ಸಚಿನ ಪಂಚಾಳ ಆತ್ಮಹತ್ಯ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Jan 08, 2025, 12:15 AM IST
(ಫೋಟೋ 7ಬಿಕೆಟಿ8,ವಿಶ್ವಕರ್ಮ ಸಮಾಜದವರಿಂದ ಪ್ರತಿಭಟನೆ) | Kannada Prabha

ಸಾರಾಂಶ

ಸಚಿನ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸರ್ಕಾರದ ನಿರ್ಲಕ್ಷವನ್ನು ಸಮಾಜ ಸಹಿಸುವುದಿಲ್ಲ. ಸಾವಿನ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಆ ಬಡ ಕುಟುಂಬಕ್ಕೆ ನೆರವಾಗಬೇಕು ಎಂದು ಅಖಿಲ ಕರ್ನಾಟಕ ವಿಶ್ವಬ್ರಾಹ್ಮಣ ಮಠಾಧಿಪತಿಗಳ ಹಾಗೂ ಪೀಠಾಧಿಪತಿಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮುರನಾಳ ಮಳೇರಾಜೇಂದ್ರಸ್ವಾಮಿ ಮಠದ ಜಗನ್ನಾಥಮಹಾಸ್ವಾಮಿಗಳು ಸರ್ಕಾರಕ್ಕೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಚಿನ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸರ್ಕಾರದ ನಿರ್ಲಕ್ಷವನ್ನು ಸಮಾಜ ಸಹಿಸುವುದಿಲ್ಲ. ಸಾವಿನ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಆ ಬಡ ಕುಟುಂಬಕ್ಕೆ ನೆರವಾಗಬೇಕು ಎಂದು ಅಖಿಲ ಕರ್ನಾಟಕ ವಿಶ್ವಬ್ರಾಹ್ಮಣ ಮಠಾಧಿಪತಿಗಳ ಹಾಗೂ ಪೀಠಾಧಿಪತಿಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮುರನಾಳ ಮಳೇರಾಜೇಂದ್ರಸ್ವಾಮಿ ಮಠದ ಜಗನ್ನಾಥಮಹಾಸ್ವಾಮಿಗಳು ಸರ್ಕಾರಕ್ಕೆ ಆಗ್ರಹಿಸಿದರು.ಬಾಗಲಕೋಟೆ ಜಿಲ್ಲಾ ವಿಶ್ವಕರ್ಮ ಸಮಾಜ, ನಗರದ ವಿಶ್ಚಕರ್ಮ ಸಮಾಜ ಸಂಘ, ಸುವರ್ಣಕಾರ ಸಂಘ, ಗಜಾನನ ತರುಣ ಸಂಘ, ವಿದ್ಯಾ ವಿಕಾಸ ಸಂಸ್ಥೆ ಮಹಿಳಾ ಮಂಡಳ, ತಾಲೂಕು, ನಗರ ವಿಶ್ವಕರ್ಮ ಸಮಾಜದಿಂದ ಮಂಗಳವಾರ ಜಿಲ್ಲಾಧಿಕಾರಿಗಳ ಆಡಳಿತ ಭವನದ ಮುಂದೆ ಹಮ್ಮಿಕೊಂಡ ಸಚಿನ ಪಂಚಾಳ ಆತ್ಮಹತ್ಯೆ ಖಂಡಿಸಿ ನಡೆದ ಪ್ರತಿಭಟಣೆಯನ್ನುದ್ದೇಶಿಸಿ ಮಾತನಾಡಿದ ಅವರು, ಪದೆ ಪದೇ ಇಂಥ ಘಟನೆಗಳು ಜರುಗುತ್ತಿದ್ದು, ಸರ್ಕಾರದ ನಿರ್ಲಕ್ಷ್ಯ ಸಲ್ಲದು. ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ಮಾಡದೆ ಮೃತರಿಗೆ ನ್ಯಾಯ ಒದಗಿಸಬೇಕು. ಸಮಾಜ ಚಿಕ್ಕದಿದ್ದರು ಸಹ ಸಮಾಜ ರೊಚ್ಚಿಗೆದ್ದರೆ ಸರ್ಕಾರವನ್ನು ಉರಳಿಸುವ ಶಕ್ತಿ ವಿಶ್ವಕರ್ಮ ಸಮಾಜಕ್ಕೆ ಇದೆ ಎಂಬುವುದನ್ನು ಮರೆಯಬಾರದು ಎಂದು ಎಚ್ಚರಿಕೆ ನೀಡಿದರು.ಗದ್ದನಗಿರಿ ಮಠದ ಮಳೆಯಪ್ಪಯ್ಯ ಸ್ವಾಮಿಗಳು ಮಾತನಾಡಿ, ಸಚಿನ ಸಾವಿಗೆ ನ್ಯಾಯ ಸಿಗುವರೆಗೂ ಹೋರಾಟ ನಿರಂತರವಾಗಿತ್ತೆ. ಆತ ಬಡ ಗುತ್ತಿಗೆದಾರನಾಗಿದ್ದ ಸಚಿನ ಪಂಚಾಳ ಆತ್ಮಹತ್ಯಗೆ ಕಾರಣರಾದವರನ್ನು ಬಂಧಿಸಿ ಅವರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ವಿಶ್ವಕರ್ಮ ಸಮಾಜದ ಅಧ್ಯಕ್ಷ ಮೌನೇಶ ಪತ್ತಾರ ಕೆರೂರ, ವಿಶ್ವಕರ್ಮ ವಂಶಿ ಸೇನಾ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಪತ್ತಾರ ಸಂಶಿ, ನಾಗೇಶ ಬರಗಿ, ಸಂಗಣ್ಣ ಹಡಗಲಿ, ಶ್ರೀಕಾಂತ ಪತ್ತಾರ, ನೀತಿನ ಪತ್ತಾರ, ಮೌನೇಶ ಪತ್ತಾರ ಕಿಡದೂರ, ಮೌನೇಶ ಬಡಿಗೇರ, ಸಿ.ಎಂ.ಪತ್ತಾರ, ಸಂಜು ಪತ್ತಾರ, ಮೌನೇಶ ಹೆರಕಲ್,ವಿನೋದ ಸೋನಾರ,ರವಿ ಬಡಿಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಪ್ರತಿಭಟನೆಕ್ಕೂ ಮುಂಚೆ ಕೆ.ಎಸ್.ಆರ್‌.ಟ.ಸಿ ಡೀಪೋದಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ