ಹಾನಗಲ್ಲ: ಮೊಹರಂ ನಿಮಿತ್ತ ಹಾನಗಲ್ಲಿನಲ್ಲಿ ನಡೆದ ಶಾಂತಿ ಸಭೆಯಲ್ಲಿ ಶಿಗ್ಗಾಂವಿಯ ಡಿವೈಎಸ್‌ಪಿ ಜಿ. ಮಂಜುನಾಥ ಶಾಂತಿ ಸೌಹಾರ್ದದಿಂದ ಹಬ್ಬ ಆಚರಿಸಲು ಹಾನಗಲ್ಲ ಜನತೆಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ಗುರುರಾಜ ನಿಂಗೋಜಿ ಹಾಗೂ ಫೈರೋಜ ಶಿರಬಡಗಿ ಹಾನಗಲ್ಲಿನಲ್ಲಿ ಹಿಂದು ಮುಸ್ಲಿಂ ಹಬ್ಬಗಳನ್ನು ಅತ್ಯಂತ ಸೌಹಾರ್ದಯುತವಾಗಿ ಆಚರಿಸಲಾಗುತ್ತದೆ. ಆದರೆ ಕೆಲವು ಕಿಡಿಗೇಡಿಗಳು ಮಾಡುವ ಅವಘಡಗಳಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ. ಅಂತಹವರಿಂದಲೇ ಇಡೀ ಹಬ್ಬಗಳು ಅರ್ಥ ಕಳೆದುಕೊಳ್ಳುತ್ತವೆ. ಪೊಲೀಸ್ ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು. ಹಿಂದು ಮುಸ್ಲಿಂ ಎಂಬ ಭೇದಕ್ಕೆ ಇಲ್ಲಿ ಅವಕಾಶವಿಲ್ಲ. ಹಬ್ಬಗಳು ನಮ್ಮ ನಮ್ಮ ಧಾರ್ಮಿಕ ವಿಚಾರಗಳಾಗಿವೆ. ಹಾನಗಲ್ಲ ಶಾಂತಿಯಿಂದ ಹಬ್ಬ ಆಚರಣೆಗೆ ಹೆಸರಾಗಿದೆ. ಅದನ್ನು ಉಳಿಸಿಕೊಳ್ಳಬೇಕು ಎಂದರು.ಹಾನಗಲ್ಲ ಪಿಎಸ್‌ಐ ಕೆ.ಸಿ. ಚಲುವಯ್ಯ, ನಗರದ ಮುಖಂಡರಾದ ಸಿಕಂದರ ವಾಲಿಕಾರ, ಜಾಫರ್ ಬಾಳೂರ, ಬಾಬಾಜಾನ ಕೊಂಡವಾಡಿ, ನಿಸಾರ್ ಗೌಂಡಿ, ನಿಸಾರ ಪಾನವಾಲೆ, ಇರಫಾನ್ ಇನಾಂದಾರ, ಇರಫಾನ ಮಿಠಾಯಿಗಾರ, ಖುರ್ಷಿದ ಹುಲ್ಲತ್ತಿ, ಫೈರೋಜ ಜಾಗೀರದಾರ, ಅಬುತಾಯಿರ್ ರಾವುತರ, ನಾಸಿರ ಖಾಜಿ, ಖಾಲಿದ ಶೇಷಗಿರಿ, ಪ್ರಶಾಂತ ಗೊಂದಿ, ಪ್ರವೀಣ ಸುಲಾಖೆ, ಎಸ್.ಎಚ್. ನಾಗಣ್ಣನವರ, ಪರಶುರಾಮ ಖಂಡೂನವರ, ಹನುಮಂತ ಮೊದಲಾದವರಿದ್ದರು.