ಅರಣ್ಯ ಸಂಪತ್ತು ರಕ್ಷಣೆ ಪ್ರತಿ ನಾಗರಿಕರ ಕರ್ತವ್ಯ

KannadaprabhaNewsNetwork |  
Published : Sep 12, 2026, 02:45 AM IST
ಅರಣ್ಯ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅರಣ್ಯ ಸಂಪತ್ತನ್ನು ಕಳೆದುಕೊಂಡಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ಅರಣ್ಯ ಸಂಪತ್ತನ್ನು ರಕ್ಷಿಸಬೇಕು. ಅರಣ್ಯ ಸಂಪತ್ತನ್ನು ರಕ್ಷಿಸುವುದರಿಂದ ಇಡೀ ಜಗತ್ತಿನ ರಕ್ಷಣೆಯನ್ನು ಮಾಡಿದಂತೆ.

ಶಿರಸಿ: ಅರಣ್ಯ ಸಂಪತ್ತು ರಕ್ಷಣೆ ಮಾಡುವುದು ಬರೀ ಅರಣ್ಯ ಇಲಾಖೆಗೆ ಸೀಮಿತವಾಗಿರದೆ ನಮ್ಮ ಜಿಲ್ಲೆಯ ರಾಜ್ಯದ ಮತ್ತು ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅಲ್ತಾಫ್ ಹುಸೇನ್ ಸಾಬ್ ಖನಗಾಂವಿ ಅಭಿಪ್ರಾಯಪಟ್ಟರು.ನಗರದ ಅರಣ್ಯ ಇಲಾಖೆ, ಕೆನರಾ ವೃತ್ತ ಶಿರಸಿ ಆಶ್ರಯದಲ್ಲಿ ಶುಕ್ರವಾರ ಸಹಾಯಕ ಅರಣ್ಯ ಸಂರಕ್ಷಣಾ ಇಲಾಖೆಯ ಮಕ್ಕಳ ಉದ್ಯಾನವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ಈ ಭೂಮಿಯ ಮೇಲೆ ಮಾನವನು ಎಸಗಿದ ದೌರ್ಜನ್ಯದ ಪ್ರತಿಫಲವಾಗಿ ಸಾಕಷ್ಟು ಸಾವು- ನೋವುಗಳನ್ನು ಅನುಭವಿಸಿದ್ದೇವೆ. ಕೋವಿಡ್ ಸಮಯದಲ್ಲಿ ಆಕ್ಸಿಜನ್ ಇಲ್ಲದೆ ಈ ಹಿಂದೆ ಹಲವಾರು ಸಮಸ್ಯೆಗಳನ್ನು ಅನುಭವಿಸಿದ್ದೇವೆ ಎಂದರು.ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅರಣ್ಯ ಸಂಪತ್ತನ್ನು ಕಳೆದುಕೊಂಡಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ಅರಣ್ಯ ಸಂಪತ್ತನ್ನು ರಕ್ಷಿಸಬೇಕು. ಅರಣ್ಯ ಸಂಪತ್ತನ್ನು ರಕ್ಷಿಸುವುದರಿಂದ ಇಡೀ ಜಗತ್ತಿನ ರಕ್ಷಣೆಯನ್ನು ಮಾಡಿದಂತೆ ಎಂದರು.ಡಿವೈಎಸ್ಪಿ ಗೀತಾ ಪಾಟೀಲ್ ಮಾತನಾಡಿ, ಅರಣ್ಯ ಸಂಪತ್ತು ಇಲ್ಲದಿದ್ದರೆ ಮನಿಷ್ಯನಿಗೆ ಶುದ್ಧ ಆಮ್ಲಜನಕ ಸಿಗುತ್ತಿರಲಿಲ್ಲ, ಅರಣ್ಯದಲ್ಲಿ ಅಕ್ರಮವಾಗಿ ಮರ ಕಡಿಯುವವರನ್ನು, ವನ್ಯಜೀವಿಗಳ ಹರಣ ಮಾಡುವವರನ್ನು, ಅರಣ್ಯದಲ್ಲಿ ಅಕ್ರಮ ಚಟುವಟಿಕೆಗಳನ್ನು ಮಾಡುವವರನ್ನು ಕಂಡುಹಿಡಿದು ಶಿಕ್ಷೆ ಕೊಡಿಸಲು ಹೋಗಿ ಅನೇಕ ಜನ ಅರಣ್ಯ ಪಾಲಕರು ತಮ್ನ ಜೀವ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಇನ್ನು ಮುಂದೆ ಪೋಲಿಸ್ ಇಲಾಖೆಯು ನಿಮಗೆ ಸಹಕಾರ ನೀಡಲಿದೆ ಎಂದರು.ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ಮಾತನಾಡಿ, ಅರಣ್ಯಾಧಿಕಾರಿಗಳ ಶೌರ್ಯ ಹಾಗೂ ತ್ಯಾಗವನ್ನು ಸ್ಮರಿಸುತ್ತಾ ಅರಣ್ಯ ಸಂಪತ್ತನ್ನು ಕಾಪಾಡುವುದು ಬಹಳ ಕಷ್ಟದ ಕೆಲಸ. ಅಂತಹ ಕೆಲಸವನ್ನು ನಮ್ಮ ಅರಣ್ಯ ಇಲಾಖೆ ಮಾಡುತ್ತಾ ಬಂದಿದೆ ಎಂದರು.

ವಿಸ್ತಾರವಾದ ಅರಣ್ಯ ಸಂಪತ್ತನ್ನು ರಕ್ಷಣೆ ಮಾಡಲು ಸುಮಾರು 8 ಸಾವಿರದಿಂದ ದಿಂದ 9 ಸಾವಿರ ಸಿಬ್ಬಂದಿ ಬೇಕಾಗುತ್ತದೆ. ಆದರೆ ನಮ್ಮ ಇಲಾಖೆಯಲ್ಲಿರುವ ಸಿಬ್ಬಂದಿ ಸಂಖ್ಯೆ ಕೇವಲ 865 ಇದೆ ಎಂದರು.

ಈ ಸಂದರ್ಭದಲ್ಲಿ ಶಿರಸಿ ವಿಭಾಗದ ಉಪ ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಸಹಾಯಕ ಅರಣ್ಯಾಧಿಕಾರಿಗಳಾದ ಅಮಿತ್ ಚೌಹಾನ್, ದೀಪಾ ಸಿವಿ, ಮತ್ತು ವಲಯ ಅರಣ್ಯ ಅಧಿಕಾರಿಗಳಾದ ಭವ್ಯ ನಾಯ್ಕ್, ಉಷಾ, ರೋಮನ್ ಶೇಖ್, ಶಿವಾನಂದ್ ನಿಂಗಾಣಿ, ಗಿರೀಶ್ ನಾಯ್ಕ್, ಕಾರ್ತಿಕ್ ಕಂಬಳಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಿರಸಿ ವಿಭಾಗದ ಉಪ ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಸಹಾಯಕ ಅರಣ್ಯಾಧಿಕಾರಿಗಳಾದ ಅಮಿತ್ ಚೌಹಾನ್, ದೀಪಾ ಸಿವಿ, ಮತ್ತು ವಲಯ ಅರಣ್ಯ ಅಧಿಕಾರಿಗಳಾದ ಶ್ರೀಮತಿ ಭವ್ಯ ನಾಯ್ಕ್, ಶ್ರೀಮತಿ ಉಷಾ, ಶ್ರೀಮತಿ ರೋಮನ್ ಶೇಖ್, ಶಿವಾನಂದ್ ನಿಂಗಾಣಿ, ಗಿರೀಶ್ ನಾಯ್ಕ್, ಕಾರ್ತಿಕ್ ಕಂಬಳಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಜನಜೀವನ ಅಭಿವೃದ್ಧಿ: ರಾಬಿನ್ ದೇವಯ್ಯ
ರಾಮಕೃಷ್ಣರ ಸಾಹಿತ್ಯ ಕ್ಷೇತ್ರ ಕೊಡುಗೆ ಪರಿಚಯ ಅಗತ್ಯ: ನಾಗೇಂದ್ರಬಾಬು