ಅಂಬೇಡ್ಕರ್ ಕೊಟ್ಟಿರುವ ಮತದಾರರ ಹಕ್ಕನ್ನು ಭಾರತೀಯ ಮೂಲನಿವಾಸಿಗಳಾದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಬಹುಜನರೆಲ್ಲರಿಗೂ ಕಾಂಗ್ರೆಸ್ಸಿಗರ ವಿರೋಧವನ್ನೂ ಲೆಕ್ಕಿಸದೆ ಚುನಾವಣಾ ಆಯೋಗ ಎಸ್‌ಐಆರ್ ನಡೆಸುವ ಮೂಲಕ ಮೂಲನಿವಾಸಿಗಳ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನೆಪದಲ್ಲಿ ಮತದಾನದ ಹಕ್ಕು ಮತ್ತು ಭಾರತೀಯ ನಾಗರಿಕ ಹಕ್ಕನ್ನು ಕಸಿದುಕೊಳ್ಳಲು ಕೇಂದ್ರ ಸರ್ಕಾರ ಮತ್ತು ಭಾರತ ಚುನಾವಣಾ ಆಯೋಗ ಷಡ್ಯಂತ್ರ ನಡೆಸಿದೆ ಎಂದು ಆರೋಪಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಅಂಬೇಡ್ಕರ್ ಕೊಟ್ಟಿರುವ ಮತದಾರರ ಹಕ್ಕನ್ನು ಭಾರತೀಯ ಮೂಲನಿವಾಸಿಗಳಾದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಬಹುಜನರೆಲ್ಲರಿಗೂ ಕಾಂಗ್ರೆಸ್ಸಿಗರ ವಿರೋಧವನ್ನೂ ಲೆಕ್ಕಿಸದೆ ಚುನಾವಣಾ ಆಯೋಗ ಎಸ್‌ಐಆರ್ ನಡೆಸುವ ಮೂಲಕ ಮೂಲನಿವಾಸಿಗಳ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದರು.
ವಿಶೇಷ ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ಪಟ್ಟಿಯಲ್ಲಿನ ನ್ಯೂನತೆಯನ್ನು ಅಗತ್ಯವಾದ ಸಾಮಾನ್ಯ ದಾಖಲೆಗಳ ಪರಿಶೀಲನೆ ಮಾಡುವುದಾಗಿದೆ. ಆದರೆ ಮೋದಿ ಸರ್ಕಾರ ಹಲವು ರಾಜ್ಯಗಳಲ್ಲಿ ಕೋಟ್ಯಂತರ ಮತದಾರರನ್ನು ವಿಶೇಷ ಮತದಾರರ ಪಟ್ಟಿಯ ನೆಪದಲ್ಲಿ ಅನರ್ಹಗೊಳಿಸುತ್ತಿದ್ದಾರೆ ಎಂದು ದೂರಿದರು.
ಪ್ರಧಾನಿ ಮೋದಿಯವರು ಕೇಂದ್ರ ಸರ್ಕಾರ ಡಿಸೆಂಬರ್ ೨೦೨೩ರಲ್ಲಿ ಭಾರತ ಸಂವಿಧಾನ ವಿರೋಧಿಯಾದ ಕಾಯ್ದೆ ಮಾಡುವ ಮೂಲಕ ಸ್ವಾಯತ್ತ ಸಂಸ್ಥೆಯಾದ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸುವ ಸಮಿತಿಯಿಂದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ಕೈಬಿಡುವ ಕಾಯ್ದೆಯನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ವಿದೇಶಿ ಮತ್ತು ನೆರೆ ರಾಜ್ಯದ ವಲಸಿಗರನ್ನು ಗುರುತಿಸಲು ಭಾರತದ ಸಾವತ್ರಿಕ ಮತದಾರರ ಪಟ್ಟಿಯನ್ನು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್)ಗೊಳಪಡಿಸುವ ಬಹುದೊಡ್ಡ ಆಂದೋಲನವೆಂದು ಈ ಕೂಡಲೇ ಘೋಷಿಸಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾಧ್ಯಕ್ಷ ಆನಂದ್, ಮುಖಂಡರಾದ ಸುಶ್ಮಿತಾ, ನಾಗರಾಜು, ವೆಂಕಟೇಶ್, ಸುಧಾ, ಮುತ್ತುರಾಜು, ಸ್ವಾಮಿ, ವಿಮಲಾ, ಸಿದ್ದಯ್ಯ ಸೇರಿದಂತೆ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.