ಕನ್ನಡಪ್ರಭ ವಾರ್ತೆ ಮೈಸೂರು
ನವದೆಹಲಿಯ ನ್ಯಾಷನಲ್ ಆ್ಯಂಟಿ ಡುಪ್ಲಿಕೇಷನ್ ಬ್ಯೂರೋ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಆರ್ಟ್ ಅಂಡ್ ಮೈಂಡ್ ಫೆಸ್ಟ್ 2K24 ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸಮಾಜವನ್ನು ಪರಿವರ್ತಿಸಿವುದು ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಕಿಂಗ್ ಮೇಕರ್ ಆಗಿ ಮಾಡಿದಾಗ ಸಮಾಜವನ್ನು ಸರಿಯಾದ ರೀತಿಯಲ್ಲಿ ನಡೆಸುತ್ತಾನೆ. ಆದ್ದರಿಂದ ನಿಮ್ಮ ತಂದೆ-ತಾಯಿ ಗುರು ಹಿರಿಯರು ಹಾಗೂ ಸಮಾಜವನ್ನು ಮರೆಯಬಾರದು ಎಂದು ಅವರು ಕಿವಿಮಾತು ಹೇಳಿದರು.ಇಂತಹ ಕಾರ್ಯಕ್ರಮದಲ್ಲಿ ಹಲವಾರು ಪರಿಣಿತರು ಹಾಗೂ ತಜ್ಞರು ಮಾತನಾಡಿದಾಗ ಅದನ್ನು ವಿದ್ಯಾರ್ಥಿಗಳು ಕೂಲಂಕುಷವಾಗಿ ಗ್ರಹಿಸಿ ನಿಮ್ಮ ಆಲೋಚನಾ ಶಕ್ತಿಯನ್ನು ವಿಸ್ತಾರಗೊಳಿಸಿಕೊಳ್ಳಬೇಕು. ಅದರಿಂದ ನಿಮ್ಮ ಅರಿವೇ ನಿಮ್ಮ ಗುರುವು ಎಂದು ಬಸವಣ್ಣನವರ ತತ್ವವನ್ನು ಸ್ಮರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಅಕ್ಷರದ ಜೊತೆಗೆ ಇವತ್ತಿನ ಯುವ ಸಮೂಹಕ್ಕೆ ಕೌಶಲ್ಯ ಹಾಗೂ ಪರಿಣಿತಿ ಇರಬೇಕು. ಆಗ ಮಾತ್ರ ಜಗತ್ತು ನಮ್ಮನ್ನು ಗುರುತಿಸುತ್ತದೆ ಎಂದರು.
25 ವರ್ಷಗಳ ಹಿಂದೆ ಒಂದು ಕಾಲವಿತ್ತು, ಆಗ ಶಿಕ್ಷಣಕ್ಕೆ ಇದ್ದಂತಹ ಮಹತ್ವ ಬೇರೆಯಾದಾಗಿತ್ತು. ಕೇವಲ ವ್ಯಕ್ತಿಗೆ ಓದಲಿಕ್ಕೆ ಮತ್ತು ಬರಿಯಲಿಕ್ಕೆ ಬಂದರೆ ಅವನಿಗೆ ಬೌದ್ಧಿಕತೆಯ ವಿಕಾಸ ಹಾಗೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಪ್ರಸ್ತುತ ನಾವು ಸ್ಪರ್ಧಾತ್ಮಕ ಹಾಗೂ ಡಿಜಿಟಲ್ ಯುಗದಲ್ಲಿ ಜಗತ್ತಿನ ಸವಾಲನ್ನು ಎದುರಿಸಲಿಕ್ಕೆ ಸಾಧ್ಯವಿದೆಯೇ, ಬದುಕು ಕಟ್ಟಿಕೊಳ್ಳಲು ಸಾಧ್ಯ ಇದ್ದಿಯಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು ಎಂದು ಅವರು ಹೇಳಿದರು.
ಜಗತ್ತು ನಿಂತಿರುವುದು ಕಲೆ ಮತ್ತು ನಮ್ಮ ಮನಸ್ಸಿನ ಮೇಲೆ. ಅದ್ದರಿಂದ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ. ನಿಮ್ಮ ಸ್ವ ಕೌಶಲ್ಯವನ್ನು ಈ ಸ್ಪರ್ಧೆಗಳಲ್ಲಿ ಅನಾವರಣಗೊಳಿಸಬಹುದು. ಆದ್ದರಿಂದ ಪ್ರಪಂಚದ ಎಲ್ಲಾ ಜ್ಞಾನವನ್ನು ಬೆಳೆಸಿಕೊಂಡು ನಿಮ್ಮ ಆಲೋಚನಾ ಶಕ್ತಿಯನ್ನು ವಿಸ್ತಾರಗೊಳಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಪ್ರಾಚೀನ ಕಾಲಘಟ್ಟದಲ್ಲಿ ಕೇವಲ ಹಳೇ ಕಾಲದ ಸಾಂಪ್ರದಾಯಿಕ ಆಟಗಳಾದ ಕೋಕೋ, ಕಬಡ್ಡಿ, ಮರಕೋತಿ ಆಟ ಮತ್ತು ರಂಗೋಲಿ ಬಿಡಿಸುವಿಕೆಗೆ ಮಾತ್ರ ಸೀಮಿತವಾಗಿದ್ದವು. ಆದರೆ ಇಂದು ಶಾಲಾ ಕಾಲೇಜುಗಳಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಮೂಡಿಸುವಂತಹ ವಿವಿಧ ರೀತಿಯ ಸ್ಪರ್ಧಾತ್ಮಕ ಕಾರ್ಯಕ್ರಮ ಆಯೋಜಿಸಿ, ಮಕ್ಕಳಲ್ಲಿ ಸುಜನಾತ್ಮಕ ಬೆಳವಣಿಗೆ ಮುನ್ನುಡಿಯಾಗುತ್ತಿದೆ ಎಂದರು.
ಮಕ್ಕಳು ಇಂದು ಸ್ಪರ್ಧಾತ್ಮಕ ಯುಗದಲ್ಲಿ ಇರುವುದರಿಂದ ಎಲ್ಲರೂ ತಮ್ಮಲ್ಲಿ ಆತ್ಮಸ್ಥೈರ್ಯ, ಆತ್ಮಭಿಮಾನ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸದೃಢವಾದಾಗ ಪರಿಪೂರ್ಣ ವ್ಯಕ್ತಿಯಾಗಿ ಸರ್ವತೋಮುಖ ಬೆಳವಣಿಗೆ ಸಾಧಿಸಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಸೋಲು ಗೆಲುವು ಎನ್ನುವುದು ಒಂದು ನಾಣ್ಯದ ಎರಡು ಮುಖವಿದ್ದಂತೆ, ಹಾಗಾಗಿ ಮಕ್ಕಳೂ ಎಲ್ಲಾ ಸ್ಪರ್ಧೆಗಳಲ್ಲಿ ಉತ್ತಮವಾಗಿ ಭಾಗವಹಿಸಿ, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಮತ್ತು ಸದೃಢ ಸಮಾಜವನ್ನು ನಿರ್ಮಿಸಿ, ಸಮ ಸಮಾಜವನ್ನು ಕಟ್ಟೋಣ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಮತ್ತು ಎಂಟರ್ ಪ್ರೆನ್ಯೂರ್ಶಿಪ್- ಬಿಸಿನೆಸ್ ಸ್ಕೂಲ್ ನ ನಿರ್ದೇಶಕಿ ಹಾಗೂ ಪ್ರಾಂಶುಪಾಲೆ ಡಾ.ಕೆ. ಅಪರ್ಣಾ ರಾವ್, ಪ್ರೊ. ವೆಂಕಟರಮಣ ಶೆಟ್ಟಿ, ನ್ಯಾಷನಲ್ ಆ್ಯಂಟಿ ಡುಪ್ಲಿಕೇಷನ್ ಬ್ಯೂರೋ ರಾಷ್ಟ್ರೀಯ ಉಪಾಧ್ಯಕ್ಷ ಸಿ.ವಿ. ಶ್ರೀನಾಥ್ ಶೆಟ್ಟಿ, ಪತ್ರಿಕೋದ್ಯಮದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಸಮೂಹ ಸಂವಹನದ ಅಧ್ಯಕ್ಷ ಡಾ.ಜಿ.ಬಿ. ಶೈಲೇಶ್ ರಾಜ್ ಅರಸ್ ಮೊದಲಾದವರು ಇದ್ದರು.