ಮಾಗಡಿ: ಉರಗ ಪ್ರೇಮಿ ಪಟ್ಟಣದ ಜ್ಯೋತಿನಗರದ ಸ್ನೇಕ್ ರಾಯ 7 ಅಡಿ ಉದ್ದದ ಹೆಬ್ಬಾವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆ ಸಹಕಾರದೊಂದಿಗೆ ಸುರಕ್ಷಿತ ಪ್ರದೇಶದಲ್ಲಿ ಬಿಡಲಾಗಿದೆ. ತಾಲೂಕಿನ ಗೆಜ್ಜೆಗಾರಗುಪ್ಪೆ ಗ್ರಾಮದ ಸಮೀಪ ಇರುವ ಸೋಲಾರ್ ಪ್ಲಾಂಟ್ ಬಳಿ ಬೃಹತ್ ಗಾತ್ರದ ಹೆಬ್ಬಾವು ಇರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಅಧಿಕಾರಿ ಗಂಗಾಧರ್ ಅವರು ಸ್ನೇಕ್ ರಾಯ ಅವರಿಗೆ ಕರೆ ಮಾಡಿ ಹೆಬ್ಬಾವು ಬಗ್ಗೆ ಮಾಹಿತಿ ನೀಡಿದ್ದಾರೆ. ಉರಗ ಪ್ರೇಮಿಯಾಗಿರುವ ಸ್ನೇಕ್ ರಾಯ ಈಗಾಗಲೇ 3000ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಯಾವುದೇ ಹಣದ ಆಸೆ ಇಲ್ಲದೆ ಉರಗಗಳನ್ನು ರಕ್ಷಿಸುವ ಹಿತದೃಷ್ಟಿಯಿಂದ ಹಾವುಗಳನ್ನು ಹಿಡಿಯುತ್ತಿದ್ದು, ಅರಣ್ಯ ಇಲಾಖೆ ಸ್ನೇಕ್ ರಾಯನಿಗೆ ಸುರಕ್ಷಿತ ಸಾಧನಗಳನ್ನು ಕೊಡುವ ಮೂಲಕ ಯುವಕನಿಗೆ ಪ್ರೋತ್ಸಾಹ ನೀಡಬೇಕೆಂದು ಪಟ್ಟಣದ ನಾಗರಿಕರು ಮನವಿ ಮಾಡಿದ್ದಾರೆ.