ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಅಂಬೇಡ್ಕರ್ ಭಾವಚಿತ್ರ, ಬುದ್ಧರ ಪುತ್ಥಳಿಯನ್ನು ಕಿಡಿಗೇಡಿಗಳು ಹಾನಿ ಮಾಡಿದ್ದು ಸಮಾಜ ತಲೆ ತಗ್ಗಿಸುವಂತಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಬೇಕು. ಇಂಥ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಮುನ್ನಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಒತ್ತಾಯಿಸಿದ್ದಾರೆ.
ಪಟ್ಡಣದಲ್ಲಿ ರಸ್ತೆತಡೆ ನಡೆದ ಪರಿಣಾಮ ಮೈಸೂರು- ಊಟಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಪ್ರವಾಸಿಗರು ಹಾಗೂ ಪ್ರಯಾಣಿಕರು ಪರದಾಡಿದರು. ತಾಲೂಕು ರೈತಸಂಘದ ಅಧ್ಯಕ್ಷ ಹಂಗಳ ದಿಲೀಪ್,ಮುಖಂಡರಾದ ಲೋಕೇಶ್, ಮಹೇಶ್, ನಾಗರಾಜಪ್ಪ ಇದ್ದರು.೧೪ನೇ ದಿನಕ್ಕೆ ಕಾಲಿಟ್ಟ ಅಹೋ ರಾತ್ರಿ ರೈತರ ಧರಣಿ:
ಗುಂಡ್ಲುಪೇಟೆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ರೈತ ಸಂಘ ಪಟ್ಟಣದ ತಾಲೂಕು ಕಚೇರಿ ಮುಂದೆ ನಡೆಸುತ್ತಿರುವ ಅಹೋ ರಾತ್ರಿ ಧರಣಿ ೧೪ ನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ ಕೂಡ ಮುಂದುವರಿದಿದೆ.ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ತನಕ ಧರಣಿ ಮುಂದುವರಿಯಲಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಹೇಳಿದರು. ಅಹೋ ರಾತ್ರಿ ಧರಣಿಯಲ್ಲಿ ತಾಲೂಕು ರೈತಸಂಘದ ಅಧ್ಯಕ್ಷ ಹಂಗಳ ದಿಲೀಪ್,ರೈತಸಂಘದ ಮುಖಂಡರಾದ ಶಿವಣ್ಣ,ಮಹೇಶ್,ಗುರು,ಪ್ರವೀಣ್,ಸಂತೋಷ್,ಲೋಕೇಶ್,ಬಾಲಕೃಷ್ಣ,ಮಹೇಶ್ ಸೇರಿದಂತೆ ಹಲವರಿದ್ದರು.