ಕನ್ನಡಪ್ರಭ ವಾರ್ತೆ ಸಾಗರ
ಈ ಸಂದರ್ಭದಲ್ಲಿ ಮಲೆನಾಡು ರೈತ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಮಾತನಾಡಿ, ಕಳೆದ ಐದು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಅತ್ಯಂತ ಅವೈಜ್ಞಾನಿಕವಾಗಿದೆ. ಇದರಿಂದ ಸರಣಿ ಅಪಘಾತವಾಗುತ್ತಿದೆ. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಒಂದೊಂದು ಕಡೆ ಒಂದೊಂದು ನೀತಿ ಅನುಸರಿಸಲಾಗಿದೆ. ಕೆಲವರು ರಾಜಕೀಯ ಪ್ರಭಾವ ಬಳಸಿ ತಮ್ಮ ಜಾಗವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದರಿಂದ ರಸ್ತೆ ಕಿರಿದಾಗಿ ಅಪಘಾತಗಳು ಸಂಭವಿಸುತ್ತಿದೆ. ಸಂಸದರು ಪ್ರಭಾವ ಬೀರಿ ರಸ್ತೆ ಅಗಲೀಕರಣವನ್ನು ಕಡಿಮೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ಸಂಸದರು ಸ್ಪಷ್ಟನೆ ನೀಡಬೇಕು. ಮುಂದಿನ ಒಂದು ತಿಂಗಳಿನೊಳಗೆ ಕಾಮಗಾರಿ ಮುಗಿಸಿ ರಸ್ತೆ ಸರಿಪಡಿಸದೆ ಹೋದಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಿವೃತ್ತ ಅಭಿಯಂತರ ಶ್ರೀಪಾದ ಮಾತನಾಡಿ, ರಸ್ತೆ ಅಗಲೀಕರಣ ಮಾಡುವಾಗ ನಿಯಮ ಪಾಲನೆ ಮಾಡಿಲ್ಲ. ಒಂದೊಂದು ಕಡೆ ಒಂದೊಂದು ಅಳತೆ ಮಾಡಿದ್ದಾರೆ. ಅಗಲೀಕರಣ ಮಾಡದೆ ರಸ್ತೆ ಮಧ್ಯೆ ಡಿವೈಡರ್ ಹಾಕಿದ್ದಾರೆ. ಹಳೆ ಚರಂಡಿ ಕಿತ್ತು ಹೊಸ ಚರಂಡಿ ಮಾಡಿದ್ದಾರೆ. ಪಟ್ಟಣ ಮಿತಿಗೆ ಪೂರಕವಾದ ಡಿವೈಡರ್ ಹಾಕಿ ಎಂದು ಒತ್ತಾಯಿಸಿದರು.ಸಂಯುಕ್ತ ರೈತ ಸಂಘದ ಅಧ್ಯಕ್ಷ ಎಂ.ಬಿ.ಮಂಜಪ್ಪ ಮಾತನಾಡಿ, ಉಪವಿಭಾಗೀಯ ಕೇಂದ್ರವಾದ ಸಾಗರದಲ್ಲಿ ಅವೈಜ್ಞಾನಿಕವಾಗಿ ಡಿವೈಡರ್ ಹಾಕಿ ರಸ್ತೆ ಅಗಲೀಕರಣ ಮಾಡಲಾಗಿದೆ. ಪೊಲೀಸ್ ಉಪಾಧೀಕ್ಷಕರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಂದಿನ ಒಂದು ತಿಂಗಳಿನೊಳಗೆ ರಸ್ತೆ ಅಗಲೀಕರಣ ಲೋಪ ಸರಿಪಡಿಸುವ ಭರವಸೆ ನೀಡಿದ್ದಾರೆ. ನಿಗದಿತ ಸಮಯದಲ್ಲಿ ಅಗಲೀಕರಣ ಮುಗಿಸದೆ ಹೋದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ದೇವು ಆಲಳ್ಳಿ, ರಾಮಪ್ಪ ಶಿರವಾಳ, ಜಿನೇಶ್ ಕುಮಾರ್, ಭದ್ರೇಶ್ ಬಾಳಗೋಡು, ಗುಡ್ಡೆಮನೆ ನಾಗರಾಜ್, ಫ್ರಾಂಕಿ ಫರ್ನಾಂಡಿಸ್ ಇನ್ನಿತರರು ಹಾಜರಿದ್ದರು.