ಹೊರ ವರ್ತುಳ ರಸ್ತೆ ವಿರೋಧಿಸಿ ಹೋರಾಟ ಶುರು

KannadaprabhaNewsNetwork |  
Published : Oct 05, 2025, 01:00 AM IST
್ಿ್ಿ್ಿ | Kannada Prabha

ಸಾರಾಂಶ

ಅಕ್ಟೋಬರ್ 13 ರಂದು ಹಮ್ಮಿಕೊಂಡಿರುವ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಗೆ ಪೂರ್ವಭಾವಿಯಾಗಿ ಶನಿವಾರ ಬಾಧಿತ ಪ್ರದೇಶಗಳ ಜಾಗೃತಿ ಜಾಥಾ

ಕನ್ನಡಪ್ರಭ ವಾರ್ತೆ, ತುಮಕೂರುನಂದಿಹಳ್ಳಿ, ಮಲ್ಲಸಂದ್ರ, ವಸಂತನರಸಾಪುರ ಪ್ರಸ್ತಾಪಿತ ಹೊರ ವರ್ತುಳ ರಸ್ತೆ ಗೆ ಸರ್ಕಾರ ರೈತರ ಅನುಮತಿ ಇಲ್ಲದೆ ಭೂಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ಕ್ರಮವನ್ನು ಖಂಡಿಸಿ ವಿವಿಧ ರೈತ ಪರ ಸಂಘಟನೆಗಳು ಅಕ್ಟೋಬರ್ 13 ರಂದು ಹಮ್ಮಿಕೊಂಡಿರುವ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಗೆ ಪೂರ್ವಭಾವಿಯಾಗಿ ಶನಿವಾರ ಬಾಧಿತ ಪ್ರದೇಶಗಳ ಜಾಗೃತಿ ಜಾಥಾಕ್ಕೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ , ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಸರಕಾರ ನಂದಿಹಳ್ಳಿ, ಮಲ್ಲಸಂದ್ರ, ವಸಂತನರಸಾಪುರಹೊರ ವರ್ತುಳ ರಸ್ತೆ ಗೆ ತುಮಕೂರು ತಾಲೂಕಿನ ಸುಮಾರು 46 ಹಳ್ಳಿಗಳ 650 ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. ಇದರಿಂದ ನೂರಾರು ಎಕರೆಯಲ್ಲಿ ಬೆಳೆದಿರುವ ಅಡಿಕೆ, ತೆಂಗು ಬೆಳೆಗಳ ಜೊತೆಗೆ, ಕೊಳವೆ ಬಾಳಿ, ತೆರದ ಬಾವಿ ಮೂಲಕ ನೀರು ತೆಗೆದು ತರಕಾರಿ, ಹಣ್ಣು, ಹೂವು ಬೆಳೆದು ಜೀವನ ಸಾಗಿಸುತ್ತಿದ್ದಾರೆ ಎಂದರು. ಸರಕಾರ ರೈತರೊಂದಿಗೆ ಚರ್ಚಿಸದೆ, ಸೋಷಿಯಲ್‌ ಅಸೈನ್ಮೆಂಟ್ ಮಾಡದೆ ಭೂ ಸ್ವಾಧೀನಕ್ಕೆ ಮುಂದಾಗಿದೆ. ಇದರಿಂದ ಸುಮಾರು 750 ಕ್ಕೂ ರೈತ ಕುಟುಂಬಗಳು ಬೀದಿಗೆ ಬರಲಿದ್ದಾರೆ. ಅಲ್ಲದೆ ಪರೋಕ್ಷವಾಗಿ ಸಾವಿರಾರು ಕುಟುಂಬಗಳ ಬದುಕು ಮೂರಾ ಬಟ್ಟೆಯಾಗಲಿದೆ. ಹಾಗಾಗಿ ಸರಕಾರ ಕೂಡಲೇ ಹೊರ ವರ್ತುಳ ರಸ್ತೆ ಪ್ರಸ್ತಾಪ ಕೈಬಿಟ್ಟು, ಹಾಲಿ ಇರುವ ರಸ್ತೆಯನ್ನೇ ಆಗಲೀಕರಣ ಮಾಡಿ ,ಕೈಗಾರಿಕಾ ಪ್ರದೇಶಗಳಿಗೆ ಸುಗಮ ದಾರಿ ಕಲ್ಪಿಸಬೇಕೆಂದು ಆಗ್ರಹಿಸಿದರು.

ಪ್ರಾಂತ ರೈತ ಸಂಘದ ಬಿ.ಉಮೇಶ್ ಮಾತನಾಡಿ, ಅಭಿವೃದ್ಧಿ ಎಂದರೆ ರೈತರ ಭೂಮಿಯನ್ನು ಕಸಿದುಕೊಂಡು, ಕೃಷಿಕರು ಮತ್ತು ಅವರ ಅವಲಂಬಿತರನ್ನು ಬೀದಿ ಪಾಲು ಮಾಡುವುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಐಕೆಕೆಎಂಎಸ್‌ನ ಜಿಲ್ಲಾಧ್ಯಕ್ದ ಎಸ್.ಎನ್.ಸ್ವಾಮಿ ಮಾತನಾಡಿ,ಸರಕಾರ ಬಂಡವಾಳಗಾರರ ಅಭಿವೃದ್ದಿಗೆ ಬಡರೈತರನ್ನು ಬೀದಿಪಾಲು ಮಾಡುತ್ತಿದೆ ಎಂದರು.ಸಂಯುಕ್ತ ಹೋರಾಟ ಕರ್ನಾಟಕ, ಕರ್ನಾಟಕ ರಾಜ್ಯ ರೈತ ಸಂಘ, ಅಖಿಲ ಭಾರತ ರೈತ, ಕೃಷಿ ಕಾರ್ಮಿಕ ಸಂಘಟನೆ, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾದ ಮುಖಂಡರಾದ ಜಿ.ಎಸ್.ಶಂಕರಪ್ಪ, ಉದಯಕುಮಾರ್, ಚಿಕ್ಕಬೋರೇಗೌಡ, ಕಂಬೇಗೌಡ, ಅಜ್ಜಪ್ಪ, ತಿಮ್ಮೇಗೌಡ, ರಂಗಹನುಮಯ್ಯ, ಶಬ್ಬೀರ್, ಭಾದಿತ ಗ್ರಾಮಗಳ ಮುಖಂಡರಾದ ನಂದಿಹಳ್ಳಿ ದಾಸೇಗೌಡ, ಚಂದ್ರಪ್ಪ, ಪ್ರಮೋದ್, ಹಳೆನಿಜಗಲ್ಲು ಗ್ರಾ.ಪಂ.ಸದಸ್ಯೆ ಪುಪ್ಪಕಲಾ, ದೇವರ ಹೊಸಹಳ್ಳಿಯ ಪ್ರಭುದೇವರು,ಕೊಳ್ಳಿಹಳ್ಳಿ ಕುಮಾರ್, ಪಾಪಯ್ಯ,ಭೈರಸಂದ್ರ ರಮೇಶಪ್ಪ, ಸಿದ್ದಗಂಗಯ್ಯ, ರಾಜೇಶೇಖರ್, ಸುರೇಶ್.ಬಿ.ಕೆ., ಉದಯಕುಮಾರ್, ಅಶ್ವಥ ನಾರಾಯಣ್, ಕೌತುಮಾರನಹಳ್ಳಿಯ ಧರ್ಮಯ್ಯ, ಮಲ್ಲೇಶ್, ರೇಣುಕಯ್ಯ, ಕಿತ್ತಗಾನಹಳ್ಳಿಯ ನರಸಿಂಹರಾಜು, ಮೋಹನಕುಮಾರ್, ಗೋಪಾಲಯ್ಯ, ಸುರೇಶ.ಜೆ.ಸಿ.ಬಿ, ಮಾನಂಗಿ, ಚಿಕ್ಕಹೊಸೂರಿನ ಲಿಂಗರಾಜು, ಚಿಕ್ಕಹನುಮಂತಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಇದೇ ವೇಳೆ ಕಿತ್ತಗಾನಹಳ್ಳಿಯ ಕರ್ನಾಟಕ ರಾಜ್ಯರೈತ ಸಂಘದ ಗ್ರಾಮ ಶಾಖೆಗಳನ್ನು ಉದ್ಘಾಟಿಸಲಾಯಿತು.

PREV

Recommended Stories

ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರ ಅಭಿಮತ
‘ಅಗತ್ಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳೋ ಸಾಮರ್ಥ್ಯ ಪಕ್ಷಕ್ಕಿದೆ’