ಕಾಯಕವೇ ಕೈಲಾಸ ಮಂತ್ರ ಪಾಲಿಸಿದರೆ ಪ್ರಗತಿ ಸಾಧ್ಯ

KannadaprabhaNewsNetwork |  
Published : Nov 12, 2025, 01:00 AM IST
ಪೋಟೋ,11hsd1: ಕುಂಚಿಟಿಗ ಮಠದಲ್ಲಿ ನಡೆದ ಸುಜ್ಞಾನ ಸಂಗಮ ಕಾರ್ಯಕ್ರಮವನ್ನು ಸನ್ಮಾನಿತರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕುಂಚಿಟಿಗ ಮಠದಲ್ಲಿ ನಡೆದ ಸುಜ್ಞಾನ ಸಂಗಮ ಕಾರ್ಯಕ್ರಮವನ್ನು ಸನ್ಮಾನಿತರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಕೇಡು ಬಯಸಿದರೆ ನೆಮ್ಮದಿ ಕಳೆದುಕೊಳ್ಳುವ ಬದಲು ಕಾಯಕವೇ ಕೈಲಾಸ ಎಂಬ ಮಂತ್ರವನ್ನು ಪಾಲಿಸಿದರೆ ಪ್ರಗತಿ ಸಾಧ್ಯ ಎಂದು ಶಾಂತವೀರ ಸ್ವಾಮಿಜಿ ಹೇಳಿದರು.

ಪಟ್ಟಣದ ಕುಂಚಿಟಿಗ ಮಠದಲ್ಲಿ ನಡೆದ 23ನೇ ವರ್ಷದ 11ನೇ ತಿಂಗಳ ಸುಜ್ಞಾನ-ಸಂಗಮ ಹಾಗೂ ಕನಕ ಜಯಂತಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕಲಿಯುಗದಲ್ಲಿ ಕೇವಲ ಗಳಿಕೆ ಆದ್ಯತೆ ಕೊಟ್ಟು ಸಂಬಂಧದ ಮಹತ್ವವನ್ನು ಮರೆಯುತ್ತಿರುವುದು ಸಮಾಜಕ್ಕೆ ಮಾರಕವಾಗಿದೆ ಜಾತಿ ಜಾತಿಗಳ ಮಧ್ಯೆ ಕಲಹಗಳು ಉಂಟಾಗಲು ಜಾತಿಯ ಶ್ರೇಷ್ಠ ಮನೋಭಾವ ಕಾರಣ. ಮಾನವ ಶ್ರೇಷ್ಠನೆ ಹೂರೆತು ಯಾವುದೇ ಜಾತಿ ಶ್ರೇಷ್ಠವಲ್ಲ ಯೋಜಿಸುವವರ ಮನೋಸ್ಥಿತಿ ಸರಿಯಾದರೆ ಎಲ್ಲರೂ ಶ್ರೇಷ್ಟರಾಗಿ ಕಾಣುತ್ತಾರೆ. ಎಲ್ಲರನ್ನು ನಮ್ಮವರೆಂದು ಅಪ್ಪಿಕೊಂಡಾಗ ಸಮಾಜದಲ್ಲಿ ಸೌಹಾರ್ದತೆಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಕಲಿಯುಗದಲ್ಲಿ ಶಿಕ್ಷಣ ಪಡೆದ ಜನರಿಂದನೇ ಜಾತಿಯ ವೈಭವೀಕರಣ ನಡೆಯುತ್ತಿರುವುದು ಸಮಾಜಕ್ಕೆ ತುಂಬಾ ಅಪಾಯಕಾರಿ ಎಂದರು.

ಶಿಕ್ಷಕ ತಿಪ್ಪೇಸ್ವಾಮಿ ಮಾತನಾಡಿ, ಗುರು ಹಿರಿಯರ ಸಜ್ಜನರ ಸಂಘ ಮರೆತ ಮಾನವ ಒಂಟಿಯಾಗುತ್ತಿದ್ದಾನೆ ಅವಿಭಕ್ತ ಕುಟುಂಬ ಚಿದ್ರ ಚಿದ್ರವಾಗಿ ಕೌಟುಂಬಿಕ ವ್ಯವಸ್ಥೆ ಕುಸಿದು ಹೋಗಿದೆ ಮನೆಯನ್ನು ದೊಡ್ಡದಾಗಿ ಕಟ್ಟುತ್ತಿದ್ದಾರೆ ಮನಸ್ಸನ್ನು ಸಣ್ಣದಾಗಿ ರೂಪಿಸಿಕೊಳ್ಳುತ್ತಿದ್ದಾರೆ ಇದರಿಂದ ಸಮಾಜದಲ್ಲಿ ನೆಮ್ಮದಿ ಹಾಳಾಗುತ್ತಿದೆ ಎಂದರು. ಯುವ ಮುಖಂಡ ಬಿ.ಜಿ.ಅರುಣ್ ಮಾತನಾಡಿ, ಶಾಂತವೀರ ಶ್ರೀಗಳು ಜಾತ್ಯತೀತ ಮನೋಭಾವವನ್ನು ಉಳ್ಳವರಾಗಿ ಸರ್ವರನ್ನು ಪ್ರೀತಿಸುವ ಕಾಯಕವನ್ನು ಮಾಡುವ ಎಲ್ಲ ಜಾತಿಯವರನ್ನು ನಮ್ಮವರೆಂದು ಒಪ್ಪಿಕೊಳ್ಳುವ ಅವರ ಗುಣ ಅವರದು ಇದನ್ನು ಯುವಕರು ಪಾಲಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಚೇನಹಳ್ಳಿ ರಾಮಕೃಷ್ಣ, ನಿವೃತ್ತ ಉಪ ತಹಶಿಲ್ದಾರ್ ಬಿ.ಕೆ.ನಾಗರಾಜಪ್ಪ, ಪುರಸಭಾ ಮಾಜಿ ಅಧ್ಯಕ್ಷ ಶ್ರೀನಿವಾಸ ತಣಿಗೆಕಲ್ಲು ಟಿ.ಎಸ್.ಶಂಕರಮೂರ್ತಿ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!