ಕನ್ನಡಪ್ರಭ ವಾರ್ತೆ ಮೈಸೂರು
ಅಲ್ಲಿ ಜಮಾವಣೆಗೊಂಡ ನೂರಾರು ಮಂದಿ ಪ್ರತಿಭಟನಾಕಾರರು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು.
ಮೈಸೂರು ಸಂಸ್ಥಾನದ ಇತಿಹಾಸ ತಿಳಿಯದ ಜಿಲ್ಲಾ ಉಸ್ತುವಾರಿ ಸಚಿವರು ಅರಮನೆಯ ಬಗ್ಗೆ ಉದ್ಧಟತನದ ಹೇಳಿಕೆ ನೀಡಿರುವುದು ಸರಿಯಲ್ಲ. ವಜ್ರಮುಷ್ಠಿ ಕಾಳಗ ನಡೆಯದಂತೆ ಮಾಡಿ, ಸಂಪ್ರದಾಯಕ್ಕೆ ಅಪಮಾನ ಮಾಡಿದ್ದಾರೆ. ಪತ್ರಕರ್ತರಿಗೂ ಅಪಮಾನ ಮಾಡಿದ್ದಾರೆ. ಆದ್ದರಿಂದ ಪ್ರಭಾವದಿಂದ ಮಂತ್ರಿಯಾಗಿರುವ ಯತೀಂದ್ರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ನಾವು ಮೈಸೂರು ರಾಜರ ಕೊಡುಗೆ ಸ್ಮರಿಸಬೇಕು. ‘ರಾಜಮನೆತನದ ಬಗ್ಗೆ ಗೌರವದೊಂದಿಗೆ ಬಾಳೋಣ’, ‘ಇತಿಹಾಸಕ್ಕೆ ಅವಮಾನ ಬೇಡ’, ‘ರಾಜ ಪರಂಪರೆಗೆ ಅಪಮಾನ ಮಾಡಬಾರದು, ‘ನಾವು ಮೈಸೂರಿನ ಮಹಾಜನತೆಯ ಸಂಪೂರ್ಣ ಬೆಂಬಲ ರಾಜಮನೆತನಕ್ಕೆ ಇದೆ ಎಂಬ ಪೋಸ್ಟರ್ ಹಿಡಿದು ಘೋಷಣೆ ಕೂಗಿದರು.
ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು, ತಾವು ಓದಿದ್ದು ಎಲ್ಲಿ, ಜ್ಞಾನ ಪಡೆದದ್ದು ಎಲ್ಲಿ ಎಂಬುದನ್ನು ಅರಿತುಕೊಳ್ಳಬೇಕು. ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು ಎಂಬ ಹೇಳಿಕೆ ಸರಿಯಲ್ಲ ಎಂದು ಆಕ್ಷೇಪಿಸಿದರು.
ಮಾಜಿ ಮೇಯರ್ ಶಿವಕುಮಾರ್, ಮಾಜಿ ಉಪ ಮೇಯರ್ ವಿ. ಶೈಲೇಂದ್ರ, ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ಲೋಕೇಶ್ ಗೌಡ, ಮುಖಂಡ ಮಲ್ಲರಾಜ ಅರಸ್, ಗೋಕುಲ್ ಗೋವರ್ಧನ್, ಸಂತೋಷ್ ಶಂಭು, ಮಂಜುನಾಥ್, ಒಕ್ಕಲಿಗರ ಸಂಘದ ಚೇತನ್, ಸತೀಶ್, ಹೇಮಾ ನಂದೀಶ್, ರಘು, ರಾಕೇಶ್ ಭಟ್ ಮೊದಲಾದವರು ಇದ್ದರು.