ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡವ ಕುಟುಂಬಗಳ ನಡುವೆ ನಡೆದ 24ನೇ ವರ್ಷದ ಕೌಟುಂಬಿಕ ಕುಂಡ್ಯೋಳಂಡ ಹಾಕಿ ಕಾರ್ನಿವಲ್‌ನಲ್ಲಿ ಹಾಕಿ ಜತೆಗೆ ಇತರೆ ಹಲವು ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಉದ್ದ ಜಡೆಯ ಸ್ಪರ್ಧೆ:
ಉದ್ದ ಜಡೆಯ ಭೋಜಕ್ಕದ ಬಾಲಕಿಯರ ವಿಭಾಗದಲ್ಲಿ ಬಿದ್ದಾಟಂಡ ದೀಕ್ಷಾ ಪೂಣಚ್ಚ ಪ್ರಥಮ, ಮಂಡೇಡ ಸಿಂಚನಾ ಮುತ್ತಪ್ಪ ದ್ವಿತೀಯ, ಬಿಟ್ಟಿರ ನಿಮಿಷ ಭೋಜಮ್ಮ ತೃತೀಯ ಸ್ಥಾನ ಗಳಿಸಿದರು.ಮಹಿಳಾ ವಿಭಾಗದಲ್ಲಿ ಚಾಮೇರ ಮಾನಸ ಪ್ರಥಮ, ಬಾಚಿನಡಂಡ ಶೀತಲ್ ಪೊನ್ನಪ್ಪ ದ್ವಿತೀಯ, ಕಾಳೆಯಂಡ ಅನಿತಾ ತೃತೀಯ ಸ್ಥಾನ ಗಳಿಸಿದರು.
ಉದ್ದ ಮೀಸೆಯ ಸ್ಪರ್ಧೆಕೊಂಬ ಮೀಸೆರ ಬೊಂಬದಲ್ಲಿ ಚೆಪ್ಪುಡಿರ ರವಿ ಕರಂಬಯ್ಯ ಪ್ರಥಮ, ಕಾಳೆಯಂಡ ರವಿ ತಮ್ಮಯ್ಯ ದ್ವಿತೀಯ ಹಾಗೂ ಬೊಟೋಳಂಡ ನಂದ ಕಾರ್ಯಪ್ಪ ತೃತಿಯ ಸ್ಥಾನ ಗಳಿಸಿದರು.
ಮ್ಯಾರಥಾನ್ ಸ್ಪರ್ಧೆಯಲ್ಲಿ ಕೇಲೇಟಿರ ಕುಟುಂಬ ಪ್ರಥಮ ಸ್ಥಾನ, ಮುಕ್ಕಾಟಿರ (ಹರಿಹರ) ದ್ವಿತೀಯ ಸ್ಥಾನ ಹಾಗೂ ಚೀಯಕಪೂವಂಡ ಕುಟುಂಬ ತೃತೀಯ ಸ್ಥಾನವನ್ನು ಗಳಿಸಿತು. ವಿಜೇತ ತಂಡಗಳಿಗೆ ಕ್ರಮವಾಗಿ 30,000, 20,000 ಹಾಗೂ 10,000 ರು. ನಗದು ನೀಡಿ ಪುರಸ್ಕರಿಸಲಾಯಿತು.ವೈಯಕ್ತಿಕ ಪ್ರಶಸ್ತಿಗಳ ವಿವರ
ಉದಯೋನ್ಮುಖ ತಂಡ: ನಾಪಂಡ, ಉತ್ತಮ ಶಿಸ್ತುಬದ್ಧ ತಂಡ: ಕಂಬೀರಂಡ, ಗೋಲರ್ ಆಫ್ ಟೂರ್ನಮೆಂಟ್: ಐನಂಡ ನಾಚಪ್ಪ, ಉದಯೋನ್ಮುಖ ಆಟಗಾರ್ತಿ: ಮುಕ್ಕಾಟಿರ ಕಾವ್ಯ ಕಡಗದಾಳು, ಯುವ ಆಟಗಾರ: ಅಲ್ಲಾರಂಡ ತನುಷ್, ಉದಯೋನ್ಮುಖ ಆಟಗಾರ: ಬೊವ್ವೇರಿಯಂಡ ಗ್ಯಾನ್ ಉತ್ತಪ್ಪ, ಉತ್ತಮ ಮಹಿಳಾ ಆಟಗಾರ್ತಿ: ಸೌಮ್ಯ ನಾಪಂಡ,ಬೆಸ್ಟ್ ಗೋಲ್ ಕೀಪರ್: ಕುಲ್ಲೇಟಿರ ವಚನ್ ಕಾಳಪ್ಪ , ಬೆಸ್ಟ್ ಮಿಡ್ ಫೀಲ್ಡರ್: ಚೆಪ್ಪುಡೀರ ಚೇತನ್ ಚಿಣ್ಣಪ್ಪ,
ಬೆಸ್ಟ್ ಡಿಫೆಂಡರ್: ಪುದಿಯೊಕ್ಕಡ ಸೂರಜ್, ಬೆಸ್ಟ್ ಫಾರ್ವಡ್ ಪ್ಲೇಯರ್: ನೆಲ್ಲಮಕ್ಕಡ ಸೋಮಯ್ಯ, ಅತಿ ಹೆಚ್ಚು ಗೋಲು: ಚೇಂದಂಡ ನಿಕ್ಕಿನ್ ತಿಮ್ಮಯ್ಯ, ಯುವ ಉದಯೋನ್ಮುಖ ಆಟಗಾರ: ಕುಲ್ಲೇಟಿರ ಸಂಚಿತ್, ಮ್ಯಾನ್ ಆಫ್ ದಿ ಸೀರೀಸ್: ಚೇಂದಂಡ ನಿಕ್ಕಿನ್ ತಿಮ್ಮಯ್ಯ, ಮ್ಯಾನ್ ಆಫ್ ದಿ ಮ್ಯಾಚ್: ನೆಲ್ಲಮಕ್ಕಡ ಸೋಮಯ್ಯ, ಯುವ ಉದಯೋನ್ಮುಖ ಆಟಗಾರ್ತಿ: ಶಿವಚಾಳಿಯಂಡ ದೇಚಕ್ಕಚಾಂಪಿಯನ್ಸ್ಗೆ 4 ಲಕ್ಷ ರು. ಬಹುಮಾನ
ಕುಂಡ್ಯೋಳಂಡ ಹಾಕಿ ಉತ್ಸವದಲ್ಲಿ ಚಾಂಪಿಯನ್ ಆದ ಚೇಂದಂಡ ತಂಡಕ್ಕೆ ನಾಲ್ಕು ಲಕ್ಷ ರು. ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಯಿತು. ದ್ವಿತೀಯ ಬಹುಮಾನ ಗಳಿಸಿದ ನೆಲ್ಲಮಕ್ಕಡ ತಂಡಕ್ಕೆ 3 ಲಕ್ಷ ರು. ನಗದು ಹಾಗೂ ಟೋಫಿ, ತೃತೀಯ ಸ್ಥಾನ ಪಡೆದ ಕುಲ್ಲೇಟಿರ ತಂಡಕ್ಕೆ 2 ಲಕ್ಷ ರು. ಹಾಗೂ ನಾಲ್ಕನೇ ಸ್ಥಾನ ಗಳಿಸಿದ ಕುಪ್ಪಂಡ (ಕೈಕೇರಿ) ತಂಡಕ್ಕೆ 1 ಲಕ್ಷ ರು. ಬಹುಮಾನ ಹಾಗೂ ಟ್ರೋಫಿ ನೀಡಲಾಯಿತು.ಮುಂದಿನ ವರ್ಷ ಮುದ್ದಂಡ ಕಪ್ ಹಾಕಿ: 25ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ ನಡೆಸುವ ಜವಾಬ್ದಾರಿಯನ್ನು ಮುದ್ದಂಡ ಕುಟುಂಬ ವಹಿಸಿಕೊಂಡಿದೆ. 2025ರಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಹಾಕಿ ಉತ್ಸವ ನಡೆಯಲಿದೆ. ಮುದ್ದಂಡ ಕುಟುಂಬಸ್ಥರು, ಕುಂಡ್ಯೋಳಂಡ ಹಾಕಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.