ಸಿ.ಟಿ. ರವಿ ಬಂಧನ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Dec 21, 2024 1:16 AM

ಸಾರಾಂಶ

ಕೇಂದ್ರ ಗೃಹ ಸಚಿವ ಅಮೀತ್ ಶಾ ಸಂಸತ್ತಿನಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್‌ ಕುರಿತು ಮಾತನಾಡುವಾಗ ಅವರ ಹೇಳಿಕೆಯ ಭಾಷಣದ ತುಣುಕನ್ನು ತಪ್ಪಾಗಿ ಅರ್ಥ ಬರುವ ಹಾಗೇ ತಿರುಚಿದ್ದು ಖಂಡನೀಯ

ಗದಗ: ಕೇಂದ್ರ ಗೃಹ ಸಚಿವ ಅಮೀತ್ ಶಾ ಹೇಳಿಕೆಯ ತುಣುಕನ್ನು ಸಂಪೂರ್ಣ ತಿರುಚಿದ್ದು ಹಾಗೂ ವಿಪ ಸದಸ್ಯ ಸಿ.ಟಿ. ರವಿ ಬಂಧನ ಖಂಡಿಸಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಶುಕ್ರವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಲಾಯಿತು.

ಅಮಿತ್ ಶಾ ಹೇಳಿಕೆ ತಿರುಚಿದ್ದಾರೆ ಎಂದು ಬಿಜೆಪಿ ಕಾರ್ಯರ್ತರು ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ನೇತೃತ್ವದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಮುಂಜಾಗ್ರತಾ ಕ್ರಮವಾಗಿ ಕಾಂಗ್ರೆಸ್ ಕಚೇರಿ ಮುಂದೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.

ಪ್ರತಿಭಟನೆ ಉದ್ದೇಶಿಸಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ ಮಾತನಾಡಿ, ಕೇಂದ್ರ ಗೃಹ ಸಚಿವ ಅಮೀತ್ ಶಾ ಸಂಸತ್ತಿನಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್‌ ಕುರಿತು ಮಾತನಾಡುವಾಗ ಅವರ ಹೇಳಿಕೆಯ ಭಾಷಣದ ತುಣುಕನ್ನು ತಪ್ಪಾಗಿ ಅರ್ಥ ಬರುವ ಹಾಗೇ ತಿರುಚಿದ್ದು ಖಂಡನೀಯ. ಡಾ.ಬಿ.ಆರ್.ಅಂಬೇಡ್ಕ 1952ರಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಅವರ ವಿರುದ್ಧ ಪ್ರಚಾರ ಮಾಡಿ ಅವರನ್ನು ಸೋಲಿಸಿದ್ದು ಇದೇ ಕಾಂಗ್ರೇಸ್ ಪಕ್ಷ. ಅಂಬೇಡ್ಕರ್ ಬಗ್ಗೆ ಬಿಜೆಪಿಗೆ ಅಪಾರವಾದ ಗೌರವಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಂಬೇಡ್ಕರ್ 5 ಪ್ರಮುಖ ಕ್ಷೇತ್ರಗಳಾದ ಜನ್ಮಭೂಮಿ, ಶಿಕ್ಷಾಭೂಮಿ, ದಿಕ್ಷಾಭೂಮಿ, ಮಹಾ ಪರಿನಿರ್ವಾಣ ಭೂಮಿ, ಚೈತ್ಯಭೂಮಿ ಅಭಿವೃದ್ಧಿ ಪಡಿಸಿದ್ದಾರೆ. ಇದು ಅಂಬೇಡ್ಕರ ಕುರಿತು ಬಿಜೆಪಿಗೆ ಇರುವ ಗೌರವ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್‌ ಅಂಬೇಡ್ಕರ್‌ ಹೆಸರನ್ನು ಕೇವಲ ಮತ ಬ್ಯಾಂಕಿಗಾಗಿ ಬಳಸಿಕೊಳ್ಳುತ್ತಿದ್ದೆ. ಅವರ ಸಾವಿನಲ್ಲೂ ಅಂತ್ಯಕ್ರಿಯೆಗೆ ಸ್ಥಳ ನೀಡದೆ ಅಂಬೇಡ್ಕರ್‌ ಅವರಿಗೆ ಅಗೌರವ ತೊರಿಸಿದ್ದು ದೇಶದ ಜನತೆಗೆ ಗೊತ್ತಿರುವ ಸಂಗತಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಚಳಿಗಾಲದ ಅಧಿವೇಶನದಲ್ಲಿ ನಡೆಯಬೇಕಾದ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಇದ್ದ ವಿಷಯಗಳನ್ನು ಮರೆ ಮಾಚಲು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಮರೆಮಾಚಲು ಸರ್ಕಾರದ ಸಚಿವರು ಕುಮ್ಮಕ್ಕು ನೀಡಿ ಜನರ ಅಭಿವೃದ್ಧಿ ವಿಚಾರಗಳನ್ನು ದಿಕ್ಕು ತಪ್ಪಿಸಲು ಹೊರಟಿದ್ದು, ರಾಜ್ಯದ ಜನತೆಗೆ ಗೊತ್ತಿರುವ ಸಂಗತಿ. ಇದಕ್ಕೆ ಗುರುವಾರ ಸುವರ್ಣಸೌಧದಲ್ಲಿ ನಡೆದ ಘಟನೆಯೇ ಸಾಕ್ಷಿ. ವಿರೋಧ ಪಕ್ಷದ ನಾಯಕರನ್ನು ನಡೆಸಿಕೊಳ್ಳುವ ರೀತಿ ಶೋಚನೀಯ ಎಂದರು.

ಈ ವೇಳೆ ನಗರ ಮಂಡಲ ಅಧ್ಯಕ್ಷ ಅನೀಲ ಅಬ್ಬಿಗೇರಿ, ಅಶೋಕ ಸಂಕಣ್ಣವರ, ಉಮೇಶ ಚನ್ನುಪಾಟೀಲ, ಪ್ರಕಾಶ ಕೊತಂಬರಿ, ನವೀನ ಕೊಟೆಕಲ್, ಶಿವು ಗೊಟೂರ, ಸುರೇಶ ಚವ್ಹಾಣ, ನವೀನ ಕುರ್ತಕೋಟಿ, ಪ್ರವೀಣ ಹಡಪದ, ವಿನಾಯಕ ಹರಕೇರಿ, ಸಚಿನ್ ಮಡಿವಾಳರ, ಗೋಪಾಲ ಗಡ್ಡದವರ, ಮಹಾಂತೇಶ ಬಾತಾಖಾನಿ, ಅರುಣ ಹುಲ್ಲೂರ, ರವಿ ಮಾನ್ವಿ, ಯೋಗೇಶ್ವರಿ ಭಾವಿಕಟ್ಟಿ, ಸಂತೋಷ ಮುಳ್ಳಾಳ, ರಾಹುಲ ಸಂಕಣ್ಣವರ ಇನ್ನೂ ಹಲವಾರು ಪ್ರಮುಖರು ಇದ್ದರು.

Share this article