ಪಕ್ಷಿ ಸಂಕುಲ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ರಮ್ಯ

KannadaprabhaNewsNetwork |  
Published : Feb 15, 2025, 12:33 AM IST
್ು | Kannada Prabha

ಸಾರಾಂಶ

ಶೃಂಗೇರಿ, ಪಕ್ಷಿಗಳು ನಿಸರ್ಗದ ಕೊಡುಗೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪಕ್ಷಿ ಸಂಕುಲ ಅಳಿವಿನಂಚಿಗೆ ತಲುಪುತ್ತಿದೆ. ಪಕ್ಷಿ ಸಂಕುಲವನ್ನು ಉಳಿಸಿ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ಹೇಳಿದರು.

ಯಡದಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಪಕ್ಷಿಗಳು ನಿಸರ್ಗದ ಕೊಡುಗೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪಕ್ಷಿ ಸಂಕುಲ ಅಳಿವಿನಂಚಿಗೆ ತಲುಪುತ್ತಿದೆ. ಪಕ್ಷಿ ಸಂಕುಲವನ್ನು ಉಳಿಸಿ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ಹೇಳಿದರು.

ಯಡದಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದಲ್ಲಿ ಪಕ್ಷಿಗಳ ಕುರಿತು ಮಾಹಿತಿ ನೀಡಿದರು. ನಮ್ಮ ಮನೆ ಸುತ್ತಮುತ್ತ, ತೋಟ, ಅರಣ್ಯ ಹೀಗೆ ವಿವಿಧೆಡೆ ಪಕ್ಷಿಗಳು ಆಹಾರ ಅರಸುತ್ತಾ ತಮ್ಮದೇ ಶೈಲಿಯಲ್ಲಿ ಬದುಕುತ್ತಿವೆ ಎಂದರು.

ಗುಬ್ಬಚ್ಚಿಗಳು, ಪಾರಿವಾಳಗಳ ಸಂಖ್ಯೆ ನಶಿಸಿ ಹೋಗುತ್ತಿದೆ. ನಗರಿಕರಣ, ಮೊಬೈಲ್ ತರಂಗಾಂತರಂಗಗಳು ಇನ್ನಿತರ ಪರಿಣಾಮಗಳಿಂದ ವಿನಾಶದಂತಿಗೆ ತಲುಪುತ್ತಿವೆ. ಪಕ್ಷಿಗಳ ಬಗ್ಗೆ ಮಾಹಿತಿ ತಿಳಿಯಲು ಪಕ್ಷಿತಜ್ಞ ಸಲೀಂ ಅಲಿ ಪಕ್ಷಿಸಂಕುಲದ ಉಳಿವಿಗಾಗಿ ಶ್ರಮಿಸಿ ಮಹತ್ತರ ಕೊಡುಗೆ ನೀಡಿದ್ದಾರೆ. ಶಿವರಾಂ ಕಾರಂತ, ತೇಜಸ್ವಿಯಂತಹ ಸಾಹಿತಿಗಳು ಪಕ್ಷಿಗಳ ಕುರಿತು ಲೇಖನ, ಕೃತಿಗಳನ್ನು ರಚಿಸುವ ಜೊತೆಗೆ ಅವುಗಳ ಉಳಿವಿಗೆ ಶ್ರಮಿಸಿದ್ದಾರೆ ಎಂದರು.

ಶಾಲೆಗಳಲ್ಲಿ ಪಕ್ಷಿಗಳ ಕುರಿತು ಮಾಹಿತಿ ಕಾರ್ಯಾಗಾರ, ಪ್ರಾತ್ಯಕ್ಷಿತೆಗಳು ಹೆಚ್ಚು ಹೆಚ್ಚು ನಡೆಯಬೇಕಿದೆ. ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂಂದರು.

ಅಭಿಯಾನದ ಸದಸ್ಯ ನಿತ್ಯಾನಂದ ಶೆಟ್ಟಿ ಮಾತನಾಡಿ ಪಕ್ಷಿಗಳ ಬಂಧನ ತರವಲ್ಲ, ಪಕ್ಷಿಗಳನ್ನು ಬಂಧಿಸಿ ಅವುಗಳ ಸ್ವಾತಂತ್ರ್ಯ ಕಸಿಯುವುದು ಸರಿಯಲ್ಲ. ಆ ಮನಸ್ಸು ನಮ್ಮದಾಗಬಾರದು. ವಿನಾಶದಂಚಿನಲ್ಲಿರುವ ಅಪರೂಪದ ಪಕ್ಷಿ ಪ್ರಭೇದ ಗಳನ್ನ ಗುರುತಿಸಿ ಉಳಿಸಿ ಸಂರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕ ದಿನೇಶ್‌ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

14 ಶ್ರೀ ಚಿತ್ರ 1-

ಶೃಂಗೇರಿ ತಾಲೂಕಿನ ಯಡದಾಳು ಸರ್ಕಾರಿ ಶಾಲಾವರಣದಲ್ಲಿ ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದಲ್ಲಿ ರಮ್ಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

PREV

Recommended Stories

ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಜೈಲಲ್ಲಿರುವ ಸಿಎಂ, ಸಚಿವರ ಆಗಬೇಕು. ಏಕೆ ಗೊತ್ತಾ?