)
- ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದ ದಾವಣಗೆರೆ ನಗರ, ಜಿಲ್ಲೆಯ ಔಷಧಿ ಮಾರಾಟಗಾರರು । ಆಡಳಿತಕ್ಕೆ ಮನವಿ - - -
ನಗರದ ಜಿಲ್ಲಾಡಳಿತ ಭವನದ ಎದುರು ಔಷಧಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿ, ದೇಶದಲ್ಲಿ ಆನ್ ಲೈನ್ ಔಷಧ ಮಾರಾಟವನ್ನು ದೇಶದಲ್ಲಿ ಸಂಪೂರ್ಣವಾಗಿ ನಿಲ್ಲಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಜೊತೆಗೆ ಜಿಲ್ಲಾಡಳಿತ, ಜಿಲ್ಲಾ ಔಷಧಿ ನಿಯಂತ್ರಣ ಇಲಾಖೆ ಹಾಗೂ ಆಯಾ ತಾಲೂಕು ಸಂಘಗಳು ತಾಲೂಕು ಆಡಳಿತಕ್ಕೆ ಮನವಿ ಅರ್ಪಿಸಿದರು.
ಸಂಘದ ಪದಾಧಿಕಾರಿಗಳು ಮಾತನಾಡಿ, ಆನ್ ಲೈನ್ ಔಷಧ ಮಾರಾಟ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕಾನೂನು ಬಾಹಿರವಾಗಿ ಆನ್‌ಲೈನ್ ಮೂಲಕ ಔಷಧಿ ವ್ಯಾಪಾರ ನಡೆಸುತ್ತಿರುವ ಸಂಸ್ಥೆಗಳು ಹಾಗೂ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಸರ್ಕಾರ ಮೊದಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.ಜನಜೀವನ ಮೇಲೆ ಗಂಭೀರ ಪರಿಣಾಮ:
ಸರ್ಕಾರ ಮತ್ತು ಔಷಧಿ ನಿಯಂತ್ರಣ ಇಲಾಖೆ ನಿಯಮಾನುಸಾರ ಅನರ್ಹ ವ್ಯಕ್ತಿಗಳ ಮೂಲಕ ಔಷಧಿ ವಿತರಣೆ ಹಾಗೂ ಮಾರಾಟ ನಿಷೇಧಿತವಾಗಿದೆ. ಕಂಪೋಸಿಟ್ ಕಂಪನಿಗಳಿಂದ ನಡೆಸಲ್ಪಡುವ ಡಿಸ್ಟ್ರಿಬ್ಯೂಷನ್ ವ್ಯಾಪಾರದಲ್ಲಿ ದೇಶದಲ್ಲಿ ಅಸ್ತಿತ್ವದಲ್ಲಿರುವ ಔಷಧಿ ವ್ಯಾಪಾರ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ನರ್ಸಿಂಗ್ ಹೋಂ, ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳ ಮಾರಾಟ ನಡೆಸಲು ಪರವಾನಗಿ ಕಡ್ಡಾಯವಾಗಿದ್ದು, ಸರ್ಕಾರದ ಅಧಿಸೂಚನೆಗಳ ಪ್ರಕಾರ ಮಾತ್ರ ಅವು ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಆದರೆ, ಸರ್ಕಾರ, ಇಲಾಖೆ ನಿಯಮಗಳನ್ನೆಲ್ಲಾ ಉಲ್ಲಂಘಿಸಿ, ಅನೇಕ ಆನ್ ಲೈನ್ ವೇದಿಕೆಗಳು ಮತ್ತು ಅನಧಿಕೃತ ವ್ಯಕ್ತಿಗಳು ಔಷಧಿಗಳನ್ನು ಮನೆ ಬಾಗಿಲಿಗೆ ಪೂರೈಸುತ್ತಿರುವುದು ಕಂಡು ಬರುತ್ತಿದೆ. ಇದು ನಕಲಿ ಔಷಧಿ, ವೈದ್ಯರ ಸಲಹೆ ಇಲ್ಲದೇ, ಔಷಧಿ ಬಳಕೆ ಹಾಗೂ ಸಾರ್ವಜನಿಕರ ಆರೋಗ್ಯದ ಅಪಾಯಗಳಿಗೂ ಕಾರಣವಾಗುವ ಸಾಧ್ಯತೆ ಇದೆ. ಕಾನೂನು ಬಾಹಿರವಾಗಿ ಆನ್ ಲೈನ್ ಔಷಧಿ ವ್ಯಾಪಾರ ಮಾಡುವ ಸಂಸ್ಥೆಗಳು, ವ್ಯಕ್ತಿಗಳು ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ತಕ್ಷಣ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಆನ್ ಲೈನ್ ಔಷಧಿ ಮಾರಾಟದಿಂದ ಆಗುವ ಅಪಾಯ, ಅನಾಹುತ, ದುರಂತಗಳ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರ, ಔಷಧಿ ನಿಯಂತ್ರಣ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕು. ನಿಯಂತ್ರಣವಿಲ್ಲದ ಆನ್ ಲೈನ್ ಔಷಧಿ ಮಾರಾಟವು ಅಪಾಯ ತಂದೊಡ್ಡಲಿವೆ. ಅಕ್ರಮ ಇ-ಫಾರ್ಮಸಿಗಳ ಹಾವಳಿಯಿಂದ ಸಮಸ್ಯೆಯಾಗುತ್ತಿದೆ. ನಕಲಿ ವೈದ್ಯರ ಚೀಟಿ ಬಳಕೆಯಿಂದಲೂ ಅಪಾಯ ಹೆಚ್ಚಲಿದೆ. ಆ್ಯಂಟಿ ಬಯೋಟಿಕ್, ಚಟಕ್ಕೆ ಬೀಳಿಸುವ ಔಷಧಿಗಳ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚು. ರೋಗಿ ಮತ್ತು ಫಾರ್ಮಸಿಸ್ಟ್ ಮಧ್ಯೆ ನೇರ ಸಂಪರ್ಕದ ಕೊರತೆಯಾಗಲಿದೆ. ಅನಗತ್ಯ ಹಾಗೂ ಅತಿಯಾದ ರಿಯಾಯಿತಿ ನೀತಿ ಮಾರಕವಾಗಲಿದೆ ಎಂದು ಎಚ್ಚರಿಸಿದರು.
- - -
- - -
-(ಫೋಟೋಗಳಿವೆ.)