ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಆಸ್ಪತ್ರೆ ಎದುರು ವಿವಿಧ ಸಂಘಟನೆಗಳ ಮುಖಂಡರು ಜಮಾವಣೆಗೊಂಡು ವೈದರು ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ತಿಂಗಳ ಹಿಂದೆ ಇಲ್ಲಿನ ಮುಖ್ಯ ವೈದ್ಯಾಧಿಕಾರಿ ಅವರಿಗೆ ಮನವಿ ಮಾಡಿ, ಆಡಳಿತ ವ್ಯವಸ್ಥೆಯನ್ನು ಸರಿಪಡಿಸುವಂತೆ ಜೊತೆಗೆ ವೃದ್ಧರು, ಮಕ್ಕಳು, ಮಹಿಳಾ ರೋಗಿಗಳನ್ನು ನಿರ್ಲಕ್ಷಿಸುತ್ತಿರುವ ಕೆಲವು ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಲಿಖಿತ ಮನವಿ ಮಾಡಲಾಗಿದೆ ಆದರೂ ಯಾವುದೇ ಪ್ರಯೋಜನವಾಗಿಲ್ಲ. ಎಂದಿನಂತೆ ರೋಗಿಗಳನ್ನು ನಿರ್ಲಕ್ಷಿಸುವ ಪ್ರೌವೃತ್ತಿ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.ಈ ಕೂಡಲೇ ಸರ್ಕಾರ, ಸಂಬಂಧಪಟ್ಟ ಮೇಲಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ, ಸಾರ್ವಜನಿಕರು ಸೇರಿದಂತೆ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಿದೆ ನಿರ್ಲಕ್ಷ್ಯ ವಹಿಸುತ್ತಿರುವ ವೈದ್ಯರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಈ ವೇಳೆ ಉದ್ಯೋಗದಾತ ಸಂಸ್ಥೆ ಮುಖ್ಯಸ್ಥ ರುಕ್ಮಾಂಗದ, ಪುರಸಭಾ ಮಾಜಿ ಸದಸ್ಯ ಜಯರಾಂಜಿ, ಕೆ.ಶೆಟ್ಟಹಳ್ಳಿ ಯತೀಶ್, ಕಿರಣ್, ಛಾಯಾಸುತ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.ಎನ್.ಸರಸ್ವತಿಗೆ ಚಲನಚಿತ್ರ ನಿರ್ದೇಶಕರ ಸಂಘದಿಂದ ಸನ್ಮಾನಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣ ಅಲಯನ್ಸ್ ಐಕ್ಯ ಸಂಸ್ಥೆಯ ಅಧ್ಯಕ್ಷೆ ಹಾಗೂ ರಾಗಶ್ರೀ ಪ್ರೊಡಕ್ಷನ್ ಸಂಸ್ಥೆ ಮುಖ್ಯಸ್ಥೆ ಎನ್.ಸರಸ್ವತಿ ಪಶ್ಚಿಮವಾಹಿನಿ ಅವರ ಸಮಾಜ ಸೇವೆ ಗುರುತಿಸಿ ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಸಂಘದಿಂದ ಗೌರವಿಸಲಾಯಿತು.ನಂತರ ಹಿರಿಯ ನಿರ್ದೇಶಕ ಜೋಸೈಮನ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಸೇವೆ ಅತ್ಯಗತ್ಯವಾಗಿದ್ದು, ದೇಶದಲ್ಲಿ ಬಹಳಷ್ಟು ಮಂದಿ ಅನ್ನ-ಆಹಾರಕ್ಕಾಗಿ ದಿನಗಟ್ಟಲೆ ದುಡಿದರೂ ಅವರ ಬಡತನ ನಿವಾರಣೆಯಾಗುವುದಿಲ್ಲ. ಅಂತಹ ಸಮಯದಲ್ಲಿ ಸಮಾಜಸೇವಕರ ಪಾತ್ರ ಪ್ರಾಮುಖ್ಯತೆ ವಹಿಸುತ್ತದೆ. ಸಂಘ-ಸಂಸ್ಥೆಯಿಂದ ಸಮಾಜ ಸೇವೆ ಮಾಡುವರನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಇನ್ನಷ್ಟು ಉತ್ಸಾಹ ಅವರಿಗೆ ಬರುತ್ತದೆ ಎಂದರು.
ಈ ವೇಳೆ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್‌ಆರ್‌ಕೆ ವಿಶ್ವನಾಥ್, ಅನುತೇಜ, ಮಳವಳ್ಳಿ ಸಾಯಿ ಕೃಷ್ನ, ಚಿಕ್ಕಣ್ಣ, ಎಚ್.ವಿ ಪುಟ್ಟಸ್ವಾಮಿ ಸೇರಿದಂತೆ ಇತರರು ಇದ್ದರು.