ರಾಮನಗರ: ಮೋದಿ ಮತ್ತೊಮ್ಮೆ ಅಭಿಯಾನದ ಅಂಗವಾಗಿ ಗೋಡೆಗಳ ಮೇಲೆ ಕಮಲದ ಚಿಹ್ನೆ ಬರೆಯುವ ಕಾರ್ಯಕ್ರಮ ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆಯಿತು.
ಈ ವೇಳೆ ಬಿಜೆಪಿ ಯುವ ಮುಖಂಡ ಕಿಶನ್ ಗೌಡ ಮಾತನಾಡಿ, ದೇಶದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹಾಗೂ 3ನೇ ಬಾರಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸುವ ಸಲುವಾಗಿ ಜನಾಭಿಪ್ರಾಯ ರೂಪಿಸಲು ಮುಂದಾಗುತ್ತಿದ್ದೇವೆ. ಈ ಸಂಬಂಧ ಪ್ರತಿ ಮನೆಯ ಮೇಲೆ ಪಕ್ಷದ ಚಿಹ್ನೆಯ ಮೂಲಕ ಗೋಡೆ ಬರಹ ಬರೆಯಲಾಗುತ್ತಿದೆ ಎಂದು ಹೇಳಿದರು.ಕಾಂಗ್ರೆಸ್ ನ ರಾಹುಲ್ ಗಾಂಧಿ ಅವರು ಭಾರತವನ್ನು ಐಕ್ಯ ಮಾಡುತ್ತೇವೆ ಎಂದು ಭಾರತ್ ಜೋಡಿ ಯಾತ್ರೆ ಮಾಡುತ್ತಾರೆ. ಇನ್ನೊಂದೆಡೆ ಅವರ ಪಕ್ಷದ ಸಂಸದ ಡಿ.ಕೆ.ಸುರೇಶ್ ಅವರು ಭಾರತ ವಿಭಜನೆ ಮಾಡುವ ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್ ನಾಯಕರ ವರ್ತನೆಯನ್ನು ಜನ ಗಮನಿಸುತ್ತಿದ್ದಾರೆ. ಇವರ ಹೇಳಿಕೆಗಳೇ ಅವರಿಗೆ ಮುಳ್ಳಾಗುತ್ತಿದೆ ಎಂದರು.
ಈ ಹಿಂದೆ ಇದೇ ಕಾಂಗ್ರೆಸ್ ಪಕ್ಷವೂ ಹಿಂದುಗಳನ್ನು ಜಾತಿ ಹೆಸರಿನಲ್ಲಿ ಒಡೆಯಲು ಪ್ರಯತ್ನಿಸಿದ್ದರು. ಆದರೆ, ಇತ್ತೀಚಿಗೆ ನಿರ್ಮಾಣ ವಾದ ರಾಮ ಮಂದಿರದ ಮೂಲಕ ದೇಶದಲ್ಲಿನ ಹಿಂದೂಗಳು ಒಗ್ಗೂಡುತ್ತಿದ್ದಾರೆ. ಇದನ್ನು ಅರಗಿಸಿಕೊಳ್ಳಲು ಆಗದೆ ಕಾಂಗ್ರೆಸ್ ನಾಯಕರು ದೇಶ ವಿಭಜನೆ ಮಾತು ಹೇಳುತ್ತಿದ್ದಾರೆ ಎಂದು ಟೀಕಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ ಮಾತನಾಡಿ, ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಅವರ ನಾಯಕತ್ವದಲ್ಲಿ ದೇಶ ಬಲಿಷ್ಠವಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಸ್ಥಳೀಯ ಮುಖಂಡರಾದ ಅವ್ವೇರಹಳ್ಳಿ ಆನಂದ್, ವೆಂಕಟೇಶ್, ಸುರೇಶ್, ಈಶ್ವರ್ ಹಾಜರಿದ್ದರು.2ಕೆಆರ್ ಎಂಎನ್ 4.ಜೆಪಿಜಿರಾಮನಗರ ತಾಲೂಕಿನ ಅವ್ವೇರಹಳ್ಳಿಯಲ್ಲಿ ಮೋದಿ ಮತ್ತೊಮ್ಮೆ ಅಭಿಯಾನದ ಅಂಗವಾಗಿ ಗೋಡೆಗಳ ಮೇಲೆ ಕಮಲದ ಚಿಹ್ನೆ ಬರೆಯುವ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡರು ಚಾಲನೆ ನೀಡಿದರು.