ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ತಾಲೂಕಿನ ಶ್ರೀರಂಗಬಂಡಹಳ್ಳಿ, ದಿನ್ನೂರು ಮತ್ತು ರಾಮಸಂದ್ರ ಗ್ರಾಮಗಳಲ್ಲಿ ಸಂಸದರ ಅನುದಾನದಲ್ಲಿ ಅಳವಡಿಸಲಾದ ಹೈ ಮಾಸ್ಟ್ ದೀಪಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ. ಕೇಂದ್ರ ಸಚಿವ ವಿ.ಸೋಮಣ್ಣ ಕೋಲಾರ ಜಿಲ್ಲೆಗೆ ಭೇಟಿ ನೀಡಿ ಹೋದ ನಂತರ ನಮ್ಮ ಒತ್ತಡಕ್ಕೆ ಮಣಿದು ಕಾಮಸಮುದ್ರ ಗ್ರಾಮದ ರೈಲ್ವೆ ಮೇಲ್ಸೇತುವೆ ಜೊತೆಗೆ ದೇಶಿಹಳ್ಳಿ ಸ್ಯಾನಿಟೋರಿಯಂ, ಎಸ್.ಎನ್ ರೆಸಾರ್ಟ್, ಟೇಕಲ್ ಜಂಕ್ಷನ್ ಸೇರಿ ಒಟ್ಟು ೪ ಕಡೆ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಅನುಮೋದನೆಗೆ ರೈಲ್ವೆ ಬೋರ್ಡ್ಗೆ ಕಳುಹಿಸಿದ್ದಾರೆ. ಅನುಮೋದನೆ ಸಿಕ್ಕ ಕೂಡಲೇ ಶೀಘ್ರವಾಗಿ ಕಾಮಗಾರಿಯನ್ನು ಆರಂಭಿಸಲಾಗುತ್ತದೆ. ಹಲವು ವರ್ಷಗಳಿಂದ ಉರಿಗಾಂ ರೈಲ್ವೆ ನಿಲ್ದಾಣದ ಬಳಿ ಮೇಲ್ಸೇತುವೆ ನಿರ್ಮಾಣ ಕಾರ್ಯ ಬಾಕಿ ಇತ್ತು. ಬೆಮೆಲ್ ಮತ್ತು ಉರಿಗಾಂ ಅಧಿಕಾರಿಗಳು ಮತ್ತು ಮುಖಂಡರನ್ನು ಕರೆಸಿ ಡೀಸಿ ಕಚೇರಿಯಲ್ಲಿ ಸಭೆ ಮಾಡುವ ಮೂಲಕ ಬಿಜಿಎಂಎಲ್ ಮತ್ತು ರೈಲ್ವೆ ಬೋರ್ಡ್ ನಡುವೆ ಇದ್ದಂತಹ ಭೂಮಿ ವಿಚಾರದ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಕಾಮಗಾರಿಯನ್ನು ಸಹ ಶೀಘ್ರವಾಗಿ ಆರಂಭಿಸುವ ಭರವಸೆ ನೀಡಿದರು.
ಕಾಮಸಮುದ್ರ ರೈಲ್ವೆ ಬ್ರಿಡ್ಜ್ ನಿರ್ಮಾಣಕ್ಕೆ ೨೦ ಗುಂಟೆ ಭೂಮಿಯನ್ನು ಹಸ್ತಾಂತರ ಮಾಡಬೇಕಾಗಿದ್ದು, ಅದಕ್ಕೆ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಅನುಮೋದನೆ ಬೇಕಾಗಿದೆ. ಜೊತೆಗೆ ರೈಲ್ವೆ ಬೋರ್ಡ್ನಿಂದ ತಾಂತ್ರಿಕ ಯೋಜನೆ ಅನುಮೋದನೆ ಆಗಬೇಕಿದೆ. ಇದೆಲ್ಲಾ ಪೂರ್ಣಗೊಳ್ಳಲು ಕನಿಷ್ಠ ಐದಾರು ತಿಂಗಳು ಕಾಯಬೇಕಿದ್ದು, ಎಲ್ಲವೂ ಅನುಮೋದನೆ ಸಿಕ್ಕ ನಂತರ ಕಾಮಗಾರಿ ಆರಂಭವಾಗಲಿದೆ ಎಂದರು.ಬೂದಿಕೋಟೆ ವೃತ್ತದ ರೈಲ್ವೆ ಬ್ರಿಡ್ಜ್ ಕಾಮಗಾರಿ ಕುರಿತಾಗಿ ಸಚಿವ ವಿ.ಸೋಮಣ್ಣರಿಗೆ ದೂರು ನೀಡಿದ ಹಿನ್ನೆಲೆ ಸಚಿವರು ಗುಣಮಟ್ಟದೊಂದಿಗೆ ಶೀಘ್ರವಾಗಿ ಕಾಮಗಾರಿಯನ್ನು ಪುರ್ಣಗೊಳಿಸಲು ಡಿಆರ್‌ಎಂಗೆ ಸೂಚಿಸಿದ್ದಾರೆ. ಕಾಮಗಾರಿಯ ವೇಗವನ್ನು ಹೆಚ್ಚಿಸಿ ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಮೇಲ್ಸೇತುವೆ ಲೋಕಾರ್ಪಣೆ ಮಾಡಲಾಗುತ್ತದೆ ಎಂದರು.
ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿವಿ.ಮಹೇಶ್, ತಾಪಂ ಮಾಜಿ ಸದಸ್ಯ ಮಾರ್ಕಂಡೇಗೌಡ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಶಿವಕುಮಾರ್, ಮಾಜಿ ಗ್ರಾಪಂ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಸೀತಾರಾಮಪ್ಪ, ಬಾಲಚಂದ್ರ, ಸತೀಶ್ ಕುಮಾರ್ ಗೌಡ, ಬಾಲಕೃಷ್ಣ, ಪ್ರಸನ್ನ, ಮಂಜುನಾಥ, ನಾರಾಯಣಸ್ವಾಮಿ, ಶಿವು, ಮೂರ್ತಿ, ಅಶೋಕ್, ಮುರುಗೇಶ್, ವಿಶ್ವನಾಥಗೌಡ, ಹನುಮಂತು ಮುಂತಾದವರು ಹಾಜರಿದ್ದರು.