ಆರೋಗ್ಯ ಪೂರ್ಣ ಸಮಾಜಕ್ಕೆ ಬಸವ ತತ್ವ ಪ್ರಚಾರ ಅಗತ್ಯ

KannadaprabhaNewsNetwork |  
Published : Aug 06, 2024, 12:32 AM IST
ಚಿತ್ರ  5ಬಿಡಿಆರ್57 | Kannada Prabha

ಸಾರಾಂಶ

ಲಿಂಗಾಯತ ಮಹಾಮಠದ ಪ್ರವಚನ ಅಭಿಯಾನದ ಕರಪತ್ರವನ್ನು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಗೀತಾ ಈಶ್ವರ ಖಂಡ್ರೆ ಬೀದರ್‌ನಲ್ಲಿ ಬಿಡುಗಡೆ ಮಾಡಿದರು.

ಬೀದರ್‌ನಲ್ಲಿ ಬಸವ ತತ್ವ ಪ್ರವಚನಗಳ ಅಭಿಯಾನದ ಕರಪತ್ರ ಬಿಡುಗಡೆ ಮಾಡಿದ ಡಾ.ಗೀತಾ ಖಂಡ್ರೆಕನ್ನಡಪ್ರಭ ವಾರ್ತೆ ಬೀದರ್

ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣರ ತತ್ವಗಳ ಪ್ರಚಾರ ಅಗತ್ಯವಾಗಿದೆ ಎಂದು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಗೀತಾ ಈಶ್ವರ ಖಂಡ್ರೆ ಹೇಳಿದರು.

ನಗರದಲ್ಲಿ ಲಿಂಗಾಯತ ಮಹಾಮಠದಿಂದ ಹಮ್ಮಿಕೊಳ್ಳಲಾದ 770 ಬಸವ ತತ್ವ ಪ್ರವಚನಗಳ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಣೆ ಮಾಡಿದೆ. ಇದೇ ವೇಳೆ ಪ್ರಭುದೇವ ಸ್ವಾಮೀಜಿ ಅವರು ಪ್ರವಚನ ಅಭಿಯಾನ ಹಮ್ಮಿಕೊಂಡಿರುವುದು ಅತ್ಯಂತ ಸೂಕ್ತವಾಗಿದೆ ಎಂದರು.

ಲಿಂಗಾಯತ ಮಹಾಮಠದ ಪ್ರಮುಖರಾದ ರಮೇಶ ಮಠಪತಿ ಅವರು ಅಭಿಯಾನದ ಅಂಗವಾಗಿ ಪ್ರಭುದೇವ ಸ್ವಾಮೀಜಿ ಗ್ರಾಮ, ಹೋಬಳಿ, ಪಟ್ಟಣ, ನಗರ ಸೇರಿ 770 ಕಡೆಗಳಲ್ಲಿ ಪ್ರವಚನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ಮೊದಲ ಪ್ರವಚನ ಗೋರ್ಟಾ(ಬಿ), ಎರಡನೇ ಪ್ರವಚನ ನೆರೆ ತೆಲಂಗಾಣದ ಜಹೀರಾಬಾದ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಅಕ್ಕ ಅನ್ನಪೂರ್ಣ ತಾಯಿ ಅವರ ಆಶಯದಂತೆ ವಚನ ಓದಲು ಪ್ರೇರಣೆ ನೀಡುವುದು, ಕಾಯಕ, ದಾಸೋಹದ ಅರಿವು ನೀಡುವುದು, ‘ವ್ಯಸನ ಮುಕ್ತಿಗಾಗಿ ಅಕ್ಕನವರ ಜೋಳಿಗೆ ಸಂಚಾರ’ ಮೊದಲಾದವು ಅಭಿಯಾನದ ಭಾಗವಾಗಲಿವೆ ಎಂದು ಹೇಳಿದರು.

ಪ್ರಮುಖರಾದ ಜಯರಾಜ ಖಂಡ್ರೆ, ಡಾ.ಶಿವಕುಮಾರ ಶೆಟಕಾರ್, ಡಾ. ರಾಜಶೇಖರ ಸೇಡಂಕರ್, ಹಾವಶೆಟ್ಟಿ ಪಾಟೀಲ, ಕೃಪಾಸಿಂಧು ಪಾಟೀಲ, ಸೂರ್ಯಕಾಂತ ರಾಮಶೆಟ್ಟಿ, ಕಾಮಶೆಟ್ಟಿ ಚಿಕ್ಕಬಸೆ, ಸೋಮಶೇಖರ ಬಿ. ಪಾಟೀಲ, ಕವಿತಾ ಪ್ರಭಾ, ಡಾ. ಜಯಶ್ರೀ ರತಿಕಾಂತ ಸ್ವಾಮಿ, ಅನುರಾಧ ತಟಪಟ್ಟಿ, ಉಮಾ ಮಣಗೆ, ಡಾ. ಶಾಂತಲಾ ಕೌಜಲಗಿ, ಶಾಂತಾ ಖಂಡ್ರೆ ಮತ್ತಿತರರು ಇದ್ದರು. ಶಿವಕುಮಾರ ಪಾಖಾಲ್ ಸ್ವಾಗತಿಸಿದರು. ಪ್ರಭು ತಟಪಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ