ರಾಮಾಯಣ ಬದುಕಿನ ಮೌಲ್ಯ ತಿಳಿಸುವ ಶ್ರೇಷ್ಠಗ್ರಂಥ

KannadaprabhaNewsNetwork |  
Published : Oct 30, 2026, 01:15 AM IST
38 | Kannada Prabha

ಸಾರಾಂಶ

ರಾಮಾಯಣದಲ್ಲಿ ಯಾವುದೇ ಆಡಂಬರ, ದೇವರ ಪೂಜೆ ಸಂಪ್ರದಾಯವಿಲ್ಲ ಇದೊಂದು ಸಾಮರಸ್ಯ ಬದುಕಿನ ಕಥೆ, ಪ್ರಕೃತಿ, ಪ್ರಾಣಿ-ಪಕ್ಷಿ ಮನುಷ್ಯರ ಬಗೆಗಿನ ಒಂದು ನಿರಂತರವಾದ ಬಾಂಧವ್ಯವನ್ನು ಕಾವ್ಯದಲ್ಲಿ ಕಟ್ಟಿಕೊಡುವ ಮೂಲಕ ಮನುಷ್ಯ ಕೂಡ ಹೀಗೆ ಶಾಂತಿ ಸೌಹರ್ದತೆಯಿಂದ ಬದುಕಬೇಕು.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ಜೀವನ ಮೌಲ್ಯದ ಶ್ರೇಷ್ಠಗ್ರಂಥ ಧರ್ಮ ಗ್ರಂಥಗಳಿಗಿಂತ ಹೆಚ್ಚಿನ ಬದುಕಿನ ಮೌಲ್ಯ ತಿಳಿಸುವ ಶ್ರೇಷ್ಠಗ್ರಂಥ ವಾಲ್ಮೀಕಿ ರಾಮಾಯಣ ಎಂದು ಪ್ರೊ. ನಂಜುಂಡಸ್ವಾಮಿ ಹೇಳಿದರು.

ಪಟ್ಟಣದ ಹರವೆ ಮಲ್ಲರಾಜಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತ್ತಿಕ ವೇದಿಕೆ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ರಾಮಾಯಣ ಧರ್ಮ ಗ್ರಂಥವಲ್ಲ, ಇದೊಂದು ಸಾಮರಸ್ಯದಿಂದ ಬದುಕುವ ಜನರ ಮಹಾಕಾವ್ಯ, ವಾಲ್ಮೀಕಿ ಸತ್ಯ, ಅಹಿಂಸೆ, ತ್ಯಾಗ, ಸಾಮರಸ್ಯ, ಕರುಣೆ ಶಾಂತಿ ಇಂತಹ ಶಾಶ್ವತವಾದ ಸಾತ್ವಿಕ ಮೌಲ್ಯಗಳನ್ನು ತಿಳಿಸಿದ್ದಾರೆ.

ರಾಮಾಯಣದಲ್ಲಿ ಯಾವುದೇ ಆಡಂಬರ, ದೇವರ ಪೂಜೆ ಸಂಪ್ರದಾಯವಿಲ್ಲ ಇದೊಂದು ಸಾಮರಸ್ಯ ಬದುಕಿನ ಕಥೆ, ಪ್ರಕೃತಿ, ಪ್ರಾಣಿ-ಪಕ್ಷಿ ಮನುಷ್ಯರ ಬಗೆಗಿನ ಒಂದು ನಿರಂತರವಾದ ಬಾಂಧವ್ಯವನ್ನು ಕಾವ್ಯದಲ್ಲಿ ಕಟ್ಟಿಕೊಡುವ ಮೂಲಕ ಮನುಷ್ಯ ಕೂಡ ಹೀಗೆ ಶಾಂತಿ ಸೌಹರ್ದತೆಯಿಂದ ಬದುಕಬೇಕು. ಭಾರತಕ್ಕೆ ಮಾತ್ರ ಸೀಮಿತವಲ್ಲದೇ ಜಗತ್ತಿನ ಸಾಹಿತ್ಯ ಕ್ಷೇತ್ರಕ್ಕೆ ಆದಿಕವಿ ಎಂದರೆ ಅದು ವಾಲ್ಮೀಕಿ. ದೇಶದ ಎಲ್ಲಾ ರಾಜ್ಯದ ಭಾಷೆಯ ಶ್ರೀಮಂತಿಕೆಗೆ ವಾಲ್ಮೀಕಿ ರಾಮಾಯಣವೇ ಸ್ಪೂರ್ತಿ ಎಂದರು.

ಇಂದಿನ ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳದೆ ಹೋದರೆ ನಮ್ಮ ಸುಂದರ ಬದುಕು ಛಿದ್ರವಾಗಿ ಬಿಡುತ್ತದೆ. ಭಾರತದಲ್ಲಿ ನೂರಾರು ರಾಮಾಯಣದ ಕಾವ್ಯ ಹುಟ್ಟಿಕೊಂಡಿದೆ ಎಂದರೆ ಅದಕ್ಕೆ ಕಾರಣ ವಾಲ್ಮೀಕಿ. ವಿದ್ಯಾರ್ಥಿಗಳು ರಾಮಾಯಣ ಮತ್ತು ಮಹಾಭಾರತದ ಮೌಲ್ಯಗಳನ್ನು ಅರ್ಥೈಸಿಕೊಂಡರೆ ಸಮಾಜದಲ್ಲಿ ಉತ್ತಮ ನಾಗರೀಕರಾಗಬಹುದು. ರಾಮ, ಬುದ್ದ, ಬಸವಣ್ಣ ಗಾಂಧೀಜಿ, ಅಂಬೇಡ್ಕರ್‌ಇಂತಹ ಮಹನೀಯರು ಅವರು ಬದುಕಿದ್ದು ಸಮಾಜಕ್ಕಾಗಿ, ಜಾತಿಗಾಗಿ ಅಲ್ಲ ಅವರ ಉತ್ತಮ ಬದುಕನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಪಾಲಿಸಬೇಕು ಎಂದು ಅವರು ಸಲಹೆ ನೀಡಿದರು.

ಪ್ರಾಧ್ಯಾಪಕರಾದ ಕೆ.ಜಿ.ಮಂಜುನಾಥ್‌, ಡಾ.ಜಿ.ಶೈಲಶ್ರೀ, ಡಾ.ಎಂ.ಪಿ.ಸ್ವಾತಿ, ಉಪನ್ಯಾಸಕರಾದ ಡಾ.ಕೆ.ಮಂಜು, ಡಾ.ಕೆ. ಮಹೇಂದ್ರ, ಕೆ.ಆರ್‌.ಯೋಗೇಶ್‌, ಕೆ.ಮದಕರಿ ನಾಯಕ, ಮಂಜುನಾಥ್‌ ಡಿ.ಮೀರ್‌ತಾಜ್‌ದಾರ್‌ ಅಲಿ, ಭರತ್‌, ಎಸ್.ಇ. ಅವಿನಾಶ್‌, ಎಸ್.ಎನ್. ಶಿಲ್ಪಾ‌ಮತ್ತು ವಿ.ಎಚ್‌. ಹರ್ಷಿತಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು