ಬಸವನಬಾಗೇವಾಡಿ ಮತಕ್ಷೇತ್ರದ ಮುಳವಾಡ ಗ್ರಾಮದಿಂದ ತೊನಶ್ಯಾಳ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಗುರುವಾರ ಎಇ ಎಂ.ಎಂ.ವಾಲೀಕಾರ ಅವರು ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಬಸವನಬಾಗೇವಾಡಿ ಮತಕ್ಷೇತ್ರದ ಮುಳವಾಡ ಗ್ರಾಮದಿಂದ ತೊನಶ್ಯಾಳ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಗುರುವಾರ ಎಇ ಎಂ.ಎಂ.ವಾಲೀಕಾರ ಅವರು ಪರಿಶೀಲಿಸಿದರು. ಮುಳವಾಡ-ತೊನಶ್ಯಾಳ ರಸ್ತೆ ಹದಗೆಟ್ಟಿರುವುದರಿಂದ ವಾಹನ ಸವಾರರಿಗೆ, ಜನರಿಗೆ ತುಂಬಾ ತೊಂದರೆ ಉಂಟಾಗಿರುವ ಕುರಿತು ಆ.19ರಂದು ಕನ್ನಡಪ್ರಭ ಹದಗೆಟ್ಟ ರಸ್ತೆ ವಾಹನ ಸವಾರರ ಪರದಾಟ ಶೀರ್ಷಿಕಯಡಿ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಜಿಪಂ ಎಇಇ ವಿಲಾಸ ರಾಠೋಡ ಅವರು ಈ ಭಾಗದ ಸೆಕ್ಷನ್ ಅಧಿಕಾರಿ ಎಇ ಎಂ.ಎಂ.ವಾಲೀಕಾರ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಸ್ತೆ ಸುಧಾರಣೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದರು. ಮುಳವಾಡದಿಂದ ತೊನಶ್ಯಾಳಗೆ ಹೋಗುವ 8 ಕಿ.ಮೀ ರಸ್ತೆ ತುಂಬಾ ಹದಗೆಟ್ಟಿದೆ. 6 ಕಿಮೀ ಡಾಂಬರೀಕರಣ, 2 ಕಿಮೀ ಸಿಸಿ ರಸ್ತೆಗೆ ಪ್ರಸ್ತಾವನೆ ತಯಾರಿಸಿ ಮೇಲಧಿಕಾರಿಗಳ ಸೂಚನೆ ಮೇರೆಗೆ ಸಲ್ಲಿಸಲಾಗುವುದು ಎಂದು ಎಇ ವಾಲೀಕಾರ ಪತ್ರಿಕೆಗೆ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.