ಅಂಕಿತಾ ಹತ್ಯೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : May 18, 2024, 12:30 AM ISTUpdated : May 18, 2024, 12:31 AM IST
ಸಿಂದಗಿ | Kannada Prabha

ಸಾರಾಂಶ

ಹುಬ್ಬಳ್ಳಿಯಲ್ಲಿ ಈಚೆಗೆ ನಡೆದ ಅಂಜಲಿ ಅಂಬಿಗೇರ ಕೊಲೆ ಖಂಡಿಸಿ ಸಿಂದಗಿ ತಹಸೀಲ್ದಾರ್ ಕಚೇರಿ ಮುಂದೆ ವಿಜಯಪುರ ತಳವಾರ ಪರಿವಾರ ಹಿತರಕ್ಷಣಾ ಸಮಿತಿಯ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಸಿಂದಗಿ

ಹುಬ್ಬಳ್ಳಿಯಲ್ಲಿ ಈಚೆಗೆ ನಡೆದ ಅಂಜಲಿ ಅಂಬಿಗೇರ ಕೊಲೆ ಖಂಡಿಸಿ ಸಿಂದಗಿ ತಹಸೀಲ್ದಾರ್‌ ಕಚೇರಿ ಮುಂದೆ ವಿಜಯಪುರ ತಳವಾರ ಪರಿವಾರ ಹಿತರಕ್ಷಣಾ ಸಮಿತಿಯ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಹೋರಾಟಗಾರ ಶಿವಾಜಿ ಮೆಟಗಾರ ಮಾತನಾಡಿ, ಅಂಜಲಿ ಅಂಬಿಗೇರ ಹತ್ಯೆ ಮಾಡಿದ ದುಷ್ಕ್ರಮಿಗೆ ಉಗ್ರವಾದ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ರಾಜ್ಯದಲ್ಲಿ ಮತ್ತೆ ಮರುಕಳಿಸದಂತಾಗಬಾರದು ಎಂದು ಎಚ್ಚರಿಸಿದರು.

ತಳವಾರ ಸಮಾಜದ ಮುಖಂಡರಾದ ಮಡಿವಾಳ ನಾಯ್ಕೋಡಿ ಮಾತನಾಡಿ, ಅಂಜಲಿ ಅಂಬಿಗೇರ ಕುಟುಂಬಕ್ಕೆ ಅವಳೇ ಆಸರೆಯಾಗಿದ್ದಳು. ತಂದೆ, ತಾಯಿ ಇಲ್ಲದೇ ಅಜ್ಜಿ ಮತ್ತು ಸಹೋದರಿಯೊಂದಿಗೆ ಜೀವನ ಸಾಗಿಸುತ್ತಿದ್ದಳು. ಮೃತ ಅಂಜಲಿಯ ಕುಟುಂಬಕ್ಕೆ ಸರ್ಕಾರವು ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಂದಗಿ ಪುರಸಭೆ ಸದಸ್ಯ ಹಣಮಂತ ಸುಣಗಾರ, ಬಸವರಾಜ ಯರನಾಳ, ಗೋಲ್ಲಾಳ ಬಂಕಲಗಿ, ಅನಿಲ ಕಡಕೋಳ, ಸಂತೋಷ ಹರನಾಳ, ಮಲ್ಲು ಕುರಿ, ನಾಗು ತಳವಾರ, ಪರಶುರಾಮ ಕೋಟಾರಗಸ್ತಿ, ವಿಜಯಕುಮಾರ ಯಾಳವಾರ, ಈರಣ್ಣ ಕುರಿ, ರಾಜಕುಮಾರ ನಾಯ್ಕೋಡಿ, ಹಣಮಂತ ಹಿಪ್ಪರಗಿ, ಮಲ್ಲು ನಾಯ್ಕೋಡಿ, ಕುಮಾರ ನಾಯ್ಕೋಡಿ, ಕಂಟೆಪ್ಪ ಚೋರಗಸ್ತಿ, ಅಮೋಗಿ ಜೈನಾಪುರ, ಭೂತಾಳಿ ನಾಯ್ಕೋಡಿ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!