ಕೇಂದ್ರದಿಂದ ಅಂಚೆ ಇಲಾಖೆ ಖಾಸಗಿಕರಣ

KannadaprabhaNewsNetwork | Published : Dec 27, 2024 12:48 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಅಂಚೆ ಇಲಾಖೆಯನ್ನು ಖಾಸಗಿಕರಣದತ್ತ ಕೊಂಡೊಯುತ್ತಿದ್ದು, ಈಗಿನಿಂದಲೇ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಮಹಾದೇವಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಅಂಚೆ ಇಲಾಖೆಯನ್ನು ಖಾಸಗಿಕರಣದತ್ತ ಕೊಂಡೊಯುತ್ತಿದ್ದು, ಈಗಿನಿಂದಲೇ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಾಗಿದೆ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಮಹಾದೇವಯ್ಯ ಹೇಳಿದರು.

ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ಗ್ರಾಮೀಣ ಅಂಚೆ ನೌಕರರ ಸಂಘದ ದೈವಾರ್ಷಿಕ ಅಧಿವೇಶನದಲ್ಲಿ ಅವರು ಮಾತನಾಡಿದರು.

ಎಂಟನೇ ವೇತನ ಆಯೋಗದ ರಚನೆಗಾಗಿ ಹೋರಾಟ ಮಾಡಬೇಕಾದ ಪ್ರಸಂಗ ಬಂದಿದೆ. ಅದಕ್ಕಾಗಿ ಪೂರ್ವ ತಯಾರಿ ಇರಬೇಕು ಎಂದು ಹೇಳಿದರು.ಸಿದ್ದಲಿಂಗೇಶ್ವರ ಮಠದ ಸಿದ್ದಲಿಂಗ ಶ್ರೀಗಳು ಆಶೀರ್ವಚನ ನೀಡಿ, ಪ್ರಮಾಣಿಕ ಸೇವೆ ಸಲ್ಲಿಸುವವರಲ್ಲಿ ಅಂಚೆ ಇಲಾಖೆ ಮತ್ತು ಗ್ರಾಮೀಣ ಅಂಚೆ ಇಲಾಖೆ ನೌಕರರು ಮುಂಚೂಣಿಯಲ್ಲಿರುತ್ತಾರೆ. ಆದರೆ ಗ್ರಾಮೀಣ ಅಂಚೆ ನೌಕರರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸೂಕ್ತವಾಗಿ ಸ್ಪಂದಿಸಿರುವುದಿಲ್ಲ, ಮುಂದಿನ ದಿನಮಾನಗಳಲ್ಲಿ ಅವರ ಬೇಡಿಕೆಗಳು ಈಡೇಸುವ ಕಾರ್ಯ ಮಾಡಬೇಕು ಎಂದು ಹೇಳಿದರು.ಬೆಂಗಳೂರು ವಲಯದ ಮಾಜಿ ವಲಯ ಕಾರ್ಯದರ್ಶಿ ಕೆ.ಎಸ್.ರುದ್ರೇಶಿ ಮಾತನಾಡಿ, ಗ್ರಾಮೀಣ ಅಂಚೆ ನೌಕರರು ಏನೇ ಸೌಲಭ್ಯ ಪಡೆದುಕೊಳ್ಳಬೇಕಾದರೆ ಹೋರಾಟ ಮಾಡಿ ಪಡೆದುಕೊಳ್ಳಬೇಕು. ಇಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಾಣಗೊಂಡಿದೆ. ಗ್ರಾಮೀಣ ಅಂಚೆ ನೌಕರರಿಗೆ ಆವೈಜ್ಞಾನಿಕ ಟಾರ್ಗೆಟ್‌ ಕೊಡುತ್ತಿದ್ದಾರೆ. ಇದರಿಂದ ನೌಕರರು ಮಾನಸಿಕವಾಗಿ ಹತಾಶೆಗೊಂಡಿದ್ದಾರೆ. ಅದಕ್ಕಾಗಿ ಎಲ್ಲ ನೌಕರರು ಸಂಘಟನೆ ಸದಸ್ಯರಾಗಬೇಕು, ಸಂಘಟನೆಯ ಜೊತೆಗೆ ಇರಬೇಕು, ಅವಶ್ಯಕತೆ ಬಂದಾಗ ಹೋರಾಟಕ್ಕೆ ಸಿದ್ದರಾಗಬೇಕು ಎಂದು ಕರೆ ನೀಡಿದರು.

ವಲಯ ಕಾರ್ಯದರ್ಶಿ ರಾಜಕುಮಾರ, ಆರ್.ಆರ್. ಎಂ.ಎಂ.ಕುರಹಟ್ಟಿ, ಕಾನೂನು ಸಲಹೆಗಾರ ಎಸ್.ಹೆಚ್.ಮಂಜುನಾಥ, ತಾಪಂ ಮಾಜಿ ಅಧ್ಯಕ್ಷ ರಾಹುಲ ಕುಬಕಡ್ಡಿ, ಇಬ್ರಾಹಿಂ ಬಿದರಕುಂದಿ, ಗುರು ಬೆಳ್ಳುಬ್ಬಿ, ಎಲ್.ಪಿ.ಹೂಗಾರ ಮುಂತಾದವರು ಇದ್ದರು.

ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸುಭಾಸ ಥೋರತ, ಖಜಾಂಚಿಯಾಗಿ ಎಸ್.ಆರ್ ನರಳೆ (ನಾದ ಕೆಡಿ) ಕಾರ್ಯದರ್ಶಿಯಾಗಿ ಗುರು ಬೆಳ್ಳುಬ್ಬಿ (ಜೈನಾಪೂರ) ಹಾಗೂ ಇತರೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

Share this article