ಅಧಿಕಾರ ನೀಡಿದವರ ಋಣ ತೀರಿಸಬೇಕು-
ಅಧಿಕಾರ ಶಾಶ್ವತವಲ್ಲ ತಮ್ಮ ಅವಧಿಯಲ್ಲಿ ಶಾಶ್ವತವಾಗಿ ನೆನಪಿನಲ್ಲಿಡುವಂತ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅಧಿಕಾರ ನೀಡಿದವರ ಋಣವನ್ನು ತೀರಿಸಿ ಎಂದು ವಸ್ತು ಪ್ರದರ್ಶನದ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ ಸಲಹೆ ನೀಡಿದರು.
ಪಟ್ಟಣದ ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಒಕ್ಕಲಿಗ ನೌಕರರ ಸ್ನೇಹ ಬಳಗದ ಅಧ್ಯಕ್ಷ ಶಂಕರೇಗೌಡ ಮತ್ತು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ದೊಡ್ಡಕೊಪ್ಪಲು ವಿನಯ್ ಅವರಿಗೆ ಅಭಿನಂದಿಸಿ ಮಾತನಾಡಿದ ಅವರು, ಜವಾಬ್ದಾರಿ ಹೆಚ್ಚಿದೆ ಸಮಾಜ ಮೆಚ್ಚುವಂತ ಕೆಲಸವನ್ನು ಮಾಡುವಂತೆ ತಿಳಿ ಹೇಳಿದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಅರುಣ್ ಕುಮಾರ್, ಒಕ್ಕಲಿಗ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ವಡ್ಡರಕೊಪ್ಪಲು ಶಿವರಾಮು, ವಕೀಲ ಅಂಕನಹಳ್ಳಿ ತಿಮ್ಮಪ್ಪ, ಉಪನ್ಯಾಸಕ ಮಿರ್ಲೆ ಧನಂಜಯ, ನೂತನ ಅಧ್ಯಕ್ಷರಾದ ಶಂಕರೇಗೌಡ, ವಿನಯ್ ದೊಡ್ಡ ಕೊಪ್ಪಲು ಮಾತನಾಡಿದರು.
ಜೀವನ್, ಹೇಮಂತ್ ಮೊದಲಾದವರು ಇದ್ದರು.