ಹನುಮಸಾಗರ: ಅಂಗನವಾಡಿ ಕೇಂದ್ರಕ್ಕೆ ಬಂದ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪಿಸಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಮನರೇಗಾ ಯೋಜನೆಯಡಿ ₹೧೪ ಲಕ್ಷದಲ್ಲಿ ಕಟ್ಟಡ ನಿರ್ಮಿಸಿರುವುದು ಹೆಮ್ಮೆ ವಿಷಯವಾಗಿದ್ದು, ಗುತ್ತಿಗೆದಾರರು ಅಚ್ಚುಕಟ್ಟಾಗಿ ಸುಸರ್ಜ್ಜಿತವಾಗಿ ಗುಣಮಟ್ಟದ ಕಾಮಗಾರಿ ಕೈಗೊಂಡಿದ್ದಾರೆ. ಕಾರ್ಯಕರ್ತೆಯರು ಶಿಶುಗಳಿಗೆ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಮೊಟ್ಟೆ, ಆಹಾರ, ಧಾನ್ಯ ಮುಟ್ಟಿಸಬೇಕು. ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಫಲಾನುಭವಿಗಳಿಗೆ ತಿಳಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಸಿಡಿಪಿಒ ಯಲ್ಲಮ್ಮ ಹಂಡಿ, ಪಿಡಿಒ ನಿಂಗಪ್ಪ ಮೂಲಿಮನಿ, ಗ್ರಾಪಂ ಸದಸ್ಯರಾದ ಸಂಗಮೇಶ ಕರಂಡಿ, ಮುತ್ತು ಪತ್ತಾರ, ಬಂದಮ್ಮ ಸಿಂಹಾಸನ, ದ್ರಾಕ್ಷಾಯಿಣಿ ವೀರೇಶ ಕಟಗಿ, ಚಂದ್ರಶೇಖರ ಬೆಳಗಲ, ಮಂಜುನಾಥ ಹುಲ್ಲೂರ, ಮರೇಗೌಡ ಬೋದುರ, ವಿಶ್ವನಾಥ ಯಾಳಗಿ, ರಮೇಶ ಬಡಿಗೇರ, ಬಸವರಾಜ ಹಳ್ಳೂರ, ಸೂಚಪ್ಪ ದೇವರಮನಿ, ನಾಗರಾಜ ಹಕ್ಕಿ, ರಾಘವೇಂದ್ರ ಗೊಲ್ಲರ, ತಿಮ್ಮನಗೌಡ ಮಾಲಿಪಾಟೀಲ್, ಅಂಗನವಾಡಿ ಮೇಲ್ವಿಚಾರಿಕೆ ಮಂಜುಳಾ ಹಕ್ಕಿ, ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮೀ ಕರಮುಡಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರು ಇದ್ದರು.