ಉಡುಪಿ ಅಗ್ನಿಶಾಮಕ ಇಲಾಖೆ ಆಧುನಿಕರಿಸಲು ಪ್ರಸ್ತಾಪ: ಯಶ್‌ಪಾಲ್ ಸುವರ್ಣ

KannadaprabhaNewsNetwork |  
Published : Apr 29, 2026, 04:00 AM IST
ಶಾಸಕ ಯಶ್‌ಪಾಲ್ ಸುವರ್ಣ ಅಗ್ನಿದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು | Kannada Prabha

ಸಾರಾಂಶ

ಉಡುಪಿಯಲ್ಲಿರುವ ಅಗ್ನಿಶಾಮಕ ದಳದ ವಾಹನಗಳು, ತಂತ್ರಜ್ಞಾನವು ಬಹಳ ಹಳೆಯದಾಗಿವೆ, ಅಗ್ನಿದುರಂತ ಸಂಭವಿಸಿದಾಗ ಅದನ್ನು ತಡೆಯುವುದಕ್ಕೆ ಇಲಾಖೆಗೆ ಸಾಧ್ಯವಾಗುತ್ತಿಲ್ಲ, ಆದ್ದರಿಂದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉಡುಪಿಯ ಅಗ್ನಿಶಾಮಕ ಇಲಾಖೆಯನ್ನು ಆಧುನೀಕರಿಸಬೇಕು ಎಂದು ಗೃಹಸಚಿವ ಡಾ. ಪರಮೇಶ್ವರ್ ಅವರಿಗೆ ಪ್ರಸ್ತಾಪ ಸಲ್ಲಿಸುವುದಾಗಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿಯಲ್ಲಿರುವ ಅಗ್ನಿಶಾಮಕ ದಳದ ವಾಹನಗಳು, ತಂತ್ರಜ್ಞಾನವು ಬಹಳ ಹಳೆಯದಾಗಿವೆ, ಅಗ್ನಿದುರಂತ ಸಂಭವಿಸಿದಾಗ ಅದನ್ನು ತಡೆಯುವುದಕ್ಕೆ ಇಲಾಖೆಗೆ ಸಾಧ್ಯವಾಗುತ್ತಿಲ್ಲ, ಆದ್ದರಿಂದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉಡುಪಿಯ ಅಗ್ನಿಶಾಮಕ ಇಲಾಖೆಯನ್ನು ಆಧುನೀಕರಿಸಬೇಕು ಎಂದು ಗೃಹಸಚಿವ ಡಾ. ಪರಮೇಶ್ವರ್ ಅವರಿಗೆ ಪ್ರಸ್ತಾಪ ಸಲ್ಲಿಸುವುದಾಗಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸಂಜೆ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಅಗ್ನಿದುರಂತ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಉಡುಪಿಯಲ್ಲಿರುವ ಅಗ್ನಿಶಾಮಕ ಇಲಾಖೆಯವ ವಾಹನಗಳು ದಶಕಗಳಷ್ಟು ಹಳೆಯದಾಗಿವೆ, ಅವುಗಳಿಗೆ ನೀರು ತುಂಬಿಸಿ ಕೇವಲ 5 ಕಿಮಿ ಆಗಮಿಸುವುದಕ್ಕೆ 45 ನಿಮಿಷಕ್ಕೂ ಹೆಚ್ಚು ತಗಲಿದೆ. ಇದರಿಂದ ಅನಾಹುತ ಇನ್ನೂ ಹೆಚ್ಚಾಗುವುದಕ್ಕೆ ಕಾರಣವಾಯಿತು. ಆದ್ದರಿಂದ ಅವುಗಳನ್ನು ಬದಲಾಯಿಸುವುದು ಅಗತ್ಯವಾಗಿದೆ ಎಂದರು.

ಬ್ರಹ್ಮಾವರ ಮತ್ತು ಮಣಿಪಾಲಗಳಲ್ಲಿ ಪ್ರತ್ಯೇಕ ಅಗ್ನಿಶಾಮಕ ಠಾಣೆಗಳನ್ನು ತೆರೆಯುವುದಕ್ಕೆ ಸರ್ಕಾರದಿಂದ ಮಂಜೂರಾತಿ ಸಿಕ್ಕಿದೆ, ಆ ಪೈಕಿ ಮಣಿಪಾಲದ ಠಾಣೆಯ ಕಾಮಗಾರಿ ಕೂಡ ಆರಂಭವಾಗಿದೆ ಎಂದವರು ಹೇಳಿದರು.ಈ ಹಿಂದೆ ಮಲ್ಪೆ ಬಂದರಿನಲ್ಲಿ ಅಗ್ನಿ ದುರಂತ ಸಂಭವಿಸಿದ ಮೇಲೆ ಪ್ರತಿಯೊಂದು ಮೀನುಗಾರಿಕಾ ಬೋಟುಗಳಲ್ಲಿ ಕ್ಷಿಪ್ರ ಅಗ್ನಿಶಮನ ಉಪಕರಣಗಳನ್ನು ಅಳವಡಿಸಲಾಗಿದೆ. ಅದೇ ರೀತಿ ನಗರದ ಎಲ್ಲಾ ಅಂಗಡಿದಾರರು ಕಡ್ಡಾಯವಾಗಿ ಅಗ್ನಿಶಮನ ಉಪಕರಣಗಳನ್ನು ಇಟ್ಟುಕೊಳ್ಳಬೇಕು ಎಂದವರು ಹೇಳಿದರು.ನಗರದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಷ್ಟಕ್ಕೊಳಗಾದ ಅಂಗಡಿ ಮಾಲಕರಿಗೆ ಗರಿಷ್ಠ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸುತ್ತೇನೆ, ಈ ಬಗ್ಗೆ ಈಗಾಗಲೇ ಡಿಸಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ ಎಂದರು.ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಆಯುಕ್ತ, ಮಾಜಿ ಅಧ್ಯಕ್ಷರು, ಅಂಗಡಿ ಮಾಲಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಾಪರ್‌ ರ್‍ಯಾಂಕ್‌ ಕೊಟ್ಟ ಶಾಲೆಯಲ್ಲಿ ಸೌಲಭ್ಯಗಳೇ ಇಲ್ಲ
ಕುಡಿಯುವ ನೀರಿಗೆ ಅಧಿಕಾರಿಗಳು ತುರ್ತು ಸ್ಪಂದಿಸಿ