ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದ ರೈತರು, ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಲಗಾ, ಹಳೇ ಬೆಳಗಾವಿ, ಮಾಧವಪುರ, ವಡಗಾಂವ, ,ಅನಗೋಳ, ಮಜಗಾಂವ, ಯಳ್ಳೂರ, ಮಚ್ಛೆ ಗ್ರಾಮದ ಬೆರಳೆಣಿಕೆ ರೈತರು ವಿರೋಧಿಸಿ ಪ್ರತಿಭಟನೆ ನಡೆಸಿದರು. ಬಳಿಕ ಹಲಗಾ-ಮಚ್ಛೆ ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು .
ನೇಗಿಲ ಯೋಗಿ ರೈತ ಸಂಘದ ರವಿ ಪಾಟೀಲ ಮಾತನಾಡಿ, ಫಲವತ್ತಾದ ಭೂಮಿ ಇದ್ದು, ಹಲಗಾ-ಮಚ್ಛೆ ಕಾಮಗಾರಿ ಕಾನೂನು ಬಾಹಿರವಾಗಿದ. 1 ಎಕರೆ ಭೂಮಿ ಹೊಂದಿರುವ ಬಡ ರೈತರು ಇದ್ದಾರೆ. ಅಕ್ರಮವಾಗಿ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ರೈತ ಕುಲವನ್ನು ವಿರೋಧಿಸುವ ಹಾಗೂ ರಾಜಕಾರಣಿಗಳು ಯಾರೂ ಉಳಿಯುವುದಿಲ್ಲ , ರಾಜ್ಯ ಸರ್ಕಾರವೂ ನುಡಿದಂತೆ ನಡೆಯದೆ ಸುಳ್ಳು ಹೇಳುತ್ತಿದೆ. ರಾಜ್ಯದಲ್ಲಿ ಎಲ್ಲಾ ವಸ್ತುಗಳು ದುಬಾರಿಯಾಗಿವೆ. ಮದ್ಯದ ದರ ಕೂಡ ಏರಿಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.ರೈತ ಮುಖಂಡ ರಾಜು ಮರ್ವೆ ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎರಡು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಬೆಳಗಾವಿಯ 9 ಗ್ರಾಮಗಳ ರೈತರು ಹಲಗಾ ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ ಮಾಡುತ್ತಿದ್ದೇವೆ. 2019 ರಿಂದ ಇಲ್ಲಿಯವರಗೂ ವಿರೋಧ ಮಾಡಿಕೊಂಡು ಬಂದಿವೆ.ಅಧಿಕಾರಿಗಳು ಹೈಕೋರ್ಟ್ ನ ನಕಲಿ ಪತ್ರ ತೋರಿಸಿ ಕಾಮಗಾರಿ ಆರಂಭಿಸಿದ್ದಾರೆ. ರಾಜ್ಯ ಸರ್ಕಾರ ಕೊಡಲೇ ಕಾಮಗಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.