ಮಧುಗಿರಿ ತಾಲೂಕು ಕಾಸಾಪುರ ಗ್ರಾಮದ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ದಲಿತ ಯುವಕ ಸಿಂಹಾದ್ರಿ ಹತ್ಯೆ ಮಾಡಲಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ಹಾಗೂ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಾಲೂಕಿನ ದಲಿತಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ದಸಂಸ ತಾಲೂಕು ಸಂಚಾಲಕ ನಿಟ್ಟೂರು ನಾಗರಾಜು, ದಲಿತ ಯುವಕನ ಹತ್ಯೆ ಪ್ರಕರಣ ಬಗ್ಗೆ ಸ್ಥಳೀಯ ಶಾಸಕರು ಕಾಳಜಿ ವಹಿಸಿಲ್ಲ. ಮೃತನ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಸಹ ಮಾಡಿಲ್ಲ. ಇವರನ್ನೇ ಜಿಲ್ಲಾ ಸಚಿವ ಪರಮೇಶ್ವರ್ ಹಿಂಬಾಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಮಧುಗಿರಿ ತಾಲೂಕು ಕಾಸಾಪುರ ಗ್ರಾಮದ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ದಲಿತ ಯುವಕ ಸಿಂಹಾದ್ರಿ ಹತ್ಯೆ ಮಾಡಲಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ಹಾಗೂ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಾಲೂಕಿನ ದಲಿತಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಘೋಷಣೆ ಕೂಗುತ್ತಾ ಸಾಗಿದ ಪ್ರತಿಭಟನಾಕಾರರು ತಾಲೂಕು ಆಡಳಿತ ಮೂಲಕ ಮನವಿಪತ್ರ ಸಲ್ಲಿಸಿದರು.
ಜಿಪಂ ಮಾಜಿ ಸದಸ್ಯ ಜಿ.ಎಚ್. ಜಗನ್ನಾಥ್ ಮಾತನಾಡಿ, ಕುಟುಂಬದ ಆಧಾರವಾಗಿದ್ದ ಸಿಂಹಾದ್ರಿ ಕೊಂದ ಮತ್ತೊಬ್ಬ ಯುವಕನಿಗೆ ಉಗ್ರ ಶಿಕ್ಷೆ ನೀಡಬೇಕು. ಸರ್ಕಾರ ಜೀವಕ್ಕೆ ಐದು ಲಕ್ಷ ಅಷ್ಟೇ ಬೆಲೆ ಕಟ್ಟಿದೆ. ನಮ್ಮ ತಾಲೂಕಿನಲ್ಲಿ ದೇಣಿಗೆ ಸಂಗ್ರಹಿಸಿ 25 ಸಾವಿರ ರು. ಮೃತನ ಕುಟುಂಬಕ್ಕೆ ನೀಡುತ್ತೇವೆ. ಹೀಗೆ ಎಲ್ಲ ತಾಲೂಕು ಸೇರಿ ಜಿಲ್ಲೆಯಿಂದ 2.50 ಲಕ್ಷ, ರಾಜ್ಯಾದ್ಯಂತದಿಂದ 75 ಲಕ್ಷ ಬರಲಿದೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕಡಬ ಶಂಕರ್ ಮಾತನಾಡಿ, ಸರ್ಕಾರ ಮೃತ ಕುಟುಂಬಕ್ಕೆ ಒಂದು ಕೋಟಿ ರು. ಪರಿಹಾರ ನೀಡಿ ಕುಟುಂಬದವರಿಗೆ ಉದ್ಯೋಗ ನೀಡಬೇಕು. ಜೊತೆಗೆ 4 ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.ದಸಂಸ ತಾಲೂಕು ಸಂಚಾಲಕ ನಿಟ್ಟೂರು ನಾಗರಾಜು, ದಲಿತ ಯುವಕನ ಹತ್ಯೆ ಪ್ರಕರಣ ಬಗ್ಗೆ ಸ್ಥಳೀಯ ಶಾಸಕರು ಕಾಳಜಿ ವಹಿಸಿಲ್ಲ. ಮೃತನ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಸಹ ಮಾಡಿಲ್ಲ. ಇವರನ್ನೇ ಜಿಲ್ಲಾ ಸಚಿವ ಪರಮೇಶ್ವರ್ ಹಿಂಬಾಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ವೈಷಮ್ಯ ಹಿನ್ನಲೆ ಈ ಕೊಲೆ ನಡೆದಿದೆ. ಅಂತರ್ಜಾತಿ ವಿವಾಹಕ್ಕೆ ಸಾಥ್ ನೀಡಿದ್ದ ಸಿಂಹಾದ್ರಿಯನ್ನು ಸಂಚು ಮಾಡಿ ಹತ್ಯೆ ಮಾಡಿದ್ದಾರೆ ಎಂದರು.
ಮಹಿಳಾ ಹೋರಾಟಗಾರ್ತಿ ಜಿ.ಎನ್.ಲಾವಣ್ಯ, ದಲಿತ ಮುಖಂಡರಾದ ಗುಬ್ಬಿ ಬಸವರಾಜು, ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ನಾಗಭೂಷಣ್ ಮಾತನಾಡಿದರು. ಪ್ರತಿಭಟನೆಯಲ್ಲಿ ದಸಂಸ ಪದಾಧಿಕಾರಿಗಳಾದ ಹರಿವೇಸಂದ್ರ ಕೃಷ್ಣಪ್ಪ, ನರೇಂದ್ರಕುಮಾರ್, ಮಾದಾರ ಮಹಾಸಭಾ ಶ್ರೀಧರ್, ಕುಂದರನಹಳ್ಳಿ ನಟರಾಜ್, ದಲಿತ ಸೇನೆ ಶಿವರಾಜ್, ಜೈ ಕರ್ನಾಟಕ ಮಧು, ಈಶ್ವರಯ್ಯ, ಕಿಟ್ಟದಕುಪ್ಪೆ ನಾಗರಾಜು, ಪಾಂಡುರಂಗಯ್ಯ, ಬೆಟ್ಟಸ್ವಾಮಿ, ರವೀಶ್, ದಲಿತ್ ಗಂಗಣ್ಣ, ಹರೀಶ್, ಇಮ್ರಾನ್, ನಿಧೀಶ್ ಇತರರು ಇದ್ದರು.-----------------
28 ಜಿ ಯು ಬಿ 1
ಗುಬ್ಬಿ ಪಟ್ಟಣದ ತಾಲೂಕು ಕಚೇರಿ ಮುಂದೆ ಮಧುಗಿರಿ ತಾಲೂಕು ಕಾಸಾಪುರ ಗ್ರಾಮದಲ್ಲಿ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ದಲಿತ ಯುವಕ ಸಿಂಹಾದ್ರಿ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.