ದೇಶದಲ್ಲಿ ಹಿಂದೂ ಸಮಾಜವನ್ನು ಜಾಗೃತಿಗೊಳಿಸುವುದನ್ನು ವಿಹಿಂಪ ಕಳೆದ 60 ವರ್ಷದಿಂದ ಮಾಡುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಧಾರ್ಮಿಕ ಪುಂಜದ ಕ್ಷೇತ್ರಿಯ ಪ್ರಮುಖ ಬಸವರಾಜ ಜಿ. ಹೇಳಿದರು.
ಲಕ್ಷ್ಮೇಶ್ವರ: ದೇಶದಲ್ಲಿ ಹಿಂದೂ ಸಮಾಜವನ್ನು ಜಾಗೃತಿಗೊಳಿಸುವುದನ್ನು ವಿಹಿಂಪ ಕಳೆದ 60 ವರ್ಷದಿಂದ ಮಾಡುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಧಾರ್ಮಿಕ ಪುಂಜದ ಕ್ಷೇತ್ರಿಯ ಪ್ರಮುಖ ಬಸವರಾಜ ಜಿ. ಹೇಳಿದರು.
ಭಾನುವಾರ ಸಂಜೆ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಲಕ್ಷ್ಮೇಶ್ವರ ಪ್ರಖಂಡದಿಂದ ಧರ್ಮ ರಕ್ಷಾನಿಧಿ ಸಮರ್ಪಣೆ ಹಾಗೂ ಮಹಾ ಕುಂಭಮೇಳ ದರ್ಶನಾರ್ಥಿ ಬಂಧುಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಗಂಗಾ ಯಮುನಾ ಸರಸ್ವತಿ ನದಿಗಳು ಸೇರುವ ತ್ರಿವೇಣಿ ಸಂಗಮವೆ ಪ್ರಯಾಗರಾಜ. ಸರ್ವೇ ಜನ ಸುಖಿನೋ ಭವಂತು ಎಂದು ಹೇಳುವ ಧರ್ಮ ಹಿಂದೂ ಧರ್ಮ ಜಗತ್ತಿಗೆ ಮಂಗಲವನ್ನು ಬಯಸುವ ಧರ್ಮವಾಗಿದೆ. 144 ವರ್ಷಕೊಮ್ಮೆ ನಡೆಯುವ ಮಹಾಕುಂಭಮೇಳ ಜಗತ್ತಿನಲ್ಲಿ ಎಲ್ಲಿ ನಡೆಯುವುದಿಲ್ಲ. ಅತ್ಯಂತ ಅದ್ಭುತ ದೇಶದಲ್ಲಿ ಮಹಾಕುಂಭ ಮೇಳ ನಡೆದಿದೆ. ಅಂದಾಜು 66 ಕೋಟಿ ಜನ ಸ್ನಾನ ಮಾಡಿ ಪವಿತ್ರರಾಗಿದ್ದಾರೆ. ಶ್ರೀಮಂತ, ಬಡವ, ಜಾತಿಯ ಭೇದ ಭಾವವಿಲ್ಲದೆ, ನಾವೆಲ್ಲರೂ ಹಿಂದೂಗಳು ಒಂದು ಎಂಬ ಭಾವದಿಂದ ಪವಿತ್ರ ಸ್ನಾನ ಮಾಡಿದ್ದಾರೆ. ಮಹಾಕುಂಭಮೇಳ ಸ್ನಾನ ಮಾಡುವುದರಿಂದ ಅಮೃತತ್ವ, ಪುಣ್ಯ ಬರುತ್ತದೆ. ಜೀವನ ಮಂಗಲವಾಗುತ್ತದೆ ಎಂಬುದು ಸಾವಿರಾರು ವರ್ಷಗಳ ನಂಬಿಕೆ. ಹಿಂದೂಗಳಲ್ಲಿ ಒಗ್ಗಟಿನ ಕೊರತೆ ಕಾಡುತ್ತಿದ್ದು. ಎಲ್ಲರೂ ಒಂದು ಎಂದು ಬಾಳಬೇಕಾಗಿದೆ. ಪ್ರತಿಯೊಬ್ಬ ಹಿಂದೂ ತಾನು ದುಡಿದ ದುಡ್ಡಿನಲ್ಲಿ ಸ್ವಲ್ಪನ್ನಾದರೂ ಹಿಂದೂ ಧರ್ಮ ರಕ್ಷಣೆಗೆ ಸಮರ್ಪಣೆ ಮಾಡಬೇಕು. ಅನ್ಯ ಧರ್ಮಿಯ ಯುವಕರು ಪ್ರೀತಿ ಹೆಸರಲ್ಲಿ ಹಿಂದೂ ಧರ್ಮದ ಹುಡುಗಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದು, ಅದನ್ನು ತಡೆಯುವ ಕೆಲಸ ವಿಹಿಂಪ ಮಾಡುತ್ತಿದೆ. ಅದೇ ರೀತಿ ಮತಾಂತರ ತಡೆಯಲು, ಗೋರಕ್ಷಣೆ ಮಾಡಲು ಹಿಂದೂಗಳು ಸನ್ನದ್ದರಾಗಿರಬೇಕು. ಕಣ್ಣಿಗೆ ಕಾಣುವ ದೇವರು ಏನಾದರೂ ಇದ್ದರೆ ಅದು ಗೋಮಾತಾ ಮಾತ್ರ ಎಂದು ಹೇಳಿದರು.
ದಿವ್ಯಸಾನಿಧ್ಯ ವಹಿಸಿದ್ದ ಲಕ್ಷ್ಮೇಶ್ವರ ಕರೆವಾಡಿಮಠದ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ ಹಿಂದೂಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ಸಂಸ್ಕಾರ ನೀಡುಬೇಕು. ಹಿಂದೂ ಧರ್ಮದ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ವಿಹಿಂಪ ಜಿಲ್ಲಾ ಉಪಾಧ್ಯಕ್ಷೆ ರಾಣಿ ಚಂದಾವರಿ ಹೆಣ್ಣುಮಕ್ಕಳು ಹಿಂದೂ ಧರ್ಮ ರಕ್ಷಣೆಗೆ ಸನ್ನದ್ಧರಾಗಿರಬೇಕು. ಯುವತಿಯರು ಅನ್ಯ ಧರ್ಮಿಯ ಯುವಕರ ಪ್ರೀತಿಯ ಮೋಸದ ಜಾಲಕ್ಕೆ ಬೀಳದಿರಿ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.