ಹಿಂದಿ ದಿನಾಚರಣೆ ಖಂಡಿಸಿ ಕರವೇ ಪ್ರತಿಭಟನೆ

KannadaprabhaNewsNetwork |  
Published : Sep 15, 2024, 02:00 AM IST
14ಎಚ್‌ಪಿಟಿ2-ಹಿಂದಿ ದಿವಸ್‌ ಆಚರಣೆ ಖಂಡಿಸಿ ಹೊಸಪೇಟೆಯಲ್ಲಿ ಶನಿವಾರ ಕರವೇ ವತಿಯಿಂದ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದಿಂದ ಡಾ.ಪುನಿತ್ ರಾಜಕುಮಾರ್ ವೃತ್ತದವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಹೊಸಪೇಟೆ: ಹಿಂದಿ ದಿವಸ್‌ ಆಚರಣೆ ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದಿಂದ ಡಾ.ಪುನಿತ್ ರಾಜಕುಮಾರ್ ವೃತ್ತದವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಕರವೇ ಜಿಲ್ಲಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ ಮಾತನಾಡಿ, ದೇಶದಲ್ಲಿ ಹಿಂದಿ ಭಾಷೆ ಹೇರಿಕೆ ಸರಿಯಲ್ಲ. ಸ್ವಾತಂತ್ರ್ಯ ಸಂದರ್ಭದಲ್ಲೇ ಹಿಂದಿ ಹೇರಿಕೆ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು ಧ್ವನಿ ಎತ್ತಿದ್ದವು. ಇಂಗ್ಲಿಷ್‌ ಭಾಷೆ ಕುರಿತು 18 ವರ್ಷಗಳ ಬಳಿಕ ಪರಾಮರ್ಷೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಕೇಂದ್ರ ಸರ್ಕಾರಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಆಯಾ ರಾಜ್ಯ ಭಾಷೆಗಳಿಗೆ ಮನ್ನಣೆ ದೊರೆಯಬೇಕು. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಧ್ಯಾನ್ಯತೆ ದೊರೆಯಬೇಕು. ಕನ್ನಡಿಗರಿಗೆ ಉದ್ಯೋಗ ದೊರೆಯಬೇಕು. ಹಿಂದಿ ಭಾಷೆ ಹೇರಿಕೆ ಮಾಡುವುದನ್ನು ಕೇಂದ್ರ ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಶ್ರೀನಿವಾಸ್‌, ಎಸ್. ಎಂ. ಜಾಫರ್, ಪ್ರಶಾಂತ್, ರಮೇಶ್, ಜಿ. ನಾಗರಾಜ್, ಕಾರಿಗನೂರು ರಾಮಕೃಷ್ಣ, ಪಾಪಿನಾಯಕನಹಳ್ಳಿ ಸೋಮಣ್ಣ, ಟಿಪ್ಪು ಸುಲ್ತಾನ್, ಇಕ್ಬಾಲ್, ವಿರುಪಾಕ್ಷಿ, ರಾಘು, ಕಣಿವಿ ಕುಮಾರ್, ಶಾಶು, ಹೊನ್ನೂರವಲಿ, ಮಲಪನಗುಡಿ ಕೊಟ್ರೇಶ್, ಪರಶುರಾಮ್, ಬಶೀರ್, ಬಾನುಬಿ, ಹುಲಿಯಮ್ಮ, ಕಮಲಾಪುರ ಬಾಷಾ, ಭರತ್ ಕುಮಾರ್, ಶಂಕರ್, ಜಿ. ಹುಲುಗಪ್ಪ, ಜಿ.ಗಿರೀಶ್, ಐ.ನವೀನ್, ಶ್ರೀನಿವಾಸ, ದುರ್ಗಮ್ಮ, ಮಾರಿಯಮ್ಮಕ್ಕ, ಚಮನ್ ಬಾಷಾ, ಕೃಷ್ಣಮೂರ್ತಿ, ಹಾಲೇಶ್, ರಾಘವೇಂದ್ರ, ಈಡಿಗೇರ್‌ ಸ್ವಾಮಿ, ಬುಕ್ಕಸಾಗರ ಕೃಷ್ಣ, ಮೆಕ್ಯಾನಿಕ್ ಖಾಜಾ, ಬಲದೇವ್, ರಾಜು, ಹುಲುಗಪ್ಪ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ