ಕನ್ನಡಪ್ರಭ ವಾರ್ತೆ ಹರಿಹರ
ನಗರದ ಶಿಬಾರ ವೃತ್ತದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕುಂಭ ಹೊತ್ತು ಸಾಗಿದರು. ವೀರಗಾಸೆ, ಡೊಳ್ಳು, ಸಮಾಳ ಹಾಗೂ ಮಕ್ಕಳು ಶಿವ ಮತ್ತು ಪಾರ್ವತಿ ವೇಷ ಧರಿಸಿ ಪಾಲ್ಗೊಂಡಿದ್ದರು. ಜೊತೆಗೆ ಹಲವಾರು ಕಲಾ ತಂಡಗಳು ಭವ್ಯ ಮೆರವಣಿಗೆಗೆ ಮೆರಗು ತಂದರು.
ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುನಃ ದೇವಸ್ಥಾನ ಆವರಣದಲ್ಲಿ ಅಂತ್ಯಗೊಂಡಿತು. ಏ.೩ರಂದು ಶ್ರೀ ದತ್ತಾತ್ರೇಯ ಭಟ್ ನೇತೃತ್ವದಲ್ಲಿ ಬೆಳಗ್ಗೆ ೮ ರಿಂದ ಗಂಗಾನಯನ, ಗಣಪತಿ, ನವಗ್ರಹ ಪೂಜೆ, ಹೋಮ ಬಲಿಹರಣ ಪೂಜೆ ನಡೆಯುವುದು. ಮಹಿಳಾ ಮಂಡಳಿ ಅವರಿಂದ ಭಜನೆ, ಮಧ್ಯಾಹ್ನ ೨ ಗಂಟೆಗೆ ಪ್ರಸಾದ ವಿನಿಯೋಗ ನಡೆಯಲಿದೆ.ಏ.೪ರಂದು ಶ್ರೀ ವಾರಣಾಸಿಯ ಕಾಶಿ ವಿಶ್ವನಾಥ ಸನ್ನಿಧಾನದಿಂದ ತರಿಸಲ್ಪಟ್ಟಿರುವ ನೂತನ ಶ್ರೀ ಕಾಶಿ ನೀಲಕಂಠೇಶ್ವರ, ನಂದಿ ಗಣಪತಿ ದೇವರುಗಳ ಪ್ರಾಣ ಪ್ರತಿಷ್ಟಾಪನೆ ಬೆಳಗ್ಗೆ ೧೧-೩೮ ರಿಂದ ೧೨-೨೯ಕ್ಕೆ ಶ್ರೀ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೆರವೇರಿಸುವರು. ಅನಂತರ ಶ್ರೀಗಳಿಂದ ನಾಮಫಲಕ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.
- - - -೩೧ಎಚ್‌ಆರ್‌ಆರ್೨:
ಹರಿಹರದಲ್ಲಿ ಕುರುಹಿನಶೆಟ್ಟಿ ಸಮಾಜದಿಂದ ಭಾನುವಾರ ದೇವರ ನೂತನ ಶಿಲಾಮೂರ್ತಿಗಳ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕುಂಭ ಹೊತ್ತು ಪಾಲ್ಗೊಂಡರು.