ಕೋಲಿ ಸಮಾಜದ ಕುರಿತು ಮಾತನಾಡುವ ನೈತಿಕತೆಯಿಲ್ಲ ಪ್ರಿಯಾಂಕ್‌ ಖರ್ಗೆ ಅವರಿಗೆ ಇಲ್ಲ

ಪ್ರಧಾನಿ ನರೇಂದ್ರ ಮೊದಿಯವರು ಕಳೆದ ಲೊಕಸಭೆ ಚುನಾವಣೆ ಸಂದರ್ಭದಲ್ಲಿ ಕೋಲಿ ಸಮಾಜವನ್ನು ಎಸ್‌ಟಿ ಸೇರಿಸುವ ಭರವಸೆಯನ್ನು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ತಳವಾರ, ಪರಿವಾರ ಸಮಾಜಗಳನ್ನು ಎಸ್.ಟಿ ಸೇರಿಸಿ ನುಡಿದಂತೆ ನಡೆದಿದ್ದಾರೆ

KannadaprabhaNewsNetwork | Published : Apr 27, 2024 7:46 PM IST / Updated: Apr 28 2024, 01:17 AM IST

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಪ್ರಧಾನಿ ನರೇಂದ್ರ ಮೊದಿಯವರು ಕಳೆದ ಲೊಕಸಭೆ ಚುನಾವಣೆ ಸಂದರ್ಭದಲ್ಲಿ ಕೋಲಿ ಸಮಾಜವನ್ನು ಎಸ್‌ಟಿ ಸೇರಿಸುವ ಭರವಸೆಯನ್ನು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ತಳವಾರ, ಪರಿವಾರ ಸಮಾಜಗಳನ್ನು ಎಸ್.ಟಿ ಸೇರಿಸಿ ನುಡಿದಂತೆ ನಡೆದಿದ್ದಾರೆ. ಆದರೆ ಪ್ರಿಯಾಂಕ್ ಖರ್ಗೆ ಕಳೆದ ೧೫ ವರ್ಷಗಳಿಂದ ಅಧಿಕಾರಕ್ಕೆ ಬರಲು ಕೋಲಿ ಸಮಾಜದ ಮತಗಳನ್ನು ಪಡೆದು ಅವರಿಗೆ ಎಸ್.ಟಿ ಸೇರಿಸದೇ ಮೊಸ ಮಾಡಿದ್ದಾರೆ ಹೀಗಾಗಿ ಅವರಿಗೆ ಕೋಲಿ ಸಮಾಜದ ಕುರಿತು ಮಾತನಾಡುವ ನೈತಿಕತೆ ಇಲ್ಲಾ ಎಂದು ಬಿಜೆಪಿ ಓಬಿಸಿ ಮೊರ್ಚಾ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ ಆರೊಪಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಕೋಲಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಿಸುವದಕ್ಕೆ ಕಾನೂನು ನ್ಯೂನ್ಯತೆಗಳಿದ್ದರೆ ಅದನ್ನು ಸರಿಪಡಿಸಿ ಎಸ್‌ಟಿ ಮಾಡಬಹುದಾಗಿತ್ತು ಆದರೆ ಅವರಿಗೆ ಎಸ್,ಟಿ ಮಾಡುವ ಮನಸ್ಸು ಇಲ್ಲಾ ಆದರೆ ನಮ್ಮ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಎಸ್,ಟಿ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದ್ದಾರೆ ಹಾಗೂ ತಳವಾರ, ಪರಿವಾರ ಜಾತಿಗಳು ಎಸ್.ಟಿಗೆ ಸೇರಿಸಿದ್ದಾರೆ. ಸಂಸದರಾದ ಡಾ, ಉಮೇಶ ಜಾಧವ ಅವರು ಲೊಕಸಭೆಯಲ್ಲಿ ಎರಡು ಬಾರಿ ಪ್ರಸ್ತಾವ ಮಾಡಿದ್ದಾರೆ. ಅಲ್ಲದೇ ಅನೇಕ ಬಾರಿ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಇದ್ದಾಗ ವಿಧಾನ ಪರಿಷತ್ ಸದಸ್ಯ, ಅಂಬಿಗರ ಚೌಡಯ್ಯ ನಿಗಮ ಅವರ ಪತ್ನಿಗೆ ಕೇಂದ್ರ ಆಹಾರ ನಿಗಮ ಸದಸ್ಯ ಎಲ್ಲಾ ಅಧಿಕಾರವನ್ನು ಅನುಭವಿಸಿ ಈಗ ಕೋಲಿ ಸಮಾಜ ಎಸ್.ಟಿ ಸೇರಿಸಿಲ್ಲಾ ಎಂದು ನೆಪ ಹೇಳಿ ಪಕ್ಷಕ್ಕೆ ಮೊಸ ಮಾಡಿದ್ದಾರೆ ಅವರು ಅಧಿಕಾರಕ್ಕಾಗಿ ಕೋಲಿ ಸಮಾಜದ ಎಸ್‌ಟಿ ಅಸ್ತçವನ್ನು ಜೀವಂತವಾಗಿ ಇಟ್ಟುಕೊಂಡು ಎಸ್‌ಟಿ ಹೆಸರಿನ ಮೇಲೆ ರಾಜಕೀಯ ಮಾಡುವ ಒಬ್ಬ ಬ್ಲಾಕ್ಮೇಲ್ ರಾಜಕಾರಣಿಯಾಗಿದ್ದಾರೆ. ಕೋಲಿ ಸಮಾಜ ಜಾಗೃತವಾಗಿದೆ ಅವರ ಮೊಸದ ಮಾತಿಗೆ ಯಾರು ಕಿವಿಗೊಡುವದಿಲ್ಲಾ ಎಂದರು.

ಎಸ್‌ಟಿ ಹೊರಾಟ ಸಮಿತಿಯ ಸ್ವಯಂ ಘೋಷಿತ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡು ತಿರುಗುವ ಲಚ್ಚಪ್ಪ ಜಮಾದಾರ ಒಬ್ಬ ಪೇಪರ್ ಟೈಗರ್ ಇದ್ದಂತೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ತಳವಾರ ಸೇರ್ಪಡೆ ಮಾಡಿದ ಸಂದರ್ಭದಲ್ಲಿ ಕೋಲಿ ಸಮಾಜಕ್ಕೆ ನ್ಯಾಯ ನೀಡಿದ್ದಿರಿ ಎಂದು ಬೊಮ್ಮಾಯಿ ಅವರಲ್ಲಿಗೆ ತಮ್ಮ ಸಂಗಡಿಗರೊಂದಿಗೆ ಹೊಗಿ ಹೂಗುಚ್ಚ ನೀಡಿ ಅಭಿನಂದಿಸಿ ಬಂದ ಅವರು ಈಗ ಕೋಲಿ ಸಮಾಜಕ್ಕೆ ಬಿಜೆಪಿ ಏನೂ ಮಾಡಿಲ್ಲಾ ಎಂದು ಆರೊಪಿಸುತ್ತಿದ್ದಾರೆ ಇದನ್ನು ನೋಡಿದರೆ ಅವರ ಎರಡು ಮುಖ ಹೇಗಿದೆ ಎಂದು ಗೊತ್ತಾಗುತ್ತದೆ.

ಕೋಲಿ ಸಮಾಜದ ಮುಖಂಡರಾದ ತಮ್ಮಣ್ಣ ಡಿಗ್ಗಿ, ಶಿವಕುಮಾರ ಸುಣಗಾರ, ಚಂದ್ರು ಕಾಳಗಿ, ದಶರಥ ದೊಡ್ಮನಿ, ಮಲ್ಲಿಕಾರ್ಜುನ ಅಲ್ಲೂರಕರ್, ಅಂಬು ಹೊಳಿಕಟ್ಟಿ, ತಿಪ್ಪಣ್ಣ ಇವಣಿ, ಸಂಗು ಯರಗಲ್ ಇದ್ದರು.

Share this article