿ ಆಪ್ತರ ಮುಂದೆ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ ಇದರಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ಕೈದಿ ಶಂಕರ್ ಬಿಡುಗಡೆಯ ಬಗ್ಗೆ ಕಾರಾಗೃಹ ಇಲಾಖೆಯ ಡಿಜಿಪಿಗೆ ಅನಾಮಧೇಯ ಪತ್ರ ಬಂದಿತ್ತು. ಅದರ ಆಧಾರದ ಮೇಲೆ ಕಾರಾಗೃಹ ಇಲಾಖೆ ತನಿಖೆ ನಡೆಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಶಂಕರ್ ಅಪಹರಣ, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. ಜೈಲಿಗೆ ಭೇಟಿ ನೀಡುತ್ತಿದ್ದ ಶಂಕರ್ ಪತ್ನಿಯನ್ನು ಮೊದಲು ಜೈಲಿನಲ್ಲಿ ಎಸ್‌ಡಿಎ ಸಿಬ್ಬಂದಿಯಾಗಿದ್ದ ಶ್ರೀಕಾಂತ್ ಪರಿಚಯ ಮಾಡಿಕೊಂಡಿದ್ದ. ನಂತರ ಶ್ರೀಕಾಂತ್ ಆಕೆಯನ್ನು ಡಿಐಜಿ ಸೋಮಶೇಖರ್‌ಗೆ ಪರಿಚಯಿಸಿದ್ದ. ನಂತರ ಇಬ್ಬರು ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು. 2018ರಲ್ಲಿ ಪರಪ್ಪನ ಅಗ್ರಹಾರ ಜೈಲಿನ ಅಧೀಕ್ಷಕರಾಗಿದ್ದ ಸೋಮಶೇಖರ್ ಸುಪ್ರೀಂಕೋರ್ಟ್‌ನ ಆದೇಶವನ್ನು ನಕಲು ಮಾಡಿಸಿ ಕೈದಿ ಶಂಕರ್ ಬಿಡಗಡೆಯಾಗಲು ಸಹಾಯ ಮಾಡಿದ್ದರು.ನಕಲಿ ದಾಖಲೆ ಸೃಷ್ಟಿಸಲು ಹೇಳಿದ್ದೇ ಡಿಐಜಿ: