ರೋಣ: ಎಸ್.ಸಿ .ಎಸ್ ಟಿ. ಜನರ ಕಲ್ಯಾಣಕ್ಕಾಗಿ ಕಾಯ್ದಿರಿಸಿದ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿದ ರಾಜ್ಯ ಸರ್ಕಾರ ನಡೆ ಖಂಡಿಸಿ ಗುರುವಾರ ರೋಣದಲ್ಲಿ ಬಿಜೆಪಿ ಎಸ್.ಸಿ. ಮೋರ್ಚಾ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಜರುಗಿತು. ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಉಪ ತಹಸೀಲ್ದಾರ್ ಜೆ.ಟಿ.ಕೊಪ್ಪದ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಬಿಜೆಪಿ ಹಿರಿಯ ಮುಖಂಡ ಅಶೋಕ ನವಲಗುಂದ, ಶಿವಾನಂದ ಜಿದ್ದಿಬಾಗಿಲ, ಡಿ. ಜಿ. ಕಟ್ಟಿಮನಿ, ಶಿವಕುಮಾರ ಜಾಧವ, ಮಂಜು ಬುರಡಿ, ಮುತ್ತಪ್ಪ ಜೋಗನ್ನವರ, ನಿಂಗಪ್ಪ ಮಾದರ, ಮೈಲಾರಪ್ಪ ಮಾದರ, ಮುತ್ತಪ್ಪ ಪೂಜಾರ, ಮಜೂರಪ್ಪ ಮಾದರ, ಚಂದ್ರು ಹಂಚಿನಾಳ, ಪ್ರಕಾಶ ಜಿಗಳೂರು, ಪ್ರಕಾಶ ಕುರಹಟ್ಟಿ, ರವಿ ಮಾದರ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲು ಮಾದರ, ರೋಣ ಮಂಡಲ ಬಿಜೆಪಿ ಎಸ್. ಸಿ. ಮೋರ್ಚಾ ಅಧ್ಯಕ್ಷ ಭೀಮಪ್ಪ ಮಾದರ, ಪ್ರಧಾನ ಕಾರ್ಯದರ್ಶಿ ಮಂಜು ಛಲವಾದಿ, ಚಂದ್ರು ಲಮಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.