ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ: ಮೂವರ ಮೇಲೆ ಪ್ರಕರಣ ದಾಖಲು

KannadaprabhaNewsNetwork |  
Published : Sep 03, 2024, 01:35 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಮುರ್ಡೇಶ್ವರ ಸಬ್ ಇನ್ಸಪೆಕ್ಟರ್ ಶಿವಕುಮಾರ ಎಸ್.ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಭಟ್ಕಳ: ಮುರ್ಡೇಶ್ವರದ ಬಸ್ತಿಮಕ್ಕಿಯಲ್ಲಿರುವ ಲಾಡ್ಜ್‌ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿತ ಮೇರೆಗೆ ದಾಳಿ ನಡೆಸಿದ ಕಾರವಾರದ ಸಿಇಎನ್ ಅಪರಾಧ ಠಾಣೆಯ ಪೊಲೀಸರು ಮೂವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿದ್ದಾಪುರದ ದೊಡ್ಮನೆ ಮೋಹನ ಮಾಬ್ಲು ಗೌಡಾ, ಸೊರಬದ ತವನಂದಿಯ ಶಿವಕುಮಾರ ಬಂಗಾರಪ್ಪ ನಾಯ್ಕ, ಮುರ್ಡೇಶ್ವರದ ಶೆಟ್ಟರಕೇರಿ ನಿವಾಸಿ ಈಶ್ವರ ಶನಿಯಾರ ನಾಯ್ಕ ಅವರ ಸಹಯೋಗದಲ್ಲಿ ಮಹಿಳೆಯೋರ್ವಳನ್ನು ಮುರ್ಡೇಶ್ವರದ ಬಸ್ತಿಮಕ್ಕಿಯಲ್ಲಿರುವ ಲಾಡ್ಜ್‌ಗೆ ಕರೆಯಿಸಿ ವೇಶ್ಯಾವಾಟಿಕೆ ನಡೆಸುತ್ತಿತ್ತು. ಆಗ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಕಾಲಕ್ಕೆ ನೊಂದ ಮಹಿಳೆ ತಪ್ಪಿಸಿಕೊಂಡಿದ್ದಾಳೆ. ಆರೋಪಿತರಾದ ೧ ಮತ್ತು ೨ನೇಯವರನ್ನು ವಶಕ್ಕೆ ಪಡೆದಿದ್ದು, ಮುರ್ಡೇಶ್ವರ ಸಬ್ ಇನ್ಸಪೆಕ್ಟರ್ ಶಿವಕುಮಾರ ಎಸ್.ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಗೆ ಹಲ್ಲೆ, ಜೀವ ಬೆದರಿಕೆ: ದೂರು ದಾಖಲು

ಭಟ್ಕಳ: ಶಾಲಾ ವಾಹನದ ಚಾಲಕನೋರ್ವ ನಡೆದು ಹೋಗುತ್ತಿದ್ದ ಮುಟ್ಟಳ್ಳಿಯ ರಾಘವೇಂದ್ರ ರಾಮಚಂದ್ರ ನಾಯ್ಕ ಎಂಬವರಿಗೆ ವಾಹನವನ್ನು ಹಾಯಿಸಲು ಬಂದಿದ್ದಲ್ಲದೇ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಟಿವಿ ಕೇಬಲ್ ಆಪರಟೇರ್ ಮತ್ತು ಬಿಜೆಪಿ ಹಿಂದುಳಿದ ವರ್ಗಗಳ ಕಾರ್ಯದರ್ಶಿಯೂ ಆಗಿರುವ ಮುಟ್ಟಳ್ಳಿಯ ರಾಘವೇಂದ್ರ ರಾಮಚಂದ್ರ ನಾಯ್ಕ ಠಾಣೆಯಲ್ಲಿ ನೀಡಿದ ದೂರಿನಲ್ಲಿ, ಸೋಮವಾರ ಮಧ್ಯಾಹ್ನ ಕೋಲಾಪೇರೆಡೆಸ್ ಹೋಟೆಲ್ ಹತ್ತಿರ ಇರುವ ಟಿವಿ ಕೇಬಲ್ ಕಚೇರಿಗೆ ಹೋಗಲು ಗೆಳೆಯನಾದ ಕುಮಾರ ಮಂಜಪ್ಪ ನಾಯ್ಕ ಹನುಮಾನ ನಗರ ಇವರ ಸಂಗಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಂಜುಮನ್ ಗರ್ಲ್ಸ ಕಾಲೇಜಿಗೆ ಸೇರಿದ ವಾಹನದ ಚಾಲಕ ಕೊಲೆ ಮಾಡುವ ಉದ್ದೇಶದಿಂದ ವಾಹನವನ್ನು ಮೈಮೇಲೆ ಹತ್ತಿಸಲು ಬಂದಾಗ ನಾನು ತಪ್ಪಿಸಿಕೊಂಡು ಬಿದ್ದಿದ್ದು, ನಂತರ ಆರೋಪಿ ತನ್ನ ವಾಹನ ನಿಲ್ಲಿಸಿ ಹತ್ತಿರ ಬಂದು ಅಡ್ಡಗಟ್ಟಿ ಇಲ್ಲಿಯೇ ಕೊಲೆ ಮಾಡುತ್ತೇನೆಂದು ಹೇಳಿದ್ದಲ್ಲದೇ ಹಲ್ಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.ಹಲ್ಲೆಗೊಳಗಾದ ರಾಘವೇಂದ್ರ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ