ದೇಶಿ ಸಂಸ್ಕೃತಿ, ಸಂಪ್ರದಾಯ ರಕ್ಷಿಸಿ

KannadaprabhaNewsNetwork |  
Published : Oct 02, 2024, 01:05 AM IST
ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಕೊಡತಾಳ್‌ ಗ್ರಾಮದಲ್ಲಿ ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರವನ್ನು ಶಾಸಕ ಡಿ.ಜಿ.ಶಾಂತನಗೌಡರು ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಷ್ಟ್ರೀಯ ಸೇವಾ ಯೋಜನೆಯಂತ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ದೇಶದ ಪ್ರಗತಿಗೆ ಶ್ರಮಿಸಬೇಕಾಗಿದೆ. ಇಂತಹ ಶಿಬಿರಗಳಲ್ಲಿ ಭಾಗವಹಿಸುವದರಿಂದ ಹಳ್ಳಿಗಳ ಉದ್ಧಾರಕ್ಕೆ ನೆರವಾಗಲಿವೆ. ಸಮಾಜಮುಖಿ ಕೆಲಸಗಳೊಂದಿಗೆ ದೇಶಿಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಯುವಕರ ಮೇಲಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ನ್ಯಾಮತಿಯಲ್ಲಿ ಹೇಳಿದ್ದಾರೆ.

- ಕೊಡತಾಳ್‌ನಲ್ಲಿ ಎನ್ನೆಸ್ಸೆಸ್‌ ವಾರ್ಷಿಕ ವಿಶೇಷ ಶಿಬಿರ - - - ನ್ಯಾಮತಿ: ರಾಷ್ಟ್ರೀಯ ಸೇವಾ ಯೋಜನೆಯಂತ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ದೇಶದ ಪ್ರಗತಿಗೆ ಶ್ರಮಿಸಬೇಕಾಗಿದೆ. ಇಂತಹ ಶಿಬಿರಗಳಲ್ಲಿ ಭಾಗವಹಿಸುವದರಿಂದ ಹಳ್ಳಿಗಳ ಉದ್ಧಾರಕ್ಕೆ ನೆರವಾಗಲಿವೆ. ಸಮಾಜಮುಖಿ ಕೆಲಸಗಳೊಂದಿಗೆ ದೇಶಿಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಯುವಕರ ಮೇಲಿದೆ ಎಂದು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ಕೊಡತಾಳ್‌ ಗ್ರಾಮದಲ್ಲಿ ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪಠ್ಯವೊಂದೇ ಮುಖ್ಯವಾಗಬಾರದು. ಇದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಪರಿಶ್ರಮವನ್ನು ಸಮಾಜಕ್ಕೆ ನೀಡಬೇಕು. ಆಗ ಮಾತ್ರ ಸಾರ್ಥಕತೆ ಬರುತ್ತದೆ. ಶಿಬಿರಗಳಲ್ಲಿ ವಿದ್ಯಾರ್ಥಿಗಳು ಜೀವನದ ಅವಿಸ್ಮರಣೀಯ ಘಟನೆಗಳಿಗೆ ಕಾರಣವಾಗುವಂತಹ ಸೇವೆಗಳನ್ನು ಮಾಡಬೇಕು ಎಂದು ಹೇಳಿದರು.

ಯುವ ರಂಗಕರ್ಮಿ ಹಾಗೂ ಚಲನಚಿತ್ರ ನಟ ಚೇತನ್‌ ಸಿ. ರಾಯನಹಳ್ಳಿ ಮಾತನಾಡಿ, ಯುವಕರು ಪುಸ್ತಕವನ್ನು ಪ್ರೀತಿಸಬೇಕು, ವೃಥಾ ಕಾಲಾಹರಣ ಮಾಡಬಾರದು. ಎಲ್ಲರಲ್ಲಿ ಸಮನ್ವಯ ಭಾವ, ಸಾಮರಸ್ಯದ ಮನೋಭಾವ ಬೆಳೆಯಬೇಕಾದ ಅವಶ್ಯಕತೆ ಇದೆ. ಸುಂದರ ಸಮಾಜ ನಿರ್ಮಾಣದ ಗುರಿ ಸರ್ವರದಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಕೋದಂಡ ಎಚ್‌.ಎಸ್‌. ವಹಿಸಿದ್ದರು. ಶಿಬಿರಾಧಿಕಾರಿ ಕಿರಣ್‌ಕುಮಾರ್‌ ಮಾತನಾಡಿದರು. ಗ್ರಾ.ಪಂ. ಸದಸ್ಯ ಎಂ.ಜಿ.ವಸಂತ ಕೊಡತಾಳ್‌, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರುದ್ರೇಶಪ್ಪ ಕೊಡತಾಳ್‌, ಸದಸ್ಯರಾದ ಗಿರೀಶ ಸವಳಂಗ, ನಾಗರಾಜ ಸೋಗಿಲು, ನಾಗರಾಜ ಮಾಸ್ಟರ್‌, ಹಾಲೇಶ ನಾಯ್ಕ, ಉಪನ್ಯಾಸಕರಾದ ಚಿತ್ತರಂಜನ್‌, ಬಸವರಾಜ್‌ ಬಾಳೇರ, ಸುಬ್ರಹ್ಮಣ್ಯ ಮತ್ತಿತರರಿದ್ದರು.

- - - (-ಫೋಟೋ:)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ