- ಮಾ.ಸ.ಬ. ಕಾಲೇಜಿನಲ್ಲಿ ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮ - - - ದಾವಣಗೆರೆ: ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರು. ನಮಗೆ ಜ್ಞಾನ, ಉತ್ತಮ ಮನಸ್ಸು ಹಾಗೂ ಒಳ್ಳೆಯ ಆಲೋಚನೆಗಳನ್ನು ಮಾಡಲು ಪುಸ್ತಕ ಸಹಾಯಕವಾಗಿದೆ ಎಂದು ಎ.ವಿ.ಕೆ. ಮಹಿಳಾ ಕಾಲೇಜಿನ ಗ್ರಂಥಪಾಲಕ ಎಚ್.ಸತೀಶ ಅಭಿಪ್ರಾಯಪಟ್ಟರು.
ಪ್ರಾಚಾರ್ಯೆ ಪ್ರೊ. ಜಿ.ಸಿ.ನೀಲಾಂಬಿಕ ಮಾತನಾಡಿ, ಮಾನವನ ಮನಸ್ಸು ದುರ್ಬಲ ಮನಸ್ಥಿತಿಯನ್ನು ಹೊಂದಿದೆ. ಈ ರೀತಿಯ ನಕಾರಾತ್ಮಕ ಆಲೋಚನೆಗಳಿಗೆ ಮನಸ್ಸು ಬಲಿ ಆಗುವುದನ್ನು ತಡೆಯುವ ಅತ್ಯುತ್ತಮ ಪರಿಹಾರವೆಂದರೆ ಪುಸ್ತಕ. ಒಂದು ಉತ್ತಮ ಪುಸ್ತಕ ನೂರು ಜನ ಒಳ್ಳೆಯ ಸ್ನೇಹಿತರಿಗೆ ಸಮ ಎಂದು ಹೇಳಿದರು.
ಈ ಸಂದರ್ಭ ಸಹಾಯಕ ಗ್ರಂಥಪಾಲಕ ಮಂಜಣ್ಣ, ಉಪನ್ಯಾಸಕರಾದ ಡಾ. ಆರ್.ರಾಘವೇಂದ್ರ, ಡಾ. ಎ.ಬಿ. ವಿಜಯಕುಮಾರ, ಡಾ. ಎಂ.ಮಂಜಣ್ಣ, ಪ್ರೊ. ಟಿ.ಆರ್.ರಂಗಸ್ವಾಮಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.- - - -19ಕೆಡಿವಿಜಿ36: ದಾವಣಗೆರೆಯ ಮಾಸಬ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಎ.ವಿ.ಕೆ. ಮಹಿಳಾ ಕಾಲೇಜಿನ ಗ್ರಂಥಪಾಲಕ ಎಚ್.ಸತೀಶ ಉದ್ಘಾಟಿಸಿದರು.