ಕನ್ನಡಪ್ರಭ ವಾರ್ತೆ ಅಥಣಿ
ಸ್ಥಳೀಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಮಾವೇಶಗೊಂಡು ಅಲ್ಲಿಂದ ಬೈಕ್ ರ್‍ಯಾಲಿ ಮೂಲಕ ಹೊರಟು ಬಸವೇಶ್ವರ ವೃತ್ತ, ಶಿವಯೋಗಿ ಮತ್ತು ಡಾ.ಅಂಬೇಡ್ಕರ್ ವೃತ್ತದ ಮೂಲಕ ಮಿನಿ ವಿಧಾನ ಸೌಧ ತಲುಪಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ ಅರವಿಂದರಾವ್ ದೇಶಪಾಂಡೆ, ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕರಾದ ಅರುಣ ಯಲಗುದ್ರಿ, ಹಿರಿಯ ನ್ಯಾಯವಾದಿ ಆರ್.ಎನ್.ಸಿದ್ಧಾಂತಿ, ಧುರೀಣರಾದ ಉಮೇಶರಾವ ಬಂಟೋಡಕರ, ಪಂ.ಬಿಂದುಮಾಧವ ಜೋಶಿ, ಶ್ರೀನಿವಾಸ ಜೋಶಿ, ವಿಶ್ವಕರ್ಮ ಸಮಾಜದ ಭೀಮರಾವ ಬಡಿಗೇರ, ಮರಾಠಾ ಸಮಾಜದ ರವಿ ದೇಸಾಯಿ, ವೈಶ್ಯ ಸಮಾಜದ ಉದಯ ಗುಂಡಾ, ಗುಜರಾತಿ ಸನಾಜದ ಭರತ ಸೋಮಯ್ಯ, ರಘೋತ್ತಮ ಕಟ್ಟಿ, ಶ್ರೀರಾಮ ಕಟ್ಟಿ, ಅನೀಲ ದೇಶಪಾಂಡೆ (ಹಿಡಕಲ್), ಎನ್.ಕೆ.ಪಾಟೀಲ, ಗುಂಡು ಇಜಾರೆ, ಭರಮು ಬಡಿಗೇರ, ಅವಿನಾಶ ಜಾಧವ, ಸೌರಭ ಮಾಶಾಳ, ರಾಜು ಪಾಟೀಲ, ಭಾವೀನ್ ಸೋಮಯ್ಯ, ಲಕ್ಷ್ಮಣ ರಾಮದಾಸಿ, ವೆಂಕಟೇಶ ದೇಶಪಾಂಡೆ, ಮಾಧವ ಕೌಲಗುಡ್ಡ, ಸುಧೀಂದ್ರ ಬಾದರಾಯಣಿ, ಚೈತನ್ಯ ಮಳಗೀಕರ, ಆದೀಪ ಮಾಶಾಳ, ಸಚೀನ್ ಕುಲಕರ್ಣಿ, ರಾಜು ಕರ್ಪೂರಶೆಟ್ಟಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಬೀದರ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಕೆ.ಇ.ಎ ನಿರ್ದೇಶನ ಇಲ್ಲದಿದ್ದರೂ ಕೂಡ ಅಧಿಕಾರಿಗಳು ದುರುದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ್ದಾರೆ. ಅಲ್ಲದೆ ಇದಕ್ಕೆ ಒಪ್ಪದ ವಿದ್ಯಾರ್ಥಿಗಳ ಜನಿವಾರವನ್ನು ಕತ್ತರಿಸುವ ಮೂಲಕ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದು, ಇಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು.-ಅರವಿಂದರಾವ್ ದೇಶಪಾಂಡೆ,
ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ.ಜನಿವಾರ ತೆಗೆಯಲು ಒಪ್ಪದ ಪರೀಕ್ಷಾರ್ಥಿ ಬೀದರನ ವಿದ್ಯಾರ್ಥಿ ಸಿಇಟಿ ಪರೀಕ್ಷೆಯಿಂದ ವಂಚಿತಗೊಂಡಿದ್ದು, ಸರ್ಕಾರ ನ್ಯಾಯ ಒದಗಿಸುವ ಮೂಲಕ ಧೈರ್ಯ ತುಂಬಬೇಕು. ಮುಂದಿನ ಯಾವುದೇ ಪರೀಕ್ಷೆಯಲ್ಲಿಯೂ ಈ ರೀತಿಯ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಬೇಕು.- ಅರುಣ ಯಲಗುದ್ರಿ, ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕ.ಸಂವಿಧಾನದ ಅನುಚ್ಛೇದ 25 ರಲ್ಲಿ ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳಿಗನಗುಣವಾಗಿ ಲಾಂಛನ ಮತ್ತು ಜನೀವಾರ, ಶಿವಧಾರಗಳನ್ನು ಧರಿಸಲು ಅವಕಾಶ ಇದೆ. ಆದರೆ, ಇಲ್ಲಿ ಮಾತ್ರ ದುರುದ್ದೇಶದಿಂದ ಜನಿವಾರ ತೆಗೆಸಿರುವುದು ಧಾರ್ಮಿಕ ನಂಬಿಕೆಗೆ ಧಕ್ಕೆ ತರಲಾಗಿದ್ದು, ಘಟನೆಗೆ ಕಾರಣರಾದ ಅಧಿಕಾರಿಗಳನ್ನು ಮತ್ತು ಮೇಲಾಧಿಕಾರಿಗಳನ್ನು ಅಮಾನತುಗೊಳಿಸಬೇಕು.-ಆರ್.ಎನ್.ಸಿದ್ಧಾಂತಿ,
ಹಿರಿಯ ನ್ಯಾಯವಾದಿ.