ಹೆಡಿಯಾಲ್ ಟೋಲ್ ಅವ್ಯವಸ್ಥೆ ಖಂಡಿಸಿ ಕರವೇ ಕನ್ನಡ ಸೇನೆ ಪ್ರತಿಭಟನೆ

KannadaprabhaNewsNetwork |  
Published : Jul 21, 2024, 01:16 AM IST
ಫೋಟೊ ಶೀರ್ಷಿಕೆ: 20ಆರ್‌ಎನ್‌ಆರ್5 ರಾಣಿಬೆನ್ನೂರು ತಾಲೂಕಿನ ಹಲಗೇರಿ-ಹೆಡಿಯಾಲ ಗ್ರಾಮಗಳ ಮಧ್ಯದಲ್ಲಿ ನಿರ್ಮಿಸಿರುವ ಸುಂಕ ವಸೂಲಾತಿ ಕೇಂದ್ರ (ಟೋಲ್ ಗೇಟ್) ಅವ್ಯವಸ್ಥೆಯನ್ನು ಖಂಡಿಸಿ ಕುಮಾರಪಟ್ಟಣಂನಲ್ಲಿ ಕರವೇ ಕನ್ನಡ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಹಲಗೇರಿ-ಹೆಡಿಯಾಲ ಮಧ್ಯದಲ್ಲಿ ನಿರ್ಮಿಸಿರುವ (ಬೀರೂರು ಸಮ್ಮಸಗಿ ರಾಜ್ಯ ಹೆದ್ದಾರಿ) ಸುಂಕ ವಸೂಲಾತಿ ಕೇಂದ್ರ (ಟೋಲ್ ಗೇಟ್) ಅವ್ಯವಸ್ಥೆಯ ಆಗರವಾಗಿದ್ದು, ಸುಂಕವನ್ನು ಕಟ್ಟುವ ವಾಹನ ಸವಾರರಿಗೆ ಒದಗಿಸಬೇಕಿರುವ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಟೋಲ್‌ಗೇಟ್ ಗುತ್ತಿಗೆದಾರರು ನೀಡುತ್ತಿಲ್ಲವೆಂದು ಆರೋಪಿಸಿ ಕುಮಾರಪಟ್ಟಣಂ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ರಾಣಿಬೆನ್ನೂರು: ತಾಲೂಕಿನ ಹಲಗೇರಿ-ಹೆಡಿಯಾಲ ಗ್ರಾಮಗಳ ಮಧ್ಯದಲ್ಲಿ ನಿರ್ಮಿಸಿರುವ (ಬೀರೂರು ಸಮ್ಮಸಗಿ ರಾಜ್ಯ ಹೆದ್ದಾರಿ) ಸುಂಕ ವಸೂಲಾತಿ ಕೇಂದ್ರ (ಟೋಲ್ ಗೇಟ್) ಅವ್ಯವಸ್ಥೆಯ ಆಗರವಾಗಿದ್ದು, ಸುಂಕವನ್ನು ಕಟ್ಟುವ ವಾಹನ ಸವಾರರಿಗೆ ಒದಗಿಸಬೇಕಿರುವ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಟೋಲ್‌ಗೇಟ್ ಗುತ್ತಿಗೆದಾರರು ನೀಡುತ್ತಿಲ್ಲವೆಂದು ಆರೋಪಿಸಿ ಕುಮಾರಪಟ್ಟಣಂ ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಸಂಘಟನೆಯ ಉಪಾಧ್ಯಕ್ಷ ಹನುಮಂತಪ್ಪ ಮಡಿವಾಳರ ಮಾತನಾಡಿ, ಸುಂಕ ವಸೂಲಾತಿ ಕೇಂದ್ರ ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದೆ. ಸುಂಕ ವಸೂಲಾತಿ ಕೇಂದ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಸುಂಕ ಕಟ್ಟುವ ವಾಹನಗಳ ಮಾಲೀಕರಿಗೆ, ಚಾಲಕರಿಗೆ ಇರಿಸಬೇಕಾಗಿರುವ ಸೌಲಭ್ಯಗಳು ಇರುವುದಿಲ್ಲ. ವಿದ್ಯುತ್ ದೀಪ, ಹೈಮಾಸ್ಕ್ ಲೈಟುಗಳು ಇದ್ದರೂ ಸಮರ್ಪಕವಾಗಿ ಬೆಳಗುತ್ತಿಲ್ಲ. ಇಲ್ಲಿರುವ ಎಲ್ಲಾ ಲೈಟುಗಳು ಮೇಲಿಂದ ಮೇಲೆ ರಿಪೇರಿಗೆ ಬರುತ್ತಿವೆಯೋ ಅಥವಾ ಟೋಲ್ ಗೇಟ್ ಮ್ಯಾನೇಜರ್ ಮತ್ತು ಸಂಬಂಧಪಟ್ಟ ಮೇಲಾಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೋ ಒಂದೂ ತಿಳಿಯದಾಗಿದೆ. ಹೀಗಾಗಿ ಪ್ರತಿ ನಿತ್ಯ ಅನೇಕ ದುರ್ಘಟನೆಗಳು ನಡೆಯಲು ಆಸ್ಪದವಾಗಿದೆ. ರಾತ್ರಿ ಸಮಯದಲ್ಲಿ ರಸ್ತೆಯ ಬಿಳಿಪಟ್ಟಿಗೆ ಅಳವಡಿಸಿರುವ ವಾಹನಗಳ ಬೆಳಕಿಗೆ ಪ್ರತಿಫಲವಾಗಿ ಮಿನುಕುವ ರೇಡಿಯಮ್ ಅಂಟಿಸದೆ ಇರುವ ಕಾರಣ ಅನೇಕ ಅಪಘಾತಗಳು ಸಂಭವಿಸಿವೆ ಎಂದರು. ಜಿಲ್ಲಾಧ್ಯಕ್ಷ ಪರಮೇಶ್ವರಯ್ಯ ಮಠದ ಮಾತನಾಡಿ, ಗುತ್ತಿಗೆ ಪಡೆದವರು ಹೊರ ರಾಜ್ಯದ ಕೆಲಸಗಾರರನ್ನು ನೇಮಿಸಿ, ಗುತ್ತಿಗೆ ನೀಡಿದ ರಾಜ್ಯ ಸರ್ಕಾರಕ್ಕೂ ನಾಡಿನ ಜನತೆಗೂ ಮೋಸವೆಸಗಿದ್ದಾರೆ. ಇಂತಹ ಗುತ್ತಿಗೆದಾರರ ಗುತ್ತಿಗೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಸಂಚಾಲಕ ಶಿವಯೋಗಿಸ್ವಾಮಿ ಬೂದಿಹಾಳಮಠ, ಜಿಲ್ಲಾ ವಕ್ತಾರ ಕುಬೇರಪ್ಪ ಕಮ್ಮಾರ, ತಾಲೂಕ ಘಟಕದ ಅಧ್ಯಕ್ಷ ಸಂಜೀವ್ ರೆಡ್ಡಿ ಮದಗುಣಿಕೆ, ಉಪಾಧ್ಯಕ್ಷ ಮಾಲತೇಶ ಪೂಜಾರ, ಹಲಗೇರಿ ಗ್ರಾಮ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ