ಪ್ರೋಬಯೋಟಿಕ್ ಬಳಕೆ ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವ

KannadaprabhaNewsNetwork |  
Published : Dec 13, 2023, 01:00 AM IST
 ಬೆಂ.ಗ್ರಾ ಕೃಷಿ ವಿಜ್ಞಾನ ಕೇಂದ್ರದಿಂದ ಕುರಿಮರಿಗಳಲ್ಲಿ ಪ್ರೋಬಯೋಟಿಕ್‌ಗಳ ಬಳಕೆ ಕುರಿತ ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವ ನಡೆಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸಹಯೋಗದಲ್ಲಿ ಕುರಿ ಮರಿಗಳಲ್ಲಿ ಪ್ರೋಬಯೋಟಿಕ್ ಮತ್ತು ಜಂತುನಾಶಕಗಳ ಉಪಯೋಗದ ಕುರಿತು ಇಸುವನಹಳ್ಳಿ ಗ್ರಾಮದಲ್ಲಿ ಕ್ಷೇತ್ರೋತ್ಸವ ನಡೆಯಿತು.

ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸಹಯೋಗದಲ್ಲಿ ಕುರಿ ಮರಿಗಳಲ್ಲಿ ಪ್ರೋಬಯೋಟಿಕ್ ಮತ್ತು ಜಂತುನಾಶಕಗಳ ಉಪಯೋಗದ ಕುರಿತು ಇಸುವನಹಳ್ಳಿ ಗ್ರಾಮದಲ್ಲಿ ಕ್ಷೇತ್ರೋತ್ಸವ ನಡೆಯಿತು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ರಾಮೇಗೌಡ ಮಾತನಾಡಿ, ಪ್ರೋಬಯೋಟಿಕ್ ಪ್ರಯೋಜನಕಾರಿ ಸೂಕ್ಷ್ಮಜೀವಿಗಳ ಮಿಶ್ರಣವಾಗಿದ್ದು, ಇವುಗಳು ಮೆಲಕು ಹಾಕುವ ಸಾಕು ಪ್ರಾಣಿಗಳ ಜೀರ್ಣಾಂಗ ವ್ಯವಸ್ಥೆಯಲ್ಲಿನ ಪ್ರಯೋಜನಕಾರಿ ಸೂಕ್ಷ್ಮಜೀವಿಗಳನ್ನು ಹೆಚ್ಚಿಸಲು ಉಪಯೋಗಿಸಲಾಗುವುದು ಎಂದು ತಿಳಿಸಿದರು.

ಪ್ರೋಬಯೋಟಿಕ್‌ಗಳು ಹಾನಿಕಾರಕ ಸೂಕ್ಷ್ಮಜೀವಿಗಳೊಂದಿಗೆ ಸ್ಪರ್ಧಿಸಿ ಜೀರ್ಣಾಂಗ ವ್ಯವಸ್ಥೆಯಲ್ಲಿ ಸ್ಥಾಪನೆಯಾಗಿ ಪ್ರಾಣಿಗಳು ತಿಂದ ಆಹಾರವನ್ನು ಸರಳವಾದ ರೂಪಕ್ಕೆ ಪರಿವರ್ತಿಸಿ ಆಹಾರದ ಜೀರ್ಣಕ್ರಿಯೆಯಲ್ಲಿ ಸಮರ್ಥವಾಗಿ ಭಾಗಿಯಾಗಿ ಪ್ರಾಣಿಗಳ ಉತ್ತಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದಾಗಿ ತಿಳಿಸಿದರು.

ದೊಡ್ಡಬೆಲೆಯ ಡಾ. ಹನುಮಂತಕುಮಾರ್ ಮಾತನಾಡಿ, ಬಯೋಬ್ಲೂಮ್ ಫೋರ್ಟ್ -ಉಪಯುಕ್ತ ಸೂಕ್ಷ್ಮಜೀವಿಗಳ ಮಿಶ್ರಣವಲ್ಲದೆ ಜೀವಸತ್ವಗಳು ಮತ್ತು ಖನಿಜಗಳ ಮಿಶ್ರಣವಾಗಿದೆ. ಇವುಗಳನ್ನು ಕುರಿಮರಿಗಳಲ್ಲಿ ಹಾಲುಣಿಸುವ ನಂತರದ ಸಮಯದಲ್ಲಿ ಉಪಯೋಗಿಸುವುದರಿಂದ ಉತ್ತಮ ಬೆಳವಣಿಗೆ ಕಂಡುಬರುವುದಲ್ಲದೆ ಕುರಿಮರಿಗಳ ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುವುದಾಗಿ ತಿಳಿಸಿದರು.

ಕುರಿಮರಿಗಳಲ್ಲಿ ಪ್ರಾಯೋಗಿಕವಾಗಿ ಪ್ರೋಬಯೋಟಿಕ್‌ಗಳನ್ನು ಬಳಸಿದ ರೈತರಾದ ಲಕ್ಷ್ಮಿಕಾಂತಯ್ಯ ಮತ್ತು ರಾಮು ಮಾತನಾಡಿ, ಕುರಿಮರಿಗಳ ಬೆಳವಣಿಗೆಯಲ್ಲಿ ಉತ್ತಮ ಫಲಿತಾಂಶ ಕಂಡಿರುವುದಾಗಿ ತಿಳಿಸಿದರು.

ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ದರ್ಶಿನಿ, ಕೃಷಿ ವಿಜ್ಞಾನ ಕೇಂದ್ರದ ವಿವಿಧ ಕಾರ್ಯಕ್ರಮಗಳು ಮತ್ತು ಹೊಸ ತಂತ್ರಜ್ಞಾನಗಳ ಪ್ರಸರಣದ ಬಗ್ಗೆ ಮಾಹಿತಿ ನೀಡಿದರು.

ಕೃಷಿ ವಿಜ್ಞಾನ ಕೇಂದ್ರ, ಹಾಡೋನಹಳ್ಳಿ, ಬೆಂಗಳೂರು ಗ್ರಾಮಾಂತರಜಿಲ್ಲೆಯ ವತಿಯಿಂದ ಹಮ್ಮಿಕೊಳ್ಳಲಾದ ಮುಂಚೂಣಿ ಪ್ರಾತ್ಯಕ್ಷಿಕೆಯಲ್ಲಿ ಇಸುವನಹಳ್ಳಿ ಗ್ರಾಮದ ರೈತರಿಗೆ ಬಯೋಬ್ಲೂಮ್ ಫೋರ್ಟ್ ಎಂಬ ಪ್ರೊಬಯೋಟಿಕ್ ಮತ್ತು ಟ್ರೈ ಕ್ಲಾಬೆಂಡಾಜೋಲ್ ಮತ್ತು ಐವರ್‌ಮೆಕ್ಟಿನ್‌ ಮಿಶ್ರ ಜಂತು ನಾಶಕಗಳನ್ನು ವಿತರಿಸಲಾಗಿತು.12ಕೆಡಿಬಿಪಿ2-

ಬೆಂ.ಗ್ರಾ. ಕೃಷಿ ವಿಜ್ಞಾನ ಕೇಂದ್ರದಿಂದ ಕುರಿಮರಿಗಳಲ್ಲಿ ಪ್ರೋಬಯೋಟಿಕ್‌ಗಳ ಬಳಕೆ ಕುರಿತ ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವ ನಡೆಯಿತು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ