ಕನ್ನಡಪ್ರಭ ವಾರ್ತೆ ಕೆಜಿಎಫ್ದೇಶದಲ್ಲಿ ಜಾರಿಗೆ ಬಂದಿರುವ ಹೊಸ ಕಾನೂನುಗಳಲ್ಲಿ ಹಿಂದಿನ ಕಾನೂನಿನಲ್ಲಿರುವ ಅಂಶಗಳಿದ್ದು, ‘ಸರ್ಕಾರದ ವಿರುದ್ಧ ಅಪರಾಧ’ಗಳು ಎಂಬ ಹೊಸ ಸೆಕ್ಷನ್ ಸೇರಿಸಲಾಗಿದೆ ಎಂದು ರಾಜ್ಯ ಪೊಲೀಸ್ ಇಲಾಖೆಯ ಪ್ರಾಧಿಕಾರದ ದೂರುದಾರರ ಅಧ್ಯಕ್ಷ ಹಾಗೂ ನಿವೃತ್ತ ನ್ಯಾಯಾಧೀಶ ಎನ್.ಕೆ.ಸುದೀಂದ್ರರಾವ್ ವಿವರಿಸಿದರು.
ಐಪಿಸಿ, ಸಿಆರ್‌ಪಿಸಿ ಬದಲು
ಭಾರತೀಯ ದಂಡ ಸಂಹಿತೆ(ಐಪಿಸಿ) ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ ಅಪರಾಧ ಪ್ರಕ್ರಿಯಾ ಸಂಹಿತೆಯ(ಸಿಆರ್‌ಪಿಸಿ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಸಾಕ್ಷ್ಯ ಕಾಯ್ದೆಯ ಜಾಗದಲ್ಲಿ ಭಾರತೀಯ ಸಾಕ್ಷ್ಯ ಕಾಯ್ದೆ ಜಾರಿಯಾಗಿರುವ ಕುರಿತು ಮಾಹಿತಿ ನೀಡಿದರು.ಹಾಲಿ ಇರುವ ಕಾನೂನುಗಳು ಬ್ರಿಟಿಷ್ ಆಡಳಿತವನ್ನು ರಕ್ಷಿಸುವ ಮತ್ತು ಬಲಪಡಿಸುವ ನಿಟ್ಟಿನಲ್ಲಿ ಗಮನ ಹರಿಸಿದ್ದವು, ಇದರಲ್ಲಿ ಶಿಕ್ಷೆ ನೀಡುವುದೇ ಮುಖ್ಯ ಗುರಿಯಾಗಿದ್ದು, ನ್ಯಾಯದಾನಕ್ಕೆ ಆದ್ಯತೆ ಇರಲಿಲ್ಲ, ಅವುಗಳನ್ನು ಬದಲಿಸುವ ಮೂಲಕ ಮೂರು ಹೊಸ ಕಾನೂನುಗಳು ಭಾರತೀಯ ನಾಗರೀಕರ ಹಕ್ಕುಗಳನ್ನು ಕಾಪಾಡುವ ಉದ್ದೇಶ ಹೊಂದಿವೆ ಎಂದರು.
ಪ್ರಾಸ್ತಾವಿಕ ಕಾನೂನಿನಲ್ಲಿ ದೇಶದ್ರೋಹ ಎಂಬ ಪದ ಇಲ್ಲ, ಅದನ್ನು ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆ ಅಪಾಯ ದಂದೊಡ್ಡುವ ಕೃತ್ಯಗಳಿಗಾಗಿ ಸೆಕ್ಷನ್ ೧೫೦ ಅನ್ನು ದೇಶದ್ರೋಹದ ಕಾನೂನಿನ ಬದಲಿಗೆ ಜಾರಿಗೆ ತರಲಾಗಿದೆ.ಕಾನೂನಿನ ಪ್ರಮುಖ ಅಂಶಗಳು
ನಿವೃತ್ತ ನ್ಯಾಯಾಧೀಶರಾದ ವಿಶ್ವನಾಥ್.ಎ. ಅಂಗಡಿ ಅವರು ನೂತನ ಕಾಯ್ದೆ ಕುರಿತು ವಕೀಲರಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ವಿವರಿಸಿದರು. ನ್ಯಾ. ಗಣಪತಿ ಗುರುಸಿದ್ದ ಬಾದಾಮಿ, ನ್ಯಾ. ಮುಜಫರ್ ಎ ಮಾಂಜರಿ, ಆರ್.ಎಂ. ನಾಧಫ್, ವಿನೋದ್‌ಕುಮಾರ್, ಶಾಮಿದಾ, ಮಂಜುನಾಥ್ , ವಕೀಲರ ಸಂಘದ ಅಧ್ಯಕ್ಷ ಎಸ್.ಎನ್ ರಾಜಗೋಪಾಲಗೌಡ, ಉಪಾಧ್ಯಕ್ಷ ಮಣಿವಣ್ಣನ್, ಕಾರ್ಯಯದರ್ಶೀ ನಾಗರಾಜ್ ಇದ್ದರು.