ಖಾಸಗೀಕರಣ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

KannadaprabhaNewsNetwork |  
Published : Jul 21, 2026, 02:30 AM IST
ಗದಗ ಪ್ರಧಾನ ಅಂಚೆ ಕಚೇರಿಯಲ್ಲಿ ಸೋಮವಾರ ಭಾರತೀಯ ಅಂಚೆ ಇಲಾಖೆಯ ಖಾಸಗೀಕರಣ ವಿರೋಧಿಸಿ ಅಂಚೆ ನೌಕರರ ಸಂಘದ ಸದಸ್ಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಅನುಕಂಪ ಆಧರಿತ ನೇಮಕಾತಿಗೆ ಇರುವ ಶೇ. 5 ಮಿತಿ ತೆಗೆದು ಹಾಕಿ ಅರ್ಹರಾಗಿರುವ ಎಲ್ಲ ಮೃತ ನೌಕರರ ಅವಲಂಬಿತರನ್ನು ಹುದ್ದೆಗಳಿಗೆ ನೇಮಕ ಮಾಡಬೇಕು.

ಗದಗ: ಭಾರತೀಯ ಅಂಚೆ ಇಲಾಖೆಯ ಖಾಸಗೀಕರಣ ವಿರೋಧಿಸಿ ಮತ್ತು ಸಿಬ್ಬಂದಿ ಮೇಲಿನ ಶೋಷಣೆ ಖಂಡಿಸಿ, ಭಾರತೀಯ ಅಂಚೆ ನೌಕರರ ಸಂಘದ ಸದಸ್ಯರು ಜು. 20ರಿಂದ 27ರ ವರೆಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಗದಗ ಪ್ರಧಾನ ಅಂಚೆ ಕಚೇರಿಯಲ್ಲಿ ಸೋಮವಾರ ಭಾರತೀಯ ಅಂಚೆ ನೌಕರರ ಸಂಘದ ಗದಗ ವಿಭಾಗೀಯ ಕಾರ್ಯದರ್ಶಿ ಡಿ.ಜಿ. ಮ್ಯಾಗೇರಿ ಅವರು, ಕಪ್ಪು ಪಟ್ಟಿ ಧರಿಸಿ ಹೋರಾಟಕ್ಕೆ ಚಾಲನೆ‌ ನೀಡಿ ಮಾತನಾಡಿದ‌ ಅವರು, ಕೂಡಲೇ ಕೇಂದ್ರ ಸರ್ಕಾರ ಹಲವು ದಶಕಗಳಿಂದ ಅಂಚೆ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಬೇಕು.

ಇನ್ನೂ, ಟಾರ್ಗೆಟ್ ಹೆಸರಿನಲ್ಲಿ ಅವೈಜ್ಞಾನಿಕ ಗುರಿಗಳನ್ನು ನೀಡಲಾಗುತ್ತಿದ್ದು, ಅದನ್ನು ತಕ್ಷಣವೇ ನಿಲ್ಲಿಸಬೇಕು. ಪ್ರಧಾನ ಮಂತ್ರಿಯವರ ಘೋಷಣೆಯ ನಂತರವೂ ಅಂಚೆಗಳನ್ನು ರೈಲು ಮೂಲಕ ಕಳುಹಿಸುವ ಬದಲು ಆರ್‌ಟಿಎನ್ ಮೂಲಕ ಕಳುಹಿಸಲಾಗುತ್ತಿದೆ. ನಗರದಿಂದ ನಗರಕ್ಕೆ ಸಾಗುವ ಆರ್‌ಟಿಎನ್ ಸೇವೆಯನ್ನು ನಿಲ್ಲಿಸಿ ರೈಲ್ವೆ ಅಂಚೆ ಸೇವೆಯನ್ನು ಪುನಃ ಆರಂಭಿಸಬೇಕು. ಅಷ್ಟೇ, ಅಲ್ಲದೇ, ಅನುಕಂಪ ಆಧರಿತ ನೇಮಕಾತಿಗೆ ಇರುವ ಶೇ. 5 ಮಿತಿ ತೆಗೆದು ಹಾಕಿ ಅರ್ಹರಾಗಿರುವ ಎಲ್ಲ ಮೃತ ನೌಕರರ ಅವಲಂಬಿತರನ್ನು ಹುದ್ದೆಗಳಿಗೆ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಭಾರತೀಯ ಅಂಚೆ ನೌಕರರ ಗದಗ ವಿಭಾಗೀಯ ಗ್ರುಪ್ ಸಿ ಅಧ್ಯಕ್ಷ ಎಸ್.ಎಫ್. ಹರಿಜನ, ವೀರೇಶ ಅಂಗಡಿ, ಮನೋಹರ ಕಡಿಯವರ, ವೆಂಕಟೇಶ ಆಕಳವಾಡಿ, ಭೀಮಣ್ಣ ದೊಡ್ಡಮನಿ, ಶರಣಪ್ಪ ಬೇನಾಳ, ಗೋಪಾಲ ಲಮಾಣಿ, ರವಿ ಜಾಧವ, ಮಂಜುಳಾ ಕಡ್ಡಿ, ಬಸವರಾಜ ಮೊರಬದ, ರಾಘವೇಂದ್ರ ಕಮ್ಮಾರ, ಉಮೇಶ ಸಂದಿಮನಿ, ಮಂಜುನಾಥ ಟಿ., ನೀಲಮ್ಮ ದಿಬ್ಬದಮನಿ, ವಾಣಿ ಮಾಂಡ್ರೆ, ವಿದ್ಯಾ ಗದಗ, ಲಕ್ಷ್ಮೀ ಮಾದರ ಮತ್ತಿತರರು ಇದ್ದರು.ಪಕ್ಷ ವಿರೋಧಿ ಚಟುವಟಿಕೆ: ಬಿಜೆಪಿಯಿಂದ ಇಬ್ಬರ ವಜಾ

ಶಿರಹಟ್ಟಿ: ಪಕ್ಷದ ಶಿಸ್ತು ಉಲ್ಲಂಘಿಸಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯ ಇಬ್ಬರು ಪದಾಧಿಕಾರಿಗಳನ್ನು ವಜಾ ಮಾಡಲಾಗಿದೆ ಎಂದು ಪಕ್ಷದ ಶಿರಹಟ್ಟಿ ಮಂಡಳದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಮಂಜುನಾಥ ಮಾಗಡಿ, ಹೊನ್ನಪ್ಪ ವಡ್ಡರ ಅವರು ಕಳೆದ ಮೂರು ವರ್ಷಗಳಿಂದ ಬಿಜೆಪಿಗೆ ಮುಜುಗರ ಉಂಟು ಮಾಡುವಂತಹ ಹೇಳಿಕೆಗಳನ್ನು ನೀಡುತ್ತಾ ಶಾಸಕರ ವಿರುದ್ಧ ಅವಹೇಳನಕಾರಿ ಶಬ್ದಗಳನ್ನು ಬಳಸಿ ನಿರಂತರವಾಗಿ ಪಕ್ಷ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಪಕ್ಷದ ಹಿರಿಯರು ಮಾಜಿ ಶಾಸಕರಾದ ಗಂಗಣ್ಣ ಮಹಾಂತಶೆಟ್ಟರ ಅವರ ವಿರುದ್ಧವೂ ಹಗುರವಾಗಿ ಮಾತನಾಡುತ್ತಾ ಪಕ್ಷದಲ್ಲಿ ಗೊಂದಲ, ಇರುಸು- ಮುರುಸು ಉಂಟು ಮಾಡಿದ್ದಾರೆ. ಹೀಗಾಗಿ ಈ ಇಬ್ಬರನ್ನು ಕೋರ್ ಕಮಿಟಿ ಎಲ್ಲ ಸದಸ್ಯರ ಒಮ್ಮತದ ನಿರ್ಣಯದ ಮೇರೆಗೆ ವಜಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಶ್ವತ ನಿವಾಸಿ ಪತ್ರ ಆತಂಕಕಾರಿ: ಅಶೋಕ್‌
ಮೋದಿ ದುರ್ಬಲ, ದುಷ್ಟರಕ್ಷಕ ಪ್ರಧಾನಿ: ಸಿದ್ದು ಕಿಡಿ