ಬೆಂಗಳೂರು: ಡೀಸೆಲ್ ದರ ಹೆಚ್ಚಳ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಾಗಿಸುವ ಲಗೇಜ್ ದರ ಪರಿಷ್ಕರಿಸಲಾಗಿದ್ದು, ಪರಿಷ್ಕೃತ ದರ ಸೋಮವಾರದಿಂದ ಜಾರಿಗೆ ಬರಲಿದೆ. ಡೀಸೆಲ್, ಸಿಬ್ಬಂದಿ ಹಾಗೂ ಇತರೆ ವೆಚ್ಚಗಳ ಹೆಚ್ಚಳ ಹಿನ್ನೆಲೆಯಲ್ಲಿ ನಿಗಮದ ಬಸ್‌ಗಳಲ್ಲಿ ಸಾಗಿಸುವ ಲಗೇಜ್ ದರವನ್ನು ಪರಿಷ್ಕರಿಸಲಾಗಿದೆ.
ಕಳೆದ ಬಾರಿ ಶೇ.15ರಷ್ಟು ಬಸ್ ಪ್ರಯಾಣ ದರ ಹೆಚ್ಚಾಗಿತ್ತು
ಕಳೆದ ಬಾರಿ ಶೇ.15ರಷ್ಟು ಬಸ್ ಪ್ರಯಾಣ ದರ ಹೆಚ್ಚಾಗಿತ್ತು. ಅದರಂತೆ ಈ ಬಾರಿ ಲಗೇಜು ದರ ಶೇ.15 ಹೆಚ್ಚಾಗಿದೆ. ಪ್ರಯಾಣಿಕರು ಉಚಿತವಾಗಿ 30 ಕೆ.ಜಿ.ವರೆಗೂ ಲಗೇಜ್ ಕೊಂಡೊಯ್ಯಲು ಅವಕಾಶವಿದೆ. 30 ಕೆ.ಜಿ.ಗೂ ಅಧಿಕ ಭಾರದ ಲಗೇಜ್ ತೆಗೆದುಕೊಂಡು ಹೋಗಲು ದರ ಅನ್ವಯಿಸುತ್ತದೆ. ಈ ಹಿಂದೆ ಲಗೇಜ್ ದರ ಡಿಸೆಂಬರ್ 2021ರಲ್ಲಿ ಏರಿಕೆಯಾಗಿತ್ತು.
ಪರಿಷ್ಕೃತ ದರವನ್ನು ಇಟಿಎಂ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪ್ರತಿ ಬಾರಿಯೂ ಲಗೇಜು ದರ ಏರಿಕೆ ಬಸ್ ಪ್ರಯಾಣ ದರ ಏರಿಕೆಯೊಂದಿಗೆ ಆಗುತ್ತದೆ. ಕಳೆದ ವರ್ಷ ಜನವರಿಯಲ್ಲಿ ಬಸ್ ಪ್ರಯಾಣ ದರ ಏರಿಕೆಯಾಗಿತ್ತು. ಆದರೆ ಲಗೇಜು ದರ ಏರಿಕೆ ಮಾಡಿರಲಿಲ್ಲ. ಇನ್ನು ಯಾವಾಗಲೂ ಬಸ್ ಪ್ರಯಾಣ ದರ ಎಷ್ಟು ಹೆಚ್ಚಾಗಿರುತ್ತದೆಯೋ ಅಷ್ಟೇ ಲಗೇಜು ದರವೂ ಹೆಚ್ಚಾಗುತ್ತದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಆದೇಶದಲ್ಲಿ ತಿಳಿಸಿದ್ದಾರೆ.
ದರ ವಿಧಿಸಬಹುದಾದ ಸ್ಟೇಜ್ ಪರಿಷ್ಕೃತ ಲಗೇಜ್ ದರ
1-5 6 ರು.
6-10 12 ರು.
11-15 20 ರು.
21-25 28 ರು.
26-30 32 ರು.
51-55 54 ರು.
71-75 72 ರು.
96-100 93 ರು.
121-125 114 ರು.
146-150 135 ರು.
156-160 145 ರು.
